January 18, 2025
2-boiled-egg-and-milk
 ಮೊದಲನೆಯದಾಗಿ ನಾವು ಶಾಕಾಹಾರವೆಂದರೆ ಏನು? ಮಾಂಸಾಹಾರವೆಂದರೆ ಏನು? ಎಂಬ ವಿಷಯದ ಬಗ್ಗೆ ಪಂಡಿತರು ಹೇಳಿದ ವಿವರಣೆಯನ್ನು ಪರಿಶೀಲಿಸೋಣ.
 ಭಗವಂತನ ಪ್ರೇರಣೆಯಿಂದ (ಭಗವಂತನು ಇಷ್ಟವಿಲ್ಲದವರು ಬದಲಾಯಿಸಿ ಓದಿಕೊಳ್ಳಿ) ಈ ಭೂಮಿಯ ಮೇಲೆ ಚರಾಚರ ಸೃಷ್ಟಿ (ಜನನ) ಎನ್ನುವುದನ್ನು ನಾಲ್ಕು ವಿಧಗಳಾಗಿ ವಿಭಜಿಸಿ ಅರ್ಥ ಮಾಡಿಕೊಳ್ಳಲಾಗಿದೆ.
ಇವುಗಳನ್ನು,
1. ಜರಾಯುಜಗಳು
2. ಅಂಡಜಗಳು
3. ಸ್ವೇದಜಗಳು
4. ಉದ್ಭೀಜಗಳು
 ಎಂದು ಕರೆಯುತ್ತಾರೆ.
1. ಜರಾಯುಜಗಳು:  ಗರ್ಭದಲ್ಲಿನ ಪಿಂಡವನ್ನು ಆವರಿಸಿ ಮಾಯೆಯಿಂದ ಹುಟ್ಟಿರುವವು. ಮನುಷ್ಯರು, ಪಶುಗಳು.
2. ಅಂಡಜಗಳು: ಮೊಟ್ಟೆಯಿಂದ ಹುಟ್ಟುವ ಪಕ್ಷಿಗಳು, ಹಾವುಗಳು ಮೊದಲಾದವು.
3. ಸ್ವೇದಜಗಳು: ಬೆವರಿನಿಂದ ಹುಟ್ಟುವ ಸೊಳ್ಳೆಗಳು, ತಿಗಣೆಗಳು ಮೊದಲಾದವು.
4. ಉದ್ಭೀಜಗಳು: ಬೀಜವನ್ನು ಒಡೆದು ಜನ್ಮಿಸುವ ವೃಕ್ಷ, ಬಳ್ಳಿಗಳು ಮೊದಲಾದವು.
ಇನ್ನು ಇದರಲ್ಲಿ ಎರಡು ವಿಧಗಳು: “ಚರ ಸೃಷ್ಟಿ”, “ಅಚರ ಸೃಷ್ಟಿ”.
   ಜರಾಯುಜಗಳು, ಅಂಡಜಗಳು, ಸ್ವೇದಜಗಳು ” ಚರ ಸೃಷ್ಟಿ ” ಎಂದು, ಉದ್ಭೀಜಗಳು ಮಾತ್ರ “ಅಚರ ಸೃಷ್ಟಿ” ಎಂದು ಹೇಳಲಾಗಿದೆ. “ಚರ” ಎಂದರೆ ಕದಲುವಂತಹವು. ಇದಕ್ಕೆ ಉದಾಹರಣೆ ಮನುಷ್ಯರು, ಪಶುಗಳು, ಪಕ್ಷಿಗಳು, ಹಾವುಗಳು, ಸೊಳ್ಳೆಗಳು, ತಿಗಣೆಗಳು, ಕ್ರಿಮಿ ಕೀಟಗಳು, ಇವು ಚಲಿಸುವಿಕೆಯನ್ನು ಹೊಂದಿರುತ್ತವೆ. ಇವು ಮುಖ್ಯವಾಗಿ ತಮ್ಮ ಚಲನೆಯನ್ನು ತಮ್ಮನ್ನು ತಾವು ಕಾಪಾಡಿಕೊಳ್ಳುವ ಕ್ರಮದಲ್ಲೂ, ತಮ್ಮ ಆಹಾರವನ್ನು ಹುಡುಕುವ ಪ್ರಯತ್ನದಲ್ಲೂ ಬಳಸಿಕೊಳ್ಳುತ್ತವೆ. ಇವು ರಜೋ ಗುಣ, ತಮೋ ಗುಣ ಸ್ವಭಾವಿಗಳು, ಆದ್ದರಿಂದ ಇವು ಧರಿಸುವ ಶರೀರಗಳನ್ನು ದೋಷಪೂರಿತವೆಂದು, ದುರ್ಗಂಧವನ್ನು ಆವರಿಸುವ ವಿಧದಲ್ಲಿ ಭಾವಿಸಿ ಇವುಗಳನ್ನು “ನೀಚವೆಂದು”, “ಮಾಂಸವೆಂದು”, ಮಾಂಸಾಹಾರವೆಂದು ಪೂರ್ವಿಕರು ಹೇಳಿದ್ದಾರೆ. ಈ ಚರ ಸೃಷ್ಟಿಯೆಲ್ಲಾ ತಮ್ಮ ತಲೆಯನ್ನು ಕೆಳಗೆ ಬಾಗಿಸಿ ಆಹಾರವನ್ನು ಸ್ವೀಕರಿಸುವ ಪ್ರಯತ್ನ ಮಾಡುತ್ತವೆ. ಪಶುಗಳು ಮೇವು ತಿಂದರೂ, ಮಾನವರು ಆಹಾರ ತಿನ್ನುತ್ತಿದ್ದರೂ ತಲೆಯನ್ನು ಕೆಳಗೆ ಬಾಗಿಸಿ ನೋಡುತ್ತಾರೆ, ಆದ್ದರಿಂದ ನೀಚ ಎನ್ನುವ ಪದವನ್ನು ಬಳಸಿದ್ದಾರೆ. ಆದ್ದರಿಂದ, ಬೇರೆ ವಿಧದಲ್ಲಿ ಅರ್ಥ ಮಾಡಿಕೊಳ್ಳಬಾರದು.
🔺 ಇನ್ನು ಉಳಿದದ್ದು, ಉದ್ಭೀಜಗಳು:* ಬೀಜದಿಂದ ಬರುವಂತಹುದನ್ನು ಉಚ್ಛವಾದವು ಎಂದು ಕರೆದಿದ್ದಾರೆ. ಇವು ಸಾಧ್ಯವಾದಷ್ಟು ಸೂರ್ಯನನ್ನು ಹೊಂದುವುದಕ್ಕೆ ಆಕಾಶದ ಕಡೆಗೆ ಸಾಗುತ್ತವೆ. ಇವು ಸತ್ವಗುಣ ಪೂರಿತವಾಗಿವೆ. ಆದ್ದರಿಂದ ಇವುಗಳನ್ನು ” ಶಾಕಾಹಾರ ” ವೆಂದು ಕರೆದಿದ್ದಾರೆ.
🔺 ಚರ ಸೃಷ್ಟಿಯನ್ನು ಆಹಾರಕ್ಕಾಗಿ ಬಳಸಬಾರದು ಎಂದು ಯಜ್ಞವಲ್ಕ್ಯ ಸ್ಮೃತಿ ಹೇಳುತ್ತದೆ. ಜಿಂಕೆಯೊಂದರ ಕಾಲನ್ನು ನಾವು ಕತ್ತರಿಸಿದರೆ, ಅದು ಜೀವನ ಪರ್ಯಂತ ಕುಂಟುತ್ತಾ ಇರುತ್ತದೆ ಹೊರತು ಅದು ಬೇರೊಂದು ಕಾಲನ್ನು ಬೆಳೆಸಿಕೊಳ್ಳಲಾರದು. ಹಾಗೆಯೇ ತನಗೆ ಒಂದು ಕಡೆ ಆಹಾರವೇನು ಸಿಗದಿದ್ದರೆ ಬೇರೆ ಕಡೆಗೆ ಹೋಗಬಲ್ಲಂತಹ ರಜೋಗುಣವನ್ನು ಜಿಂಕೆ, ಮಾನವ, ಹಾವು, ತಿಗಣೆಯಂತಹ ಚರಾ ಸೃಷ್ಟಿ ಹೊಂದಿದ ಪ್ರಾಣಿಗಳಲ್ಲಿ ಇರುತ್ತದೆ.
🔺 ಆದರೆ, ಅಚರ ಸೃಷ್ಟಿ ಇದಕ್ಕೆ ಭಿನ್ನವಾದದ್ದು. ಒಂದು ಗಿಡಮರದ ರೆಂಬೆ ಕೊಂಬೆಯನ್ನು ಕತ್ತರಿಸಿದರೆ, ಅದು ಬೇರೊಂದು ಕೊಂಬೆಯನ್ನು ಬೆಳೆಸಿಕೊಳ್ಳುತ್ತದೆ. ಗಿಡವು ತನ್ನ ಎಲೆಗಳನ್ನು ಸಮೃದ್ಧಿಯಾಗಿ ಉದುರಿಸುತ್ತವೆ, ತನ್ನ ಹಣ್ಣುಗಳನ್ನು ಉದುರಿಸುತ್ತವೆ. ಹಾಗೆಯೇ ಭತ್ತದಂತಹ ಗಿಡಗಳ ಧಾನ್ಯವನ್ನು, ಆ ಗಿಡವು ಪ್ರಕೃತಿ ಸಿದ್ಧವಾಗಿ ಸತ್ತು ಹೋದ ನಂತರವೇ ನಾವು ಆ ಬೆಳೆಯನ್ನು ಕತ್ತರಿಸಿ ಬೀಜಗಳನ್ನು ಮನೆಗೆ ತಂದುಕೊಳ್ಳುತ್ತೇವೆ. ಈ ಅಚರ ಸೃಷ್ಟಿ ತಮಗೆ ಆಹಾರ ಸಿಗಲಿಲ್ಲವೆಂದು ಬೇರೊಂದು ಕಡೆಗೆ ಚಲಿಸುವುದಿಲ್ಲ. ಇವುಗಳಲ್ಲಿ ಸತ್ವ ಗುಣವಿದೆ (ಸತ್ವಂ ಸುಖೇ ಸಂಜಾಯತಿ). ಆದ್ದರಿಂದ ಮಾವು, ಗೋಧಿ, ಬಾರ್ಲಿ, ಎಳ್ಳು ಗಳಂತಹುದನ್ನು ಭುಜಿಸಿದರೆ, ಸತ್ವ ಗುಣ ವೃದ್ಧಿಯಾಗಿ, ಆಲೋಚನೆಯಲ್ಲಿ ಕ್ರೂರತ್ವ ನಶಿಸಿ, ಮನುಷ್ಯನು ಆರೋಗ್ಯಪೂರ್ಣ ಜೀವನವನ್ನು ನಡೆಸುತ್ತಾನೆ. ಆದ್ದರಿಂದಲೇ, ಶಾಕಾಹಾರವನ್ನು ಭುಜಿಸುವುದರಿಂದ ಮಾನವನು ಸುಖವನ್ನು ಹೊಂದಿ, ಕೈವಲ್ಯವನ್ನು ಹೊಂದಬಹುದು ಎಂದು ಸಾಧನಾ ಗ್ರಂಥದಲ್ಲಿ ಋಷಿಗಳು ಬೋಧಿಸಿದ್ದಾರೆ.
🔺 ಈ ಶಾಕಾಹಾರ, ಮಾಂಸಾಹಾರ ಚರ್ಚೆ ಎನ್ನುವುದು ಜರಾಯುಜಗಳಲ್ಲೇ ಸಾಧ್ಯ. ಮಾನವರು ಜರಾಯುಜರಿಂದಲೇ ಹುಟ್ಟುತ್ತಾರೆ. ತಾಯಿ ಹಾಲು ಕುಡಿದು ಬೆಳೆಯುತ್ತಾರೆ. ಆದುದರಿಂದ, ಜರಾಯುಜಗಳಾದ ಹಸುಗಳು, ಜಿಂಕೆಗಳು, ಕುದುರೆಗಳಂತಹುದರ ಹಾಲನ್ನು ಇವರು ಕುಡಿಯಬಹುದು ಎಂದು ಹೇಳಿದ್ದಾರೆ. ಈ ಹಾಲು ಎನ್ನುವುದನ್ನು ತಮ್ಮ ಮಗುವು ಕುಡಿಯುವುದಕ್ಕಿಂತ ಎರಡು ಪಟ್ಟು ಅಧಿಕವಾಗಿಯೇ ಜರಾಯುಜಗಳು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ‘ಕರು’ ಕುಡಿದು ಉಳದ ಹಾಲನ್ನು ಈ ಜರಾಯುಜಗಳು ಸಹಜವಾಗಿಯೇ ವಿಸರ್ಜಿಸುತ್ತವೆ. ಅಂದರೆ ನೀವು ಹಾಲು ಕರೆಯದಿದ್ದರೂ ಹೆಚ್ಚಾದ ಹಾಲನ್ನು, ಯಾವ ಒಂದು ಗಿಡಕ್ಕೋ ತನ್ನ ಕೆಚ್ಚಲನ್ನು ಒತ್ತಿ ಹಿಡಿದು ಸುರಿಸುತ್ತವೆ. ಆದ್ದರಿಂದ, ಇಂತಹ ಹಾಲನ್ನು ಶೇಖರಿಸುವುದರಿಂದ, ಅವುಗಳಿಗೆ ಪ್ರಾಣಹಾನಿ ಆಗುವುದಿಲ್ಲ. ಇದು ಖಚಿತವಾಗಿ ಶಾಕಾಹಾರವೇ! 
🔺 ಆದರೆ ಇದಕ್ಕೆ ಒಂದು ನಿಯಮವಿದೆ. ಉದ್ಭೀಜಗಳನ್ನು ತಿಂದು ಬದುಕುವ “ಜರಾಯುಜಗಳ” ಹಾಲು ಮಾತ್ರವೇ ಶಾಕಾಹಾರ – ಅಂದರೆ ಹುಲ್ಲು ತಿಂದು ಹಾಲು ನೀಡುವ ಹಸುವಿನ ಹಾಲು ಮಾತ್ರ ಶಾಕಾಹಾರ.
🔺 ಆದರೆ, ಬೇರೆಯವುಗಳನ್ನು ತಿಂದು ಹಾಲು ನೀಡುವ ಜರಾಯುಜಗಳ ಹಾಲು ‘ಮಾಂಸಾಹಾರ’ – ಅಂದರೆ ಹಸುವನ್ನು ತಿಂದು ಹಾಲು ಕೊಡುವ ಹುಲಿಯ ಹಾಲು ಮಾಂಸಾಹಾರ! ಮಾನವರು ಸ್ವತಃ ಉದ್ಭೀಜಗಳನ್ನು ತಿಂದು ಬದುಕುವ ಜರಾಯುಜಗಳು.
🔺 ಮೊಟ್ಟೆಯು ಮಾಂಸಾಹಾರ. Sterile egg, ಇದರಲ್ಲಿ ಮಾತೃಗರ್ಭದಲ್ಲಿದ್ದಾಗಲೇ ಅದರ ಜೀವವನ್ನು ಕೆಲವು ರಸಾಯನಗಳನ್ನು ಉಪಯೋಗಿಸಿ, ಅದು ಬೆಳೆಯದಿರುವಂತೆ ಸಾಯಿಸುತ್ತಾರೆ. ಹಾಗಾಗಿ ಅದು ಹುಟ್ಟಿದ ನಂತರವೂ ಬೆಳೆಯದೇ ಮೊಟ್ಟೆಯಂತೆ ಇದ್ದು ಹೋಗುತ್ತದೆ. ಆ ಮೊಟ್ಟೆಯಿಂದ ಮರಿಯು ಹೊರಗೆ ಬಾರದಂತೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಆದ್ದರಿಂದ ಅದು ಶಾಕಾಹಾರ ಎನ್ನುವುದು ವ್ಯರ್ಥ ವಾದ.
🔺 ಯಾವುದು ಸೂಕ್ಷ್ಮವಾಗಿ ಚಲಿಸುತ್ತದೆಯೋ, ಚಲಿಸಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆಯೋ, ಚಲಿಸುವಂತಹ ತನ್ನಂತಹ ಪ್ರತಿರೂಪಕ್ಕೆ ಜನ್ಮ ನೀಡುತ್ತದೆಯೋ – ಅದನ್ನು ತಿನ್ನುವುದು ಮಾಂಸಾಹಾರ, ಆದುದರಿಂದ ಮೊಟ್ಟೆಯು ಖಚಿತವಾಗಿ ಮಾಂಸವೇ ! ಆದರೆ ಹಾಲು ಶಾಕಾಹಾರ.
🔺 ಯಾವುದು ಚಲಿಸದೇ, ತನ್ನ ರೆಂಬೆ ಕೊಂಬೆಗಳನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತದೆಯೋ, ಎಲೆಗಳನ್ನು ಚಿಗುರಿಸಿಕೊಳ್ಳಬಲ್ಲದೋ, ಅದು ಶಾಕಾಹಾರ.
ಮೀನುಗಳು “ಅಂಡಜಗಳೇ” ಅಂದರೆ ಮೊಟ್ಟೆಯಿಂದ ಹುಟ್ಟಿದ್ದು. ಚಲನೆ ಹೊಂದಿರುವಂತಹುವು. ಆದ್ದರಿಂದ ಮೀನುಗಳು ಸಹ ಮಾಂಸಾಹಾರವೆಂದು ಪರಿಗಣಿಸಲ್ಪಡುತ್ತವೆ. ಪ್ರತಿ ಜೀವಿಗೆ ತನ್ನ ಸ್ವತಃ ಸಿದ್ಧವಾದ ಆಹಾರವಿರುತ್ತದೆ. ಜಿಂಕೆಗಳು, ಹಸುಗಳು, ಕುದುರೆಗಳು ಹುಲ್ಲನ್ನು ಮೇಯುತ್ತವೆ. ಹುಲಿಗಳು, ಸಿಂಹಗಳು, ಹದ್ದುಗಳು ಮಾಂಸವನ್ನು ತಿನ್ನುತ್ತವೆ.
🔺ಮಾನವರು ಹಣ್ಣು, ತರಕಾರಿಗಳು, ಕೆಲ ವಿಧವಾದ ಬಿದುರು ಹಾಗೂ ಬಿದುರಿನ ಕಾಳುಗಳನ್ನು ( ಭತ್ತ, ಗೋಧಿ, ಮೊದಲಾದವುಗಳನ್ನು) ತಿನ್ನುತ್ತಾರೆ. ಮನುಷ್ಯನ ಶರೀರದ ನಿರ್ಮಾಣಕೃತಿಯ ಅಂತರ್ಗತವಾದ ಜೀರ್ಣಾಶಯವು, ಈ ವಿಷಯವನ್ನು ನಿರ್ಧರಿಸುತ್ತವೆ. ಮಾನವರ ಕರುಳುಗಳ ಸರಾಸರಿ ಏಳು ಮೀಟರ್ ಉದ್ದವಿರುತ್ತದೆ. ಇವು ಬೇರೆ ಶಾಕಾಹಾರ ಜರಾಯುಜಗಳಾದ ಜಿಂಕೆ, ಸಾರಂಗ, ಹಸುಗಳನ್ನು ಹೋಲುವ ನಿರ್ಮಾಣವಾಗಿರುತ್ತವೆ. ಹುಲಿ, ಸಿಂಹದಂತಹ ಸಹಜಸಿದ್ಧವಾದ ಮಾಂಸಾಹರ ಜರಾಯುಜಗಳ ಹೊಟ್ಟೆಯಲ್ಲಿನ ಕರುಳುಗಳು ಒಂದು ಮೀಟರ್ ಉದ್ದ ಕೂಡ ಇರುವುದಿಲ್ಲ, ಏಕೆಂದರೆ ಇವು ಮಾಂಸವನ್ನು ತಿನ್ನುತ್ತವೆ. ಮಾಂಸ ಎಂದರೆ ಈಗಾಗಲೇ ಒಂದು ಪ್ರಾಣಿಯು ತಿಂದು ಅರಗಿಸಿಕೊಂಡು ಬಲವಾಗಿ ಬದಲಿಸಿಕೊಂಡ ಪದಾರ್ಥ. ಆದುದರಿಂದ, ಪುನಃ ಮಾಂಸವನ್ನು ಅರಗಿಸಿಕೊಳ್ಳಬೇಕಾದ ಅಗತ್ಯ ಇದರ ಕರುಳುಗಳಿಗೆ ಇರುವುದಿಲ್ಲ. ಕರುಳಿನ ಮೇಲೆ ಭಾರವೂ ಬೀಳುವುದಿಲ್ಲ. ಅದಕ್ಕಾಗಿಯೇ ಸಹಜಸಿದ್ಧವಾಗಿ ಮಾಂಸ ತಿನ್ನುವ ಪ್ರಾಣಿಗಳ ಕರುಳು ಚಿಕ್ಕದಾಗಿರುತ್ತವೆ. ಹಾಗಾಗಿ ಮಾನವರು ಸಹಜವಾಗಿ ಶಾಕಾಹಾರ ಜೀವಿಗಳು.
-ಮಾಹಿತಿ ಸಂಗ್ರಹ

Leave a Reply

Your email address will not be published. Required fields are marked *