
ಮಂಗಳೂರು ಪಂಪ್ವೆಲ್ ನ ಮರ್ಲಾಡಿ ಹೌಸ್ ನ ಶ್ರೀ ಪ್ರಕಾಶ್ ಭಂಡಾರಿ ಮಾರ್ಚ್ 20,2019 ರ ಬುಧವಾರ ರಾತ್ರಿ 12 ಗಂಟೆಗೆ ನಿಧನ ಹೊಂದಿದರು. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.

ಮಂಗಳೂರು ಪಂಪ್ವೆಲ್ ಮರ್ಲಾಡಿ ಹೌಸ್ ನ ಭಾಗೀರಥಿ ಭಂಡಾರಿಯವರ ಪುತ್ರರಾದ ಶ್ರೀಯುತ ಪ್ರಕಾಶ್ ಭಂಡಾರಿಯವರು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಹನ್ನೆರಡು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಕೊನೆಯುಸಿರೆಳೆದರು. ಅವರ ಅಂತಿಮಸಂಸ್ಕಾರವು ಮಾರ್ಚ್ 21 ರ ಗುರುವಾರ ನೆರವೇರಿಸಲಾಯಿತು.
ಅವರು ತಾಯಿ ಭಾಗೀರಥಿ ಭಂಡಾರಿ, ಪತ್ನಿ ಶ್ರೀಮತಿ ಕುಶಲ ಪ್ರಕಾಶ್ ಭಂಡಾರಿ, ಮಗ ಶ್ರೀ ನಿತಿನ್ ಭಂಡಾರಿ, ಮಗಳು ಕುಮಾರಿ ನೇಹಾ ಭಂಡಾರಿ ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಪ್ರಕಾಶ್ ಭಂಡಾರಿಯವರ ಆಕಸ್ಮಿಕ ನಿಧನದಿಂದ ದುಃಖತಪ್ತರಾದ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಮೃತರ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿಯನ್ನು ಕರುಣಿಸಿ ಸಧ್ಗತಿಯನ್ನು ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
“ಭಂಡಾರಿವಾರ್ತೆ.”