January 18, 2025
1

ಕಂಪ್ಯೂಟರ್‌, ಲ್ಯಾಪ್‌ಟಾಪ್‌ನಿಂದ ಕಣ್ಣಿಗೆ ಹಾನಿಯಾಗುವುದು ತಡೆಗಟ್ಟಬೇಕೆ? ಈ ಟಿಪ್ಸ್ ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಸ್ಮಾಟ್ಫೋನ್, ಟಾಬ್ಲೆಟ್ಸ್, ಟಿವಿ, ಕಂಪ್ಯೂಟರ್ ಹಾವಳಿಯಿಂದಾಗಿ ಜನರಲ್ಲಿ ಕಣ್ಣಿನ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಮಾರ್ಡನ್ ಜಾಬ್‌ಗಳು ನಿಧಾನವಾಗಿ ಜನರ ಕಣ್ಣಿನ ದೃಷ್ಟಿಯನ್ನು ಕಸಿದುಕೊಳ್ಳುತ್ತಿದೆ.

ಜನರಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್‌ ಸಮಸ್ಯೆ ಅಧಿಕವಾಗುತ್ತಿದೆ. ಇದರಿಂದಾಗಿ ಕಣ್ಣಿನ ಆಯಾಸ, ಒಣಕಣ್ಣು, ತಲೆನೋವಿನಂತ ಸಮಸ್ಯೆ ಜನರನ್ನು ಅಧಿಕವಾಗಿ ಕಾಡುತ್ತಿದೆ. ಡಿಜಿಟಲ್ ಯುಗದಲ್ಲಿ ಇದು ಸಾಮಾನ್ಯವಾದ್ರೂ ಕೂಡ ಇದೊಂದು ಗಂಭೀರ ಸಮಸ್ಯೆ.

ಸಾಮಾನ್ಯವಾಗಿ ಒಂದು ನಿಮಿಷದಲ್ಲಿ 15-20 ಬಾರಿ ನಾವು ಕಣ್ಣನ್ನು ಮಿಟುಕಿಸುತ್ತೇವೆ. ಆಗ ಕಣ್ಣೀರು ಎಲ್ಲಾ ಭಾಗಕ್ಕೆ ಹರಡಿಕೊಳ್ಳುತ್ತದೆ. ಆದ್ರೆ ಓದುವಾಗ, ಡಿಜಿಟಲ್ ಡಿವೈಸ್‌ಗಳನ್ನು ನೋಡುವಾಗ, ಅಥವಾ ಗೇಮಿಂಗ್‌ ಸಮಯದಲ್ಲಿ ನಿರಂತರವಾಗಿ ಒಂದೇ ಕಡೆ ಕಣ್ಣಿನ ದೃಷ್ಟಿಯನ್ನು ಕೇಂದ್ರೀಕರಿಸುತ್ತೇವೆ. ಇದರಿಂದ ಕಣ್ಣಿಗೆ ತೀವ್ರ ತರಹದ ಸಮಸ್ಯೆ ಉಂಟಾಗುತ್ತದೆ. ಆರಂಭದಲ್ಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಮಹಾ ಅಪಾಯವನ್ನೇ ಎದುರಿಸಬೇಕಾಗುತ್ತದೆ.

ಕಣ್ಣು ಆಯಾಸಗೊಳ್ಳುವುದನ್ನು ತಡೆಯಲು ಸುಲಭ ಪರಿಹಾರ

ಈ ಸಿಂಪಲ್‌ ಟಿಪ್ಸ್‌ಗಳನ್ನು ಫಾಲೋ ಮಾಡೋದ್ರಿಂದ ಕಣ್ಣು ಆಯಾಸಗೊಳ್ಳೋದಕ್ಕೆ ಕೊಂಚ ರೆಸ್ಟ್‌ ನೀಡಬಹುದು.

 

1. ಐ ಡ್ರಾಪ್‌ ಬಳಸಿ

ನಿರಂತರವಾಗಿ ಕಂಪ್ಯೂಟರ್ ಅಥವಾ ಡಿಜಿಟಲ್ ಡಿವೈಸ್‌ಗಳನ್ನು ಬಳಸುತ್ತಿರುವವರು ವೈದ್ಯರ ಸಲಹೆ ಮೇರೆಗೆ ಐ ಡ್ರಾಪ್ ಅನ್ನು ಬಳಸಬಹುದು. ಇದರಿಂದ ಕಣ್ಣಿಗೆ ಕೊಂಚ ಆರಾಮದಾಯಕ ಅನುಭವವಾಗುತ್ತದೆ.

2. ಬ್ರೇಕ್ ತೆಗೆದುಕೊಳ್ಳಿ

ಡಿಜಿಟಲ್ ಡಿವೈಸ್‌ನಲ್ಲಿ ಕೆಲಸ ಮಾಡುವವರು ಮಧ್ಯದಲ್ಲಿ ಆಗಾಗ್ಗೆ ಬ್ರೇಕ್‌ ತೆಗೆದುಕೊಳ್ಳಬೇಕು. ಕೊಂಚ ಹೊತ್ತು ಕಣ್ಣು ಮುಚ್ಚಿ ನಂತರ ಸುತ್ತಲೂ ಕಣ್ಣಾಡಿಸಬೇಕು.

3. ಒದ್ದೆ ಬಟ್ಟೆಯ ಶಾಖ ನೀಡಿ

ಒಂದು ಬಟ್ಟೆಯನ್ನು ಹದಾ ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಕಣ್ಣಿನ ಮೇಲೆ ಕೊಂಚ ಹೊತ್ತು ಇಡಿ. ಹೀಗೆ ಎರಡರಿಂದ ಮೂರು ಬಾರಿ ಮಾಡಿ.

4. ಕಣ್ಣಿಗೆ ಮಸಾಜ್ ನೀಡಿ

ಕಣ್ಣು ಆಯಾಸಗೊಂಡಾಗ ಕಣ್ಣು ಮುಚ್ಚಿ ಕಣ್ಣಿನ ಸುತ್ತ ಬೆರಳಿನಿಂದ ಮಸಾಜ್ ಮಾಡಿ. ಇದರಿಂದಾಗಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ ಹಾಗೂ ಕಣ್ಣು ಆಯಾಸಗೊಳ್ಳುವುದನ್ನು ತಡೆಗಟ್ಟುತ್ತದೆ.

5. ಸೂರ್ಯನ ಕಿರಣಕ್ಕೆ ಕಣ್ಣಾಡಿಸಿ

ಬೆಳಗ್ಗಿನ ಹೊತ್ತು ಕಣ್ಣು ಮುಚ್ಚಿ ಸೂರ್ಯನ ಕಿರಣ ತಾಕುವಂತೆ ನಿಲ್ಲಿ. ಇದರಿಂದ ರೆಟಿನಾದಿಂದ ಡೋಪಮೀನ್ ಬಿಡುಗಡೆಯಾಗುತ್ತದೆ. ಈ ಮೂಲಕ ಕಣ್ಣಿನಲ್ಲಿ ಆರೋಗ್ಯಕರ ಬದಲಾವಣೆಗಳು ಆಗಿ ಮಯೋಪಿಯಾ ರೋಗ ಬರುವುದನ್ನು ತಡೆಗಟ್ಟಬಹುದು.

6. ಅಲೋವೆರಾದಿಂದ ಮಸಾಜ್‌ ಮಾಡಿ

ಕಣ್ಣು ಆಯಾಸಗೊಂಡಾಗ ಕಣ್ಣಿನ ಸುತ್ತ ಅಲೋವೆರಾ ಜೆಲ್‌ನಿಂದ ಮಸಾಜ್ ಮಾಡಬಹುದು. ಇದರಿಂದ ಹಿತವಾದ ಅನುಭವವಾಗುತ್ತದೆ.

ಕಣ್ಣಿನ ಆಯಾಸಗೊಳ್ಳುವುದರಿಂದ ರಕ್ಷಿಸಲು ಮುಂಜಾಗೃತ ಕ್ರಮ

ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯನ್ನು ಈ ರೀತಿ ಮಾಡುವುದರಿಂದ ಕಣ್ಣಿನ ಸಮಸ್ಯೆ ಬರುವುದನ್ನು ತಡೆಗಟ್ಟಬಹುದು.

* ನೀವೇನಾದರೂ ಕಂಪ್ಯೂಟರ್ ಬಳಸುತ್ತಿದ್ದರೆ ಅದು ನಿಮ್ಮ ಮುಖದಿಂದ 25 ಇಂಚು ದೂರದಲ್ಲಿರುವಂತೆ ನೋಡಿಕೊಳ್ಳಿ.

*ಸ್ರ್ಕೀನ್‌ನ ಮಧ್ಯಭಾಗ ಕಣ್ಣಿನ10-15 ಡಿಗ್ರಿ ಕೆಳಭಾಗದಲ್ಲಿರಬೇಕು.

* ಕಂಪ್ಯೂಟರ್ ಅಥವಾ ಇತರ ಡಿಜಿಟಲ್ ಡಿವೈಸ್‌ಗಳನ್ನು ನಿರಂತರವಾಗಿ ಬಳಸುವವರು ಆ್ಯಂಟಿಗ್ಲೇರ್ ಗ್ಲಾಸ್‌ಗಳನ್ನು ಬಳಸಿ

*20-20-20 ಸೂತ್ರವನ್ನು ಪಾಲಿಸಿ. 20 ಫೀಟ್ ದೂರದಿಂದ ವಸ್ತುವನ್ನು ನೋಡಿ, 20 ನಿಮಿಷಕ್ಕೊಮ್ಮೆ 20 ಸೆಕೆಂಡ್‌ಗಗಳ ಕಾಲ ಕಣ್ಣಿನ ದೃಷ್ಟಿ ಬೇರೆ ಕಡೆ ತಿರುಗಿಸಿ.

*ಪ್ರತಿ 2 ಗಂಟೆಗೊಮ್ಮೆ 15 ನಿಮಿಷಗಳ ಲಾಂಗ್ ಬ್ರೇಕ್ ತೆಗೆದುಕೊಳ್ಳಿ.

* ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಕೆ ಮಾಡುವಾಗ ಬ್ರೈಟ್‌ನೆಸ್‌ ಬಗ್ಗೆ ಗಮನವಿರಲಿ. ನಿಮ್ಮ ಕೋಣೆಯ ಒಳಗಿರುವ ಬೆಳಕಿಗಿಂತ ಕಡಿಮೆಯೇ ಇರಲಿ. ಇನ್ನೂ ಮುಂಜಾಗೃತ ಕ್ರಮವಾಗಿ ಕನ್ನಡಕವನ್ನು ಬಳಸಿದರೆ ಉತ್ತಮ

ಇನ್ನು ಮುಂದೆ ಯಾವತ್ತಿಗೂ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವಾಗ ಎಚ್ಚರದಿಂದಿರಿ. ಯಾಕಂದ್ರೆ ನಮ್ಮ ಕಣ್ಣಿನ ಆರೋಗ್ಯ ನಮ್ಮ ಕೈಯಲ್ಲಿದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: BS

Leave a Reply

Your email address will not be published. Required fields are marked *