January 18, 2025
1

ಮೈ ಎಲ್ಲಾ ನೋವಾಗುತ್ತಿದೆಯೇ? ಈ ಮನೆಮದ್ದು ನಿಮ್ಮ ಮೈಯಲ್ಲಿರುವ ನೋವನ್ನು ತಕ್ಷಣ ನಿವಾರಿಸುತ್ತದೆ

ಹೆಚ್ಚು ಕೆಲಸ ಮಾಡಿದಾಗ ಮೈ ಎಲ್ಲಾ ನೋವಿನಿಂದ ಕೂಡಿರುತ್ತದೆ. ಯಾರಾದರೂ ಮಸಾಜ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದನಿಸುತ್ತದೆ. ಅಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ ಈ ಮನೆಮದ್ದು.

ಕೆಲವೊಮ್ಮೆ ದೇಹದಲ್ಲಿ ಆಯಾಸ ಮತ್ತು ನೋವು ಹೆಚ್ಚಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗಾದರೂ ಮೈಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಹಲವು ಬಾರಿ ಕಛೇರಿಯಿಂದ ಬಂದ ನಂತರ ಸುಸ್ತು ಅನಿಸುತ್ತದೆ. ಮೈ, ಕುತ್ತಿಗೆ, ಭುಜಗಳಲ್ಲೆಲ್ಲಾ ನೋವು ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಈ ನೋವು ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ ಯಾವ ಕೆಲಸ ಮಾಡಲೂ ಆಗುವುದಿಲ್ಲ, ಹಾಗೆಯೇ ಮಲಗಿ ಬಿಡೋಣ ಅನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಮದ್ದುಗಳ ಸಹಾಯದಿಂದ, ದೇಹದ ಆಯಾಸ ಮತ್ತು ನೋವನ್ನು ನಿವಾರಿಸಬಹುದು.

ಅರಿಶಿನ ಸೇವನೆ

ದೇಹದ ನೋವನ್ನು ಹೋಗಲಾಡಿಸಲು ಅರಿಶಿನ ಪ್ರಯೋಜನಕಾರಿಯಾಗಿದೆ. ಅರಿಶಿನದಲ್ಲಿ ಉರಿಯೂತ ನಿವಾರಕ ಗುಣವಿದ್ದು, ದೇಹದ ನೋವನ್ನು ಹೋಗಲಾಡಿಸುತ್ತದೆ. ಮೈ ಕೈ ಎಲ್ಲಾ ನೋವಿದ್ದಾಗ ಒಂದು ಲೋಟ ಹಾಲಿಗೆ ಅರ್ಧ ಚಮಚ ಅರಿಶಿನವನ್ನು ಮಿಕ್ಸ್‌ ಮಾಡಿ ಕುಡಿಯಿರಿ.

ರಾತ್ರಿ ಮಲಗುವ ಮುನ್ನ ಈ ಹಾಲನ್ನು ಸೇವಿಸಿ. ಬೇಕಾದರೆ ರುಚಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಅರಿಶಿನದ ಹಾಲು ದೇಹದ ಆಯಾಸ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

​ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಬಳಸಲು, ಸ್ನಾನದ ನೀರನ್ನು ಬೆಚ್ಚಗಾಗಿಸಿ, ಅದಕ್ಕೆ ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಸೇರಿಸಿ. ನಂತರ ಈ ನೀರಿನಿಂದ ಸ್ನಾನ ಮಾಡಿ. ಈ ಪರಿಹಾರವನ್ನು ಮಾಡುವುದರಿಂದ ದೇಹದ ಆಯಾಸ ಮತ್ತು ನೋವು ಕಡಿಮೆಯಾಗುತ್ತದೆ.

​ಶುಂಠಿ

ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದ ನೋವು ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿಯ ಸೇವನೆಯಿಂದ ದೇಹದ ಉರಿಯೂ ಕಡಿಮೆಯಾಗುತ್ತದೆ.

ನಿಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸಲು, 2 ಇಂಚಿನ ಶುಂಠಿಯ ತುಂಡನ್ನು ತೆಗೆದುಕೊಳ್ಳಿ. ಇದನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರು ಅರ್ಧ ಉಳಿದಿರುವಾಗ, ಗ್ಯಾಸ್‌ ಆಫ್‌ ಮಾಡಿ, ಸ್ವಲ್ಪ ತಣಿದಾಗ ಆ ನೀರನ್ನು ಕುಡಿಯಿರಿ.

ನಿಮಗೆ ಶುಂಠಿ ಕುದಿಸಿದ ನೀರನ್ನು ಕುಡಿಯಲು ಇಷ್ಟವಾಗದಿದ್ದರೆ, ಚಹಾ ಕುದಿಯುವಾಗ ಒಂದು ತುಂಡು ಶುಂಠಿಯನ್ನು ಹಾಕಿ ಇದು ಚಹಾಕ್ಕೆ ವಿಭಿನ್ನ ರುಚಿಯನ್ನೂ ನೀಡುತ್ತದೆ. ಶುಂಠಿಯ ಆರೋಗ್ಯಕಾರಿ ಗುಣಗಳು ನಿಮ್ಮ ದೇಹವನ್ನು ಸೇರುತ್ತದೆ.

ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮಾಡಿ

ದೇಹಕ್ಕೆ ಮಸಾಜ್ ಮಾಡುವುದರಿಂದ ಸ್ನಾಯು ನೋವು ಕೂಡ ನಿವಾರಣೆಯಾಗುತ್ತದೆ. ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಈ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಕೆಲವೇ ನಿಮಿಷಗಳಲ್ಲಿ ದೇಹದ ಆಯಾಸ ಸುಲಭವಾಗಿ ಮಾಯವಾಗುತ್ತದೆ. ಮಲಗುವ ಮುನ್ನ ಈ ಮಸಾಜ್ ಮಾಡಿದರೆ ದೇಹಕ್ಕೆ ತುಂಬಾ ಲಾಭದಾಯಕವಾಗಿದೆ. ಚೆನ್ನಾಗಿ ನಿದ್ದೆಯೂ ಬರುತ್ತದೆ.

ಹೆಚ್ಚು ನೀರು ಕುಡಿಯಿರಿ

ದೇಹದಲ್ಲಿ ನೀರಿನ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು ನೀರಿನ ಕೊರತೆಯು ದೇಹದಲ್ಲಿ ಆಯಾಸ ಮತ್ತು ನೋವನ್ನು ಹೆಚ್ಚಿಸುತ್ತದೆ. ನೀರು ಕುಡಿಯುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ.

ದಿನವಿಡೀ ರೋಗಗಳಿಂದ ದೂರವಿರಲು, ದಿನಕ್ಕೆ ಸುಮಾರು 3-4 ಲೀಟರ್ ನೀರನ್ನು ಕುಡಿಯಬೇಕು. ಜ್ವರ ಬಂದ ಸಮಯದಲ್ಲೂ ಹೆಚ್ಚು ನೀರನ್ನು ಕುಡಿಯಬೇಕು. ದೇಹವನ್ನು ನಿರ್ಜಲಿಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ದೇಹದಿಂದ ವಿಷವನ್ನು ತೆಗೆದುಹಾಕಲು ನೀರು ಸಹಾಯ ಮಾಡುತ್ತದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

 

 

 

 

Leave a Reply

Your email address will not be published. Required fields are marked *