January 18, 2025
IMG-20180721-WA0047

 

ಬಂಟ್ವಾಳ ತಾಲೂಕು ಕಲ್ಲಡ್ಕ ಕೊಳಕ್ತೀರು ದಿ.ಶ್ರೀ ಕೃಷ್ಣ ಭಂಡಾರಿ ಮತ್ತು  ಶ್ರೀಮತಿ ಕಮಲಾಕ್ಷಿ ದಂಪತಿಯ ಪುತ್ರ ಡಾ॥ ಪ್ರಶಾಂತ್ ಕುಮಾರ್ ಕಲ್ಲಡ್ಕ ಅವರು 2018 ನೇ ಸಾಲಿನ  ಮಾಸ್ಟರ್ ಇನ್ ಡೆಂಟಲ್ ಸಜ೯ರಿ ಪರೀಕ್ಷೆ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.  ಇವರು ಮಂಗಳೂರಿನ  ಹೆಸರಾಂತ ದಂತ ವೈದ್ಯಕೀಯ ಕಾಲೇಜ್ ಎ.ಜೆ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಎಮ್ .ಡಿ.ಎಸ್‌ ಪದವಿಯನ್ನು ಪಡೆದಿದ್ದಾರೆ. ಬಾಯಿ ರೋಗ ಪತ್ತೆ ಶಾಸ್ತ್ರ ವಿಭಾಗ ದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎ.ಜೆ ದಂತ ವೈದ್ಯಕೀಯ ಮಹಾ ವಿದ್ಯಾಲಯ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದದ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಹೆಬ್ರಿ ಜವಾಹರ್ ನವೋದಯ ಶಾಲೆ ಯಲ್ಲಿ ಶಿಕ್ಷಣವನ್ನು ಪಡೆದ ಇವರು ಮಂಗಳೂರಿನ ದೇರಳಕಟ್ಟೆ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ 2007 ರಂದು  ಬಿ.ಡಿ.ಎಸ್‌ .ಪದವಿಯನ್ನು ಪಡೆದಿರುತ್ತಾರೆ. ಕಲ್ಲಡ್ಕದಲ್ಲಿ ಕಳೆದ ಹತ್ತು ವರ್ಷಗಳಿಂದ ದಂತ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಕೆಲಸ ಮತ್ತು ವ್ಯಾಸಂಗದ ಒತ್ತಡ ನಡುವೆಯೂ ಸಮಾಜ ಸೇವೆಯಲ್ಲಿ ಗುರುತಿಸಿ ಕೊಂಡಿರುವ ಡಾ॥ ಪ್ರಶಾಂತ್ ಕುಮಾರ್ ಬಂಟ್ವಾಳ ಭಂಡಾರಿ ಯುವ ವೇದಿಕೆಯ ಅಧ್ಯಕ್ಷರಾಗಿದ್ದಾರೆ. ಭಂಡಾರಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಬಂಟ್ವಾಳ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಲ್ಲಡ್ಕದ ಕೊಳಕ್ತೀರು ನಲ್ಲಿ ಪತ್ನಿ ಶ್ರೀಮತಿ ನವ್ಯ ಮಕ್ಕಳಾದ ಸುಹಾನಿ ಮತ್ತು ಹಿಮಾನಿ ಹಾಗೂ ತಾಯಿ ಜೊತೆ ವಾಸಿಸುತ್ತಿದ್ದಾರೆ.
ವ್ಖತ್ತಿ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.

-ಭಂಡಾರಿ ವಾತೆ೯

Leave a Reply

Your email address will not be published. Required fields are marked *