January 18, 2025
yelluru thimappa bhandary
ಉಡುಪಿ ತಾಲೂಕು ಎಲ್ಲೂರು ದಿವಂಗತ ಅಣ್ಣು ಭಂಡಾರಿ  ಮತ್ತು ದಿವಂಗತ  ಅಕ್ಕು ಭಂಡಾರಿ ದಂಪತಿಗಳ ಪುತ್ರ  ಶ್ರೀ ವೈ. ಎನ್.ತಿಮ್ಮಪ್ಪ  ಭಂಡಾರಿಯವರು  ಜನವರಿ  17, 2019 ರ ಗುರುವಾರ ತಮ್ಮ ಸ್ವಗೃಹದಲ್ಲಿ  ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಇವರು ಮದ್ರಾಸ್‌ ಎಮ್.ಆರ್.ಎಲ್ ಸಂಸ್ಥೆಯಲ್ಲಿ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ  ಸ್ವಯಂ ನಿವೃತ್ತಿ ನೀಡಿ ಮಂಗಳೂರಿನ ಪ್ರತಿಷ್ಠಿತ  ಎಂ.ಸಿ.ಎಫ್  ಸಂಸ್ಥೆಯಲ್ಲಿ   ಡಿಪ್ಯೂಟಿ ಪರ್ಚೇಸ್ ಮ್ಯಾನೇಜರ್  ಆಗಿ 24  ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ  ನಿವೃತ್ತಿಯಾಗಿದ್ದರು.
ಮೃತರು ಹಲವಾರು ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಎಲ್ಲೂರೂ ಶ್ರೀ  ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿದ್ದ 1991 ರಿಂದ1993 ರ ಅವದಿಯಲ್ಲಿ ಕಟ್ಟಡ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ್ದರು, ಕಚ್ಚೂರು ಕ್ರೆಡಿಟ್  ಕೋ- ಅಪರೇಟಿವ್ ಸೊಸೈಟಿಯ ಬೈಲಾ ತಯಾರಿಕೆಯಲ್ಲಿ  ತುಂಬಾ  ಹೃದಯದ ಸಹಕಾರ ನೀಡಿ ಸಹಕರಿಸಿದ್ದರು.   ಬೆಳಪು ಕ್ರೆಡಿಟ್ ಕೋಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಬೊಳ್ಯಾಲ ಗರಡಿಮಜಲ್ ಭಂಡಾರಿ ಮೂಲನಾಗ ಸ್ಥಾನದ ಅಧ್ಯಕ್ಷರಾಗಿದ್ದು ಪ್ರಸ್ತುತ ಗೌರವಾಧ್ಯಕ್ಷರಾಗಿರುತ್ತಾರೆ,
ಅಂಜಾರು ಭಂಡಾರಿ  ಮೂಲಸ್ಥಾನದ ಗೌರವ ಅಧ್ಯಕ್ಷರಾಗಿ ಎಂಸಿಎಫ್ ಮಂಗಳೂರು ಬಿಜೈ ನ್ಯೂ ರಸ್ತೆಯ  ಹೌಸಿಂಗ್ ಬೋರ್ಡ್  ಸೊಸೈಟಿಯ ಅಧ್ಯಕ್ಷರಾಗಿರುತ್ತಾರೆ. ಈ ಸೊಸೈಟಿಯ ಸ್ಥಾಪನೆಯು ಶ್ರೀಯುತ ತಿಮ್ಮಪ್ಪ ಭಂಡಾರಿಯವರ ವಿಶೇಷ ಮುತುವರ್ಜಿಯಿಂದ ಆಗಿತ್ತು.
  ಭಾರತೀಯ ಜನತಾಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ  ಸಂಘಟನೆ ಕೆಲಸ  ಮಾಡಿದ್ದಾರೆ ಕಾಪು ಕ್ಷೇತ್ರದ ಶಾಸಕ ಶ್ರೀ  ಲಾಲಜಿ ಮೆಂಡನ್ ರವರ ಬಹಳ ಆತ್ಮೀಯರಾಗಿದ್ದರು ಹಾಗೂ  ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದ ಇವರು ಸತತ 46 ವರ್ಷಗಳ ಕಾಲ ಮಾಲಾಧಾರಣೆ ಮಾಡಿ  ಗುರು ಸ್ವಾಮಿಯಾಗಿ ನೂರಾರು ಮಂದಿಗೆ ಮಾಲಾಧಾರಣೆ ಮಾಡಿಸಿ ಶಬರಿಮಲೆ ಶ್ರೀ  ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಇತ್ತೀಚಿನ ಶಬರಿಮಲೆಯ ಕೆಲವು ಘಟನೆಗಳನ್ನು  ನೆನಪಿಸಿಕೊಂಡು ಬಹಳಷ್ಟು ನೊಂದಿದ್ದರೂ ಈ ಬಾರಿಯ  ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ ಬಂದಿದ್ದರು.
ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರೋತ್ಸಾಹ  ನೀಡುತ್ತಿದ್ದರು ವೈ.ಎನ್.ತಿಮ್ಮಪ್ಪರವರು ಪತ್ನಿ ಶ್ರೀಮತಿ  ರಾಧ ತಿಮ್ಮಪ್ಪ,  ಪುತ್ರಿಯಾಗಿರುವ  ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ  ವನಿತಾ ರಮೇಶ ಬೊಟ್ಯಾಡಿ  ಮತ್ತು ಮುಂಬಯಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಕಚೇರಿ ಯಲ್ಲಿ  ಕಾರ್ಯನಿರ್ವಹಿಸುತ್ತಿರುವ  ಶ್ರೀ  ವಿನೋದ್ ಕುಮಾರ್  ಟಿ. ವೈ . ಹಾಗೂ ಮಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಅಗಿರುವ ಶ್ರೀ ವಿಕ್ರಮ್ ಕುಮಾರ್  ಟಿ.ವೈ. ಇಬ್ಬರು ಪುತ್ರರು. ನವ ಮಂಗಳೂರು ಬಂದರು ಮಂಡಳಿಯ ಉದ್ಯೋಗಿ ಶ್ರೀ ರಮೇಶ್ ಭಂಡಾರಿ  ಬೊಟ್ಯಾಡಿ ಅಳಿಯ , ಮುಂಬಯಿಯಲ್ಲಿ ಫಾರ್ಮಸಿ ನಡೆಸುತ್ತಿರುವ  ಶ್ರೀಮತಿ ಶೈಲಾ ವಿನೋದ್ ಕುಮಾರ್ ಮತ್ತು  ಮಂಗಳೂರು ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್  ಶ್ರೀಮತಿ  ರಶ್ಮಿ  ವಿಕ್ರಮ್  ಸೂಸೆಯಂದಿರು .
ಬ್ರಿಜೇಶ್  ,ಭವಿಷ್ಯ  ,ಮನಸ್ವಿ ,  ಮಾನ್ವಿ ಮೊಮ್ಮಕ್ಕಳು  ಎಲ್ಲೂರೂ ಶ್ರೀ  ನಿತ್ಯಾನಂದ ಮಂದಿರದ ಧರ್ಮದರ್ಶಿ  ಹಾಗೂ  ಎಲ್ಲೂರೂ ಶ್ರೀ  ಸೂರ್ಯ ಚೈತನ್ಯ  ಶಿಕ್ಷಣ ಸಂಸ್ಥೆಯ ಸಂಚಾಲಕ  ಶ್ರೀ  ವೈ . ಎನ್ .ಶಂಭು ದಾಸ ಗುರೂಜಿ  ಇವರ ಸಹೋದರ ಸಹಿತ  ಅಪಾರ ಬಂದು ಬಳಗವನ್ನು  ಅಗಲಿದ್ದಾರೆ   ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು  ಪತ್ನಿ  ಮಕ್ಕಳು  ಮೊಮ್ಮಕ್ಕಳು   ಹಾಗೂ ಕುಟುಂಬಸ್ಥರಿಗೆ ಭಗವಂತನು ದಯಾಪಾಲಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆಯು ಭಗವಂತನಲ್ಲಿ  ಭಕ್ತಿಪೂರ್ವಕವಾಗಿ  ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ.”

Leave a Reply

Your email address will not be published. Required fields are marked *