January 18, 2025
4

ಎಗ್ ಬಿರಿಯಾನಿ -ರುಚಿಕರವಾದ ಎಗ್ ಬಿರಿಯಾನಿ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು

  • ಸೋನಾ ಮಸೂರಿ ಅಕ್ಕಿ- ಅರ್ಧ ಕೆಜಿ
  • ಮೊಟ್ಟೆ- ಬೇಯಿಸಿದ್ದು 5
  • ಚಕ್ಕೆ, ಲವಂಗ- ಸ್ವಲ್ಪ
  • ಏಲಕ್ಕಿ-5-6
  • ಪಲಾವ್ ಎಲೆ, ಕಲ್ಲು ಹೂ- ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಹಸಿಮೆಣಸಿನ ಕಾಯಿ- ಉದ್ದಕ್ಕೆ ಕತ್ತರಿಸಿದ್ದು 6
  • ಈರುಳ್ಳಿ- 2 (ಸಣ್ಣಗೆ ಕತ್ತರಿಸಿದ್ದು)
  • ಟೊಮೆಟೋ- 2 (ಸಣ್ಣಗೆ ಕತ್ತರಿಸಿದ್ದು)
  • ಕೊಬ್ಬಂಬರಿ ಸೊಪ್ಪು- ಸ್ವಲ್ಪ
  • ಮೊಸರು ಅಥವಾ ತೆಂಗಿನ ಹಾಲು – ಅರ್ಧಬಟ್ಟಲು
  • ದನಿಯಾ ಪುಡಿ- 1 ಚಮಚ
  • ಖಾರದ ಪುಡಿ- 1 ಚಮಚ
  • ಬಿರಿಯಾನಿ ಮಸಾಲೆ ಪುಡಿ- ಅರ್ಧ ಚಮಚ
  • ಅರಿಶಿಣದ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ತುಪ್ಪ- ಎರಡು ಚಮಚ

ಮಾಡುವ ವಿಧಾನ…

  • ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಕೆಂಪಗೆ ಮಾಡಿಕೊಳ್ಳಿ.
  • ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಮೊಸಲು ಅಥವಾ ತೆಂಗಿನ ಹಾಲು ಹಾಕಿ 5-10 ನಿಮಿಷ ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಕೆ ಪಿ

Leave a Reply

Your email address will not be published. Required fields are marked *