January 18, 2025
sanjeeva bhjandary shiralakoppa

ದಿವಂಗತ ಗಿಳಿಯಾರು ಬಸವ ಭಂಡಾರಿ ಮತ್ತು ದಿವಂಗತ ಗಿರಿಜಮ್ಮ ಬಸವ ಭಂಡಾರಿ ದಂಪತಿಯ ಪುತ್ರ, ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ವಾಸಿ ಶ್ರೀ ಸಂಜೀವ ಭಂಡಾರಿಯವರು ಜನವರಿ 19,2019 ರ ಶನಿವಾರ ಸಂಜೆ 7:38 ಕ್ಕೆ ಕೊನೆಯುಸಿರೆಳೆದರು. ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.

ಸಂಜೀವ ಭಂಡಾರಿಯವರು ಪತ್ನಿ ಶ್ರೀಮತಿ ಗಿರಿಜಾ ಸಂಜೀವ ಭಂಡಾರಿ,ಮಕ್ಕಳಾದ ಶ್ರೀಮತಿ ಶೋಭಾ ಚಂದ್ರ ಭಂಡಾರಿ ಹೆಬ್ರಿ, ಶ್ರೀಮತಿ ಶಿಲ್ಪಾ ಮಹೇಶ್ ಭಂಡಾರಿ ಬಸ್ರೂರು,ಶ್ರೀ ಸಂದೀಪ್ ಭಂಡಾರಿ ಶಿರಾಳಕೊಪ್ಪ, ಮೊಮ್ಮಕ್ಕಳಾದ ಶೋಧನ್, ನೂತನ್, ಸಾನ್ವಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸಂಜೀವ ಭಂಡಾರಿಯವರ ಅಂತ್ಯಕ್ರಿಯೆಯು ಜನವರಿ 20,2019 ರ ಭಾನುವಾರ ಮಧ್ಯಾಹ್ನ 12:30 ಕ್ಕೆ ಶಿರಾಳಕೊಪ್ಪದ ರುದ್ರಭೂಮಿಯಲ್ಲಿ ನೆರವೇರಿದ್ದು, ಮೃತರ ಆತ್ಮಸಧ್ಗತಿಗಾಗಿ ಉತ್ತರ ಕ್ರಿಯಾ ಕಾರ್ಯಕ್ರಮವು ಶಿರಾಳಕೊಪ್ಪದ ಸೊರಬ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಜನವರಿ 29,2019 ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. 

ದುಃಖತಪ್ತ ಕುಟುಂಬ ವರ್ಗದವರಿಗೆ ಸಂಜೀವ ಭಂಡಾರಿಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *