January 18, 2025
Sceintist Professor Gayathri Devaraja
ಮಾಹಿತಿ  ತಂತ್ರಜ್ಞಾನ  ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ  ಮಂಡಳಿ ನೀಡುವ 2018 ನೇ ಸಾಲಿನ  ಡಾ.ಕಲ್ಪನಾ ಚಾವ್ಲಾ ಮಹಿಳಾ ಮತ್ತು ಯುವ ವಿಜ್ಞಾನಿ ಪ್ರಶಸ್ತಿಗೆ  ಕೊಪ್ಪ ದಿವಂಗತ  ಶ್ರೀ   ಶೀನಾ ಭಂಡಾರಿ ಮತ್ತು ಉಡುಪಿ ಕುಂಜಿಬೆಟ್ಟು ಶ್ರೀಮತಿ  ರಮಣಿ ಶೀನಾ ಭಂಡಾರಿ ದಂಪತಿಯ ಪುತ್ರಿ  ಹಾಗೂ  ದಾವಣಗೆರೆ  ವಿಶ್ವ ವಿದ್ಯಾನಿಲಯದ ಮೈಕ್ರೋ ಬಯಾಲಜಿ ವಿಭಾಗದ  ಡಾ. ಪ್ರೊಫೆಸರ್ ಗಾಯತ್ರಿ ದೇವರಾಜ ಆಯ್ಕೆಯಾಗಿದ್ದಾರೆ.
 
 
 
 
ಪ್ರಶಸ್ತಿಗೆ ಆಯ್ಕೆ ಮಾಡಲು  ಭಾರತ ರತ್ನ  ಪ್ರೊಫೆಸರ್ ಸಿ.ಎನ್ .ಆರ್.ರಾವ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು  ಸರ್.ಸಿ.ವಿ.ರಾಮನ್  ಪ್ರೊ. ಸತೀಶ್ ಧವನ್ ಮತ್ತು ಡಾ.ಕಲ್ಪನಾ ಚಾವ್ಲಾ ಪ್ರಶಸ್ತಿಗಳು ಒಂದು ಲಕ್ಷ  ನಗದು ಹಾಗೂ ಪ್ರಶಸ್ತಿ ಪತ್ರ  ಒಳಗೊಂಡಿದೆ  ಪ್ರಶಸ್ತಿ ಪ್ರಧಾನ ಸಮಾರಂಭವು ಅಕ್ಟೋಬರ್.22 ,2019ರಂದು ಸಂಜೆ 4:00 ಗಂಟೆಗೆ  ಬೆಂಗಳೂರಿನ ಟಾಟಾ ಸಭಾಂಗಣದಲ್ಲಿ ನಡೆಯಲಿದೆ .
 
 
ಡಾ. ಗಾಯತ್ರಿ ದೇವರಾಜ ಅವರು ಉಡುಪಿಯಲ್ಲಿ ಜನಿಸಿದ್ದು ಕೊಪ್ಪದಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು    ಪಡೆದು  ಶೃಂಗೇರಿಯಲ್ಲಿ  ವಿಜ್ಞಾನ ಪದವಿ ಮುಗಿಸಿ ದಾವಣಗೆರೆಯ ಕುವೆಂಪು ವಿಶ್ವವಿದ್ಯಾಲಯದಲ್ಲಿ  ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಮ್ .ಎಸ್ಸಿ . ಸ್ನಾತಕೋತ್ತರ ಪಡೆದು ಮಂಗಳೂರು  ವಿಶ್ವವಿದ್ಯಾಲಯದಿಂದ  2004 ರಲ್ಲಿ  ಪಿ.ಹೆಚ್ .ಡಿ. ಪಡೆದಿದ್ದಾರೆ ಇವರು ವೃತ್ತಿ ಜೀವನವನ್ನು  1997 ರಿಂದ  2006 ರವರೆಗೆ ಉಪನ್ಯಾಸಕ ಮತ್ತು  ಹಿರಿಯ ಶ್ರೇಣಿ  ಉಪನ್ಯಾಸಕರಾಗಿ  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ  ನಂತರ ಕುವೆಂಪು  ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ ಕಾರ್ಯನಿರ್ವಹಿಸಿದ್ದಾರೆ ದಾವಣಗೆರೆ  ವಿಶ್ವವಿದ್ಯಾಲಯದಲ್ಲಿ  ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
 
 
ಡಾ. ಗಾಯತ್ರಿ ಯವರು ವಿಭಾಗದ  ಅಧ್ಯಕ್ಷರಾಗಿ  ನಿರ್ದೇಶಕರಾಗಿ ಸಿಂಡಿಕೇಟ್ ಮತ್ತು  ಶೈಕ್ಷಣಿಕ ಮಂಡಳಿ ಸದಸ್ಯರಾಗಿ  ವಿಜ್ಞಾನ  ಮತ್ತು ತಂತ್ರಜ್ಞಾನ ಡೀನ್  ಆಗಿ ದಾವಣಗೆರೆ    ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಹೆಚ್ಚು ಕ್ರಿಯಾಶೀಲ ಸಂಶೋಧಕರು ಮತ್ತು ಪ್ರತಿಭಾವಂತ ಉಪನ್ಯಾಸಕರಾಗಿರುತ್ತಾರೆ.  ಜೈವಿಕ ತಂತ್ರಜ್ಞಾನ  ಪ್ರಯೋಗಲಯದಲ್ಲಿ ಜಲಕೃಷಿ ವಿಭಾಗ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಇವರು ನಡೆಸಿದ ಪಿ.ಹೆಚ್.ಡಿ. ಸಂಬಧಿತ  ಸಂಶೋಧನೆಯಲ್ಲಿ  ಅಫನೋಮೈಸಿಸ್ ಇನ್ವೆಡನ್ಸ್ ಎಂಬ ರೋಗಾಣುವಿಗೆ ( ಎಪಿಜುವಾಟಿಕ್ ಅಲ್ಸರೇಟಿವ್ ಸಿಂಡ್ರೋಮ್  ರೋಗಕ್ಕೆ  ಕಾರಣವಾಗಿರುವ ಜೀವಿ) ಮೋನೊಕ್ಲೊನಲ್  ಆ್ಯಂಟಿಬಾಡಿಯನ್ನು ಪ್ರಪಂಚದಲ್ಲೇ  ಮೊದಲ ಬಾರಿಗೆ ಉತ್ಪಾದಿಸಿದ್ದು ವಿಶ್ವಮಾನ್ಯತೆ ಗಳಿಸಿದೆ.  ಈ ರೋಗ ಪತ್ತೆಗೆ ತಯಾರಿಸಲಾದ ಡೈಯೋಗ್ನಾಸ್ಟಿಕ್ ಕಿಟ್  ಬಹಳ ಬೇಡಿಕೆ ಇದೆ. ಇದು ಸರಳ  ಶೀಘ್ರ ನಿರ್ದಿಷ್ಟ  ಹಾಗೂ  ಸ್ಪಷ್ಟವಾಗಿ  ರೈತನೇ ತನ್ನ ಹೊಲದಲ್ಲೇ ರೋಗವನ್ನು  ಪತ್ತೆ  ಹಚ್ಚಿ  ರೋಗ  ನಿರ್ವಹಣೆಗೆ ಕ್ರಮ  ಕೈಗೊಳ್ಳಬಹುದಾಗಿದೆ. ತದನಂತರ  ಡಾ. ಗಾಯತ್ರಿ ಯವರು ವಿಶಿಷ್ಟ  ಪ್ರೊಬಯೋಟಿಕ್ ಗಳನ್ನು  ಬಳಸಿ ಕರುಳಿನ ಕ್ಯಾನ್ಸರ್‌  ತಡೆಗಟ್ಟವಿಕೆ  ಗ್ಲುಟನ್ ಹೈಡ್ರೊಲೈಸಿಂಗ್   ಬ್ಯಾಕ್ಟೀರಿಯಾ  ಅಭಿವೃದ್ಧಿ ಪಡಿಸುವ ( ಸಿಲಿಯಾಕ್ ಕಾಯಿಲೆ ) ತಂತ್ರಜ್ಞಾನ ರೂಪಿಸಿ ಅಪ್ಲಟಾಕ್ಸಿನ್ ಅನ್ನು ವಿಷರಹಿತವನ್ನಾಗಿಸುವುದು ಲ್ಯಾಕ್ಟೋಸ್  ಇನ್ಪಾಲೆರೆನ್ಸ್  ಇತ್ಯಾದಿ  ಸಂಶೋಧನಾ ಕಾರ್ಯಗಳನ್ನು ನಿರ್ವಹಿಸಿರುತ್ತಾರೆ. ಪಾಲಿಕ್ಲೋರಿನೇಟೆಡ್ ಬೈಫಿನೈಲ್ ನಂತಹ ವಿಷಕಾರಕ ರಾಸಾಯನಿಕಗಳನ್ನು  ಜಲಮೂಲದಿಂದ ಮುಕ್ತಗೊಳಿಸಲು ಹಲವು  ಸ್ಥಳೀಯ  ಉಪಯುಕ್ತ  ಬ್ಯಾಕ್ಟೀರಿಯಾಗಳನ್ನು  ಉಪಯೋಗಿಸಿ ಯಶಸ್ವಿಯಾಗಿದ್ದಾರೆ  ಹಾಗೆಯೇ  ಹೆಚ್ಚು  ಅಧ್ಯಯನಕ್ಕೊಳಪಡದ ಕಲ್ಲು ಹೂವಿನಲ್ಲಿರುವ ಬ್ಯಾಕ್ಟೀರಿಯಾ  ಸಂಕುಲಗಳ ಜೈವಿಕ  ಉಪಯೋಗಗಳ ಬಗ್ಗೆ  ಅಧ್ಯಯನ ಕೈಗೊಂಡಿದ್ದಾರೆ  ಪ್ರಸ್ತುತ  ದಾವಣಗೆರೆ ವಿಶ್ವವಿದ್ಯಾಲಯದ  ಸೂಕ್ಷ್ಮಾಣು ಜೀವಶಾಸ್ತ್ರ  ವಿಭಾಗದಲ್ಲಿ ವಿಶಿಷ್ಟ ಪ್ರೋಬಯೋಟಿಕ್ ಸಂಶೋಧನಾಲಯವನ್ನು  ಯುಜಿಸಿ.ಡಿಬಿಟಿ.  ಡಿಎಇ – ಬಿ ಆರ್ ಎನ್ ಎಸ್.   ವಿಜಿಎಸ್ ಟಿ  – ಆರ್ ಎಫ್  ಟಿ ಟಿ  ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ  ಅಭಿವೃದ್ಧಿಪಡಿಸಿದ್ದಾರೆ.
 
 
ಪ್ರೊ.  ಗಾಯತ್ರಿದೇವರಾಜ ಇವರು 42 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ  ವೃತ್ತಿಪರ ನಿಯತ ಕಾಲಿಕಗಳಲ್ಲಿ ಸಂಶೋಧನಾ  ಪ್ರಬಂಧಗಳನ್ನು ಪ್ರಕಟಿಸಿರುತ್ತಾರೆ  (ಸ್ಟ್ರಿಂಜರ್,  ಎಲ್ಸ್ ವೇರ್ ,  ವೈಲಿ ,   ಸ್ಟ್ರಿಂಜರ್ ನೇಚರ್ , ಸ್ಪಾಂಡಿಡೋಸ್ ಇತ್ಯಾದಿ ) ಎಲ್ಸ್ ವೇರ್ ಪ್ರಕಟಿಸುವ  ಮೆಂಟಲ್ ಹೆಲ್ತ್  ಮತ್ತು ಪ್ರಿವೆಂಶನ್ ಎಂಬಾ  ಅತ್ಯುನ್ನತ  ನಿಯತಕಾಲಿಕೆಯಲ್ಲಿ ಇವರ ಒಂದು  ಸಂಶೋಧನಾ  ಲೇಖನ  ಒಂದು ವರ್ಷಕ್ಕೂ ಹೆಚ್ಚು  ಅವಧಿಗೆ ಅತಿ ಹೆಚ್ಚು  ಓದಲ್ಪಟ್ಟ ಪ್ರಬಂಧ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ  40ಕ್ಕೂ  ಹೆಚ್ಚು  ಸಂಶೋಧನಾ   ಪ್ರಬಂಧಗಳನ್ನು  ಅನೇಕ  ಸಮಾವೇಶಗಳಲ್ಲಿ  ಮಂಡಿಸಿ ಹಲವು ಜನಪ್ರಿಯ  ಲೇಖನಗಳನ್ನು  ಇತರ ಪ್ರಕಟನೆಗಳನ್ನು ಹೊರತಂದಿದ್ದಾರೆ .ಇತರ ಸಂಶೋಧನಾ ಮಾರ್ಗದರ್ಶನದಲ್ಲಿ  ಆರು ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ ಹಾಗೂ ಮೂರು ಮಂದಿ ಪ್ರಸ್ತುತ  ಅಧ್ಯಯನ ಮಾಡುತ್ತಿದ್ದಾರೆ  
ಡಾ.ಪ್ರೊ. ಗಾಯತ್ರಿ ದೇವರಾಜ  ಹಲವು  ಅಂತರರಾಷ್ಟ್ರೀಯ  ಸಂಸ್ಥೆಯ (ಅಮೇರಿಕನ್ ಸೊಸೈಟಿಆಪ್ ಮೈಕ್ರೋ ಬಯಾಲಜಿ  ಕೊರಿಯನ್ ಸೊಸೈಟಿ  ಫಾರ್  ಮೈಕ್ರೋ ಬಯಾಲಜಿ  ಮತ್ತು  ಬಯೋ ಟೆಕ್ನಾಲಜಿ ) ಹಾಗೂ  ರಾಷ್ಟ್ರೀಯ  ಸಂಸ್ಥೆ ( ಎ.ಎಂ.ಐ.ಎಸ್‌ . ವಿ.ಎ.ಕೆ.ಭಾರತೀಯ ವಿಜ್ಞಾನ  ಸಂಸ್ಥೆಯ ) ಸದಸ್ಯರಾಗಿದ್ದಾರೆ 
ಇವರ ಸಾಧನೆಗೆ ಹಲವಾರು ಗೌರವ ಪ್ರಶಸ್ತಿ ಗಳಿಸಿದ್ದಾರೆ  ಅವುಗಳಲ್ಲಿ  ಪ್ರಮುಖ ಕೆಲವೆಂದರೆ  ಅತ್ಯುತ್ತಮ  ಪ್ರಬಂಧ ಪ್ರಶಸ್ತಿ  ( ಎ.ಎಂ.ಐ. – 2003 , ಓವರ್ ಸೀಸ್  ಫೆಲೋಶಿಪ್  ಅಂತರರಾಷ್ಟ್ರೀಯ  ವ್ಯಾಕ್ಸಿನ್ ಸಂಸ್ಥೆ  ಸಿಯೋಲ್ ದಕ್ಷಿಣಕೊರಿಯಾ ) ಅತ್ಯುತ್ತಮ ವಾರ್ಷಿಕ ಯೋಜನೆ  (2013 ,2018) ಕೆ ಎಸ್ ಸಿ ಎಸ್‌  ಟಿ  ಇತ್ಯಾದಿ  ಜವಹರಲಾಲ್  ನೆಹರು  ವಿಶ್ವವಿದ್ಯಾಲಯ ನವದೆಹಲಿ  ಯಲ್ಲಿ  ನಡೆದ  ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ (2011)  ನೊಬೆಲ್  ಪ್ರಶಸ್ತಿ  ವಿಜೇತ ಪ್ರೊ.ಅಡಾಯೊನತ್ ಇವರೊಂದಿಗೆ  ಸಂವಾದ  ನಡೆಸಿರುತ್ತಾರೆ ಮತ್ತು  ಐವಿಎ ಸಿಯೋಲ್  ದಕ್ಷಿಣ ಕೊರಿಯದಲ್ಲಿ ನಡೆದ ವಿರುಲೆನ್ಸ್ ರಿವರ್ ಷನ್  ಸಂವಾದದಿಂದ ಅತ್ಯುತ್ತಮ  ಅಂತರರಾಷ್ಟ್ರೀಯ  ಪ್ರತಿನಿಧಿ ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ .
 
 
ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಮತ್ತು ಮುಖ್ಯ ವಿಜ್ಞಾನಿ ಡಾ. ದೇವರಾಜ ಅವರ ಧರ್ಮಪತ್ನಿ  ಡಾ.ಪ್ರೊ.ಗಾಯತ್ರಿ ದೇವರಾಜ. ಇವರ ಮುದ್ದಿನ ಮಕ್ಕಳಾದ  ಕು.ಅಭಿಜ್ಞತನ್ವಿ ಮತ್ತು ಕು.ಒಲವುಸಿರಿ  ಜೊತೆಗೆ  ದಾವಣಗೆರೆಯಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. ಡಾ.ಪ್ರೊ ಗಾಯತ್ರಿ ದೇವರಾಜ ರವರ  
ವಿಜ್ಞಾನ  ಮತ್ತು  ತಂತ್ರಜ್ಞಾನ  ಕ್ಷೇತ್ರದಲ್ಲಿ  ಗಣನೀಯ ಸಂಶೋಧನೆ  ನಡೆಸಿದ ತಮ್ಮ  ಸಾಧನೆಗೆ ಭಾರತ  ದೇಶದ   ಅತ್ಯುನ್ನತ  ಪ್ರಶಸ್ತಿಗಳು ಒಲಿದು  ಬರಲಿ   ಅಂತರರಾಷ್ಟ್ರೀಯ ಮಟ್ಟದ  ಗೌರವಕ್ಕೆ   ಪಾತ್ರರಾಗಿ ಎಂದು  ಭಂಡಾರಿ ಕುಟುಂಬದ  ಮನೆ ಮನದ ಮಾತು  ಭಂಡಾರಿ   ವಾರ್ತೆ ಹಾರ್ದಿಕ ಶುಭ ಹಾರೈಸುತ್ತದೆ.
 
ಪ್ರೋ. ಗಾಯತ್ರಿ ದೇವರಾಜ ರವರ ಮೊಬೈಲ್ ಸಂಖ್ಯೆ: 7892795239
 
ಭಂಡಾರಿ ವಾರ್ತೆ

1 thought on “ಡಾ.ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನಿ ಪ್ರಶಸ್ತಿಗೆ ದಾವಣಗೆರೆ ವಿ.ವಿ.ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡಾ. ಪ್ರೊ. ಗಾಯತ್ರಿ ದೇವರಾಜ ಆಯ್ಕೆ

  1. ನಮ್ಮ ಸವಿತಾ ಸಮಾಜದ ಜನರಲ್ಲಿ ವೈದ್ಯಕೀಯ, ವೈಜ್ಞಾನದ ಜ್ಞಾನ ಅಪಾರವಾಗಿದೆ.ಅದು ಎಲ್ಲಾ ಜನರಿಗೆ ಮದಲು ತಿಳಿಯಲಿ. ನಿಮಗೆ ಅಭಿನಂದನೆಗಳು ಮೇಡಂ.

Leave a Reply

Your email address will not be published. Required fields are marked *