January 18, 2025
ekkamaale (4)

ತುಲು ಭಾಷೆಯಲ್ಲಿ “ಎಕ್ಕಲೆ” ಎಂದರೆ ಜಿರಳೆ ಎಂಬ ಅರ್ಥ.”ಎಕ್ಕಮಾಲೆ” ಎಂದರೆ ಎಕ್ಕೆ ಬೀಜಗಳ ಕೋಶ. ಕೋಶದ ಒಳಗಿನ ಬೀಜಗಳ ರಾಶಿ. ಕೋಶದ ಒಳಗೆ ಕಾಣುವ ಹೂವು ಪೋಣಿಸಿದ ಮಾಲೆ ಅಥವಾ ಹಾರದಂತೆ ಕಾಣುವ ಎಕ್ಕಲೆ ಬಣ್ಣ ವಿನ್ಯಾಸದಂತೆ ಕಾಣುವ ಬೀಜಗಳ ರಾಶಿ. ಇಲ್ಲಿ ಎಕ್ಕಲೆ ಮತ್ತು ಎಕ್ಕೆ ಬೀಜಗಳ ವಿನ್ಯಾಸ,ಬಣ್ಣ,ಲಕ್ಷಣಗಳು, ಇತ್ಯಾದಿ ಇತ್ಯಾದಿಗಳನ್ನು ಸಮಾನವಾಗಿ ಹೋಲಿಕೆ ಮಾಡಿ ಒಂದೇ ಹೆಸರಿನಲ್ಲಿ ತುಲುವ ಮೂಲ ನಿವಾಸಿಗಳು ಕರೆದಿದ್ದಾರೆ. ಎಕ್ಕಲೆಗಳು ರಾಶಿ ರಾಶಿಯಾಗಿ ಇರುವಂತೆ ಎಕ್ಕೆ ಬೀಜದೊಳಗೆ ಅದೇ ರೀತಿಯಲ್ಲಿ ಕಂಡು ಬರುತ್ತದೆ. ಎಕ್ಕೆ ಗಿಡಗಳು ಕವಲೊಡೆದು ಪೊದೆ ಪೊದೆ ಆಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ಎಕ್ಕಲೆಗಳು ರಾಶಿ ರಾಶಿಯಲ್ಲಿ ಮರಿ ಇಡುತ್ತವೆ.

ಎಕ್ಕೆ ಗಿಡದ ಎಲ್ಲಾ ಭಾಗಗಳಲ್ಲಿ ಬಿಳಿ ಬಿಳಿಯಾದ ಚಿಕ್ಕ ರೋಮಗಳು ರಾಶಿ ಇರುತ್ತದೆ. ಉದ್ದನೆಯ ರೋಮಗಳು ಉಳ್ಳ ರಾಶಿ ಬೀಜಗಳು ಗಾಳಿಯಲ್ಲಿ ಹಗುರವಾಗಿ ಸುಲಭವಾಗಿ ಪ್ರಸಾರವಾಗುತ್ತದೆ. ಎಕ್ಕಲೆಗಳ ಮೀಸೆಗಳು ಒಳ ಹೊಕ್ಕರೆ ಅದರ ಇಡೀ ಶರೀರವು ಸುಲಭವಾಗಿ ಯಾವುದೇ ಸ್ಥಳವನ್ನು ಆಕ್ರಮಿಸುತ್ತದೆ. ರಾಶಿ ರಾಶಿ ಮರಿಗಳು ಹೊರಗೆ ಬರುತ್ತದೆ. ಎಕ್ಕಲೆ ಮತ್ತು ಎಕ್ಕಮಾಲೆ ಎರಡೂ ತುಂಬಾ ಮೃದುತ್ವವನ್ನು ಪಡೆದಿದೆ.ಎಕ್ಕಮಾಲೆ ಗಿಡಗಳು ಹೊರಗಿನ ವಾತಾವರಣವನ್ನು ಶುದ್ಧಗೊಳಿಸಿದರೆ
ಎಕ್ಕಲೆಗಳು ಮನೆಯ ಒಳಗಿನ ಟಾಯ್ಲೆಟ್ ಯಾವುದೇ ಸ್ಥಳದ ಬ್ಯಾಕ್ಟೀರಿಯಾಗಳನ್ನು ಹೀರಿ ಬದುಕುತ್ತವೆ. ಎಕ್ಕಲೆಗಳಿಂದ ಯಾವುದೇ ರೋಗವು ಮನುಷ್ಯನಿಗೆ ತಗಲುವುದಿಲ್ಲ. ತುಲು ಭಾಷೆಯಲ್ಲಿ ಎಕ್ಕ ಅಂದರೆ plenty,Bountiful,ಹೆಚ್ಚು,ಅಧಿಕ,ಸಮೂಹ ಎಂಬ ಅರ್ಥಗಳು.”ಎಕ್ಕ ಸಕ್ಕ”ಖರ್ಚಿ ಮಲ್ಪರೆ ಬಲ್ಲಿ ಎಂಬ ಮಾತು ತುಲು ಭಾಷೆಯಲ್ಲಿ ಇದೆ. ಮಿತಿ ಮೀರಿ ಖರ್ಚು ಮಾಡಬಾರದು ಎಂಬ ಅರ್ಥ. “ಕೋಟಿ-ಚೆನ್ನಯ” ತುಲು ಸಿನಿಮಾದಲ್ಲಿProf B.A.Vivek Rai ಬರೆದ “ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ.ಅಕ್ಕಾ ಪಂಡ್ದ್ ಲೆಪ್ಪುನಕುಲು ಬತ್ತೆರಿತ್ತಲಾ” ಎಂಬ ಹಾಡಿನಲ್ಲಿ ದಿ.ಮಿನುಗುತಾರೆ ಕಲ್ಪನಾರವರು ತಮ್ಮಂದಿರಾದ ಕೋಟಿ ಚೆನ್ನಯರವರ ನ್ನು ಅತಿಯಾದ ಪ್ರೀತಿ,ವಾತ್ಸಲ್ಯ,ಮೋಹದಿಂದ ಹಾಡಿ ನಲಿಯುತ್ತಾರೆ.

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ.
(ನಿವೃತ್ತ ವಿಜಯಾಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *