
ಉಡುಪಿಯ ಉಪ್ಪೂರು ಗ್ರಾಮದ ಶ್ರೀಮತಿ ವಿಶಾಲಾಕ್ಷಿ ಭಂಡಾರಿ ಮತ್ತು ಶ್ರೀ ವಿಶ್ವನಾಥ್ ಭಂಡಾರಿ ಕೆಂಜೂರು ದಂಪತಿಯ ಪುತ್ರ ಕೇಶ ವಿನ್ಯಾಸಕ,ತರಬೇತುದಾರ ಪವನ್ ಭಂಡಾರಿ ಉಪ್ಪೂರು ಮತ್ತು ಕಾರ್ಕಳದ ಕುಕ್ಕುಂದೂರಿನ ಶ್ರೀಮತಿ ಸುಧಾ ಭಂಡಾರಿ ಮತ್ತು ಶ್ರೀ ರಾಘು ಭಂಡಾರಿ ದಂಪತಿಯ ಪುತ್ರಿ ಸೌಮ್ಯ ಭಂಡಾರಿ ಜೋಡಿಯ ನಿಶ್ಚಿತಾರ್ಥ ಸಮಾರಂಭವು ತಾರೀಕು 5 ಜನವರಿ 2020 ರಂದು ವಧುವಿನ ಸ್ವಗೃಹ ಕುಕ್ಕುಂದೂರಿನಲ್ಲಿ ಜರಗಿತು.
ಶ್ರೀ ಪವನ್ ಭಂಡಾರಿ ಉಪ್ಪೂರು ಪ್ರತಿಷ್ಠಿತ ಲೋರಿಯಲ್ ಬ್ರ್ಯಾಂಡ್ ನ ಮ್ಯಾಟ್ರಿಕ್ಸ್ ಕಂಪನಿಯಲ್ಲಿ ವಿಶಿಷ್ಟ ಕೇಶ ವಿನ್ಯಾಸಕ,ತರಬೇತುದಾರರಾಗಿದ್ದಾರೆ ಹಾಗೂ ಸೌಮ್ಯ ಭಂಡಾರಿಯವರು ಬೆಂಗಳೂರಿನ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಪವನ್ ಮತ್ತು ಸೌಮ್ಯ ರ ತಂದೆ, ತಾಯಿ, ಬಂಧುಗಳು ಸ್ನೇಹಿತರು ಉಪಸ್ಥಿತರಿದ್ದು ಶುಭ ಹಾರೈಸಿದರು .
ನಿಶ್ಚಿತಾರ್ಥಗೊಂಡ ಜೋಡಿಗಳು ಶೀಘ್ರದಲ್ಲೇ ಹಸೆಮಣೆಯೇರಲಿ , ಅವರ ಮುಂದಿನ ಬದುಕು ಉಜ್ವಲವಾಗಲಿ ಎಂದು ಈ ಸಂದರ್ಭದಲ್ಲಿ ಭಂಡಾರಿ ಸಮಾಜದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತಿದೆ.
-ಭಂಡಾರಿ ವಾರ್ತೆ