September 20, 2024

ಬೇಸಿಗೆಯಲ್ಲಿ ಪುದಿನಾ ಮಿಸ್‌ ಮಾಡ್ಲೇಬೇಡಿ ! ಆರೋಗ್ಯದ ಸಮಸ್ಯೆಗೆ ರಾಮಬಾಣ ಈ ಪುದಿನಾ

ಬೇಸಿಗೆಕಾಲ ಆರಂಭವಾಯಿತು ಅಂದ್ರೆ ನಾವು ನಮ್ಮ ದೇಹದ ಬಗ್ಗೆ ಹೆಚ್ಚಿನ ಗಮನ ಕೊಡಲೇಬೇಕು ಅದರಲ್ಲೂ ಮುಖ್ಯವಾಗಿ ದೇಹ ಡಿ ಹೈಡ್ರೇಟ್ ಆಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ದ್ರವರೂಪದ ಆಹಾರವನ್ನು ಸೇವಿಸಬೇಕು. ನಾವು ನಮ್ಮ ಜೀವನ ಶೈಲಿಯಲ್ಲಿ ಆಹಾರ ಪದ್ಧತಿಯಲ್ಲಿ ಮಾಡಿಕೊಂಡಿರುವ ಸಾಕಷ್ಟು ಬದಲಾವಣೆಗಳು ಇಂದು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಅನಾರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಕೆಲವು ಸೊಪ್ಪು ಹಣ್ಣು ಮೊದಲಾದವುಗಳನ್ನು ಸೇವಿಸುವುದು ಅತ್ಯಗತ್ಯ. ಬೇಸಿಗೆ ಕಾಲದಲ್ಲಿ ಅತಿ ಮುಖ್ಯವಾಗಿ ಸೇವಿಸಬೇಕಾದ ಒಂದು ಸೊಪ್ಪು ಪುದೀನಾ.
ಪುದಿನಾ ಸೊಪ್ಪು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಭಾರತೀಯ ಪಾಕ ಪದ್ದತಿಯಲ್ಲಿ ಪುದಿನಾವನ್ನು ಪರಿಮಳಕ್ಕಾಗಿಯೂ ಬಳಸುತ್ತಾರೆ. ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಪುದಿನಾ ಸೊಪ್ಪು ಅಥವಾ ಪುದಿನಾದಿಂದ ತಯಾರಿಸಿರುವಂತಹ ಅಡುಗೆ ಪದಾರ್ಥಗಳನ್ನ ಬೇಸಿಗೆ ಕಾಲದಲ್ಲಿ ಬಳಸುವುದು ಅತಿ ಮುಖ್ಯ. ಪುದಿನಾ ಸೇವನೆ ಮಾಡುವುದರಿಂದ ಏನೆಲ್ಲಾಪ್ರಯೋಜನಗಳಿವೆ ನೋಡೋಣ.

ಒತ್ತಡ ನಿಯಂತ್ರಕ

ರಿಫ್ರೆಶ್ಮೆಂಟ್ ಗೆ ಪುದಿನಾ ಅತ್ಯುತ್ತಮ ಆಯ್ಕೆ. ಪುದಿನಾದ ಸುವಾಸನೆ ಮನಸ್ಸು ಹಾಗೂ ದೇಹವನ್ನು ಆಹ್ಲಾದಕರವಾಗಿ ಇಡಬಲ್ಲದು. ಪುದಿನಾದಲ್ಲಿ ಅಪೋಪ್ಟೊಜೆನಿಕ್ ಚಟುವಟಿಕೆಯು ರಕ್ತದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ದೇಹ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಂತಹ ನೈಸರ್ಗಿಕ ಪ್ರತಿಕ್ರಿಯೆಗೆ ಒಳಗಾಗುತ್ತದೆ. ಹಾಗಾಗಿ ಪುದಿನಾ ಸೊಪ್ಪು ಸೇವಿಸುವುದು ಅತ್ಯಂತ ಒಳ್ಳೆಯದು.

ತ್ವಚೆಯ ಆರೋಗ್ಯಕ್ಕೂ ಪುದಿನಾ ಬೆಸ್ಟ್:

ಪುದಿನಾ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ರೋಸ್ಮರಿನಿಕ್ ಆಮ್ಲ ಇರುತ್ತದೆ ಇದರಿಂದ ಚರ್ಮದಲ್ಲಿ ಅಥವಾ ತ್ವಚೆಯಲ್ಲಿ ರಕ್ತ ಪರಿಚಲನೆ ಸುಧಾರಣೆಯಾಗಲು ಸಹಾಯವಾಗುತ್ತದೆ. ಚರ್ಮವನ್ನು ಪುದಿನಾ ಎಲೆಗಳು ಹೈಡ್ರೇಟ್ ಮಾಡಬಲ್ಲವು. ಚರ್ಮದಲ್ಲಿ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆದು ಸುಕ್ಕು ಸೂಕ್ಷ್ಮ ರೇಖೆಗಳು ಮೊದಲದ ಪರಿಚಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಪುದೀನಾದಲ್ಲಿ ಸ್ಯಾಲಿಸಿಲಿಕ್ ಆಮ್ಲ, ವಿಟಮಿನ್ ಎ ಮೊದಲಾದ ಜೀವಸತ್ವಗಳು ಇದ್ದು ಚರ್ಮದಲ್ಲಿ ಮೇಧೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.

ತೂಕ ಇಳಿಕೆಗೆ ರಾಮಬಾಣ:

ಪುದಿನಾದಲ್ಲಿ ಸಾರಭೂತ ತೈಲಗಳು (ಎಸ್ಸೆನ್ಸಿಯಲ್ ಆಯಿಲ್) ಇದ್ದು ಪಿತ್ತರಸದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇದು ಜೀರ್ಣಕಾರಿ ಕಿಣ್ವಗಳನ್ನೂ ಪ್ರಚೋದಿಸುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಆಹಾರದಲ್ಲಿನ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ಆಹಾರದಲ್ಲಿ ಬಳಸಲಾದ ಪುದಿನಾ ಸಹಾಯ ಮಾಡುತ್ತದೆ. ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಂಡರೆ ಚಯಾಪಚಯ ಕ್ರಿಯೆಯು ಸುಧಾರಿಸುತ್ತದೆ. ಇದರಿಂದಾಗಿ ತೂಕ ಇಳಿಸಿಕೊಳ್ಳುವುದಕ್ಕೂ ಕೂಡ ಸಹಾಯಕವಾಗುತ್ತದೆ.

ಕೆಮ್ಮು ಕಫ ನೆಗಡಿ ಎಲ್ಲದಕ್ಕೂ ಉತ್ತಮ ಪರಿಹಾರ

ಪುದಿನಾ ಮೆಂಥೋಲ್ ಅಂಶವನ್ನು ಹೊಂದಿದೆ. ಆರೋಮ್ಯಾಟಿಕ್ ಡಿಕೊಂಜಸ್ಟೆಂಟ್ ಆಗಿರುವುದರಿಂದ ಕಫ ಕರಗಿ ನೀರಾಗಲು ಸಹಾಯ ಮಾಡುತ್ತದೆ. ಇದರಿಂದ ಎದೆ ಭಾಗದಲ್ಲಿ ಗಟ್ಟಿಯಾಗಿರುವ ಕಫ ಕೂಡ ಲೋಳೆಯಾಗಿ ಹೊರಗಡೆ ಬರಲು ಸಹಾಯಕವಾಗುತ್ತದೆ. ಮಕ್ಕಳಿಗೂ ಕೂಡ ಪುದಿನಾ ರಸದ ಜೊತೆಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಕೆಮ್ಮು ಕಫ ನೆಗಡಿ ಇರುವ ಸಮಯದಲ್ಲಿ ಕೊಡಬಹುದು. ಜೊತೆಗೆ ಪುದಿನಾ ದಿಂದ ತಯಾರಿಸಿದ ಅಡುಗೆ ಪದಾರ್ಥಗಳನ್ನು ಕೂಡ ಸೇವಿಸಿದರೆ ಒಳ್ಳೆಯದು.

ಬಿಪಿ ನಿಯಂತ್ರಿಕ:

ನೈಸರ್ಗಿಕವಾಗಿ ಇರುವಂತಹ ಮೆಂಥೊಲ್ ಅಂಶ ಸ್ವಾಭಾವಿಕವಾಗಿ ಅಧಿಕ ರಕ್ತವನ್ನು ಸುಧಾರಿಸುತ್ತದೆ. ಅಪಧಮನಿಯ ಸಿಸ್ಟೋಲಿಕ್ ಹಾಗೂ ಡಯಾಸ್ಟೋಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪುದಿನಾ ಗಿಡಮೂಲಿಕೆಯಿಂದ ತಯಾರಿಸುವಂತಹ ಚಹಾ ಕುಡಿದರೆ ಮನಸ್ಸು ಆಹ್ಲಾದಕರವಾಗಿರುತ್ತದೆ. ಇಷ್ಟೇ ಅಲ್ಲದೆ ಪುದಿನಾ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಬೇಸಿಗೆಯಲ್ಲಿ ಅತಿಯಾದ ಉಷ್ಣದಿಂದ ಕೆಲವರಿಗೆ ಜ್ವರ, ಶೀತ ಬರುವುದು ಸಹಜ. ಆ ಸಮಯದಲ್ಲಿ ಮೀಟ್ ಚಹಾ ಕುಡಿಯಬಹುದು. ಇನ್ನು ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಅಥವಾ ಡಿ ಹೈಡ್ರೇಶನ್ ಸಮಸ್ಯೆಯಾಗುತ್ತದೆ. ಆ ಸಮಯದಲ್ಲಿ ನಿಮಗೆ ಸಪ್ಪೆಯಾದ ನೀರು ಕುಡಿಯಲು ಬೇಸರ ಎನಿಸಿದರೆ ನೀವು ಕುಡಿಯುವ ನೀರಿಗೆ ಒಂದೆರಡು ಪುದಿನಾ ಎಲೆಗಳನ್ನು ಹಾಕಿಡಿ. ಪುದಿನಾದ ಪರಿಮಳ ಹಾಗೂ ಅದರಲ್ಲಿ ಇರುವಂತಹ ಜೀವಸತ್ವಗಳು ದೇಹವನ್ನು ಸೇರುತ್ತವೆ. ಪುದಿನಾ ರಸದಿಂದ ತಯಾರಾದ ಜ್ಯೂಸ್ ಕೂಡ ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪನ್ನು ನೀಡುತ್ತದೆ.

ಇಂದು ವೈದ್ಯಕೀಯ ಜಗತ್ತಿನಲ್ಲಿಯು ಬಳಸಲಾಗುತ್ತಿರುವಂತಹ ಪುದಿನಾವನ್ನು ನಮ್ಮ ಪೂರ್ವಜರೂ ಕೂಡಾ ಬಳಸಿಕೊಂಡು ಬಂದಿರುವ ಗಿಡಮೂಲಿಕೆಯೇ! ಈಗಲೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪುದಿನಾದಂತಹ ಸೊಪ್ಪು ಸೇವನೆ ಮುಖ್ಯ. ವೈದ್ಯರೂ ಕೂಡ ಇದನ್ನೇ ಸಲಹೆ ಮಾಡುತ್ತಾರೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: BY

Leave a Reply

Your email address will not be published. Required fields are marked *