September 20, 2024

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಫಲ್ಗುಣಿಯ ಶ್ರೀ ಮಹೇಂದ್ರಕುಮಾರ್ ರವರು ಫಲ್ಗುಣಿ ಜಾಬ್ಸ್ ಎಂಬ ಸಂಸ್ಥೆಯನ್ನು ಬೆಂಗಳೂರು ಮಾಗಡಿ ರೋಡ್ ನ ಸುಂಕದಕಟ್ಟೆಯಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟು,ಅವರು ಸ್ವಾಭಿಮಾನದಿಂದ ಬದುಕಲು ಅನುವು ಮಾಡಿಕೊಟ್ಟಿದ್ದಾರೆ.ಇವರು ಈಗ ಕೊಡಗು ಜಿಲ್ಲೆಯಲ್ಲಿ ಮಹಾಮಳೆಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿರುವ ಕಡು ಬಡವರ ನೆರವಿಗೆ ಧಾವಿಸಿದ್ದಾರೆ.

 

ನೀವು ಮಹಾಮಳೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು,ಸಂಕಷ್ಟದಲ್ಲಿದ್ದೀರಾ?ಕಡು ಬಡತನದಲ್ಲೂ ದುಡಿದು ತಿನ್ನಬೇಕೆಂಬ ಛಲ ನಿಮ್ಮಲ್ಲಿದೆಯಾ? ಉದ್ಯೋಗ ಮಾಡಲು ಮನಸಿದೆ,ಕಸುವಿದೆ ಆದರೆ ಉದ್ಯೋಗ ಯಾರು ಕೊಡುತ್ತಾರೆ? ಬೆಂಗಳೂರಿನಲ್ಲಿಯೇ ಕೆಲಸ ಮಾಡುವುದಾದರೆ ವಸತಿ ಎಲ್ಲಿ?ಹೇಗೆ? ಜೀವನದಲ್ಲಿ ಮುಂದೇನು? ಎಂಬ ಚಿಂತೆಯಲ್ಲಿದ್ದೀರಾ?ಹಾಗಾದರೆ ನೀವು ಕೂಡಲೇ ಮಹೇಂದ್ರ ಕುಮಾರ್ ಫಲ್ಗುಣಿಯವರನ್ನು ಸಂಪರ್ಕಿಸಿ.

ಕರ್ನಾಟಕ ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷರೂ,ಫಲ್ಗುಣಿ ಉದ್ಯೋಗ ಮಾಹಿತಿ ಕೇಂದ್ರ,ಸುಂಕದಕಟ್ಟೆ,ಬೆಂಗಳೂರು ಇದರ ಸಂಸ್ಥಾಪಕರೂ ಆಗಿರುವ ಶ್ರೀ ಮಹೇಂದ್ರ ಕುಮಾರ್ ರವರು ಮೂಡಿಗೆರೆ ಫಲ್ಗುಣಿಯ ಶ್ರೀ ಅಪ್ಪು ಭಂಡಾರಿ ಮತ್ತು ಶ್ರೀಮತಿ ಅಮ್ಮಣ್ಣಿ  ಭಂಡಾರಿ ದಂಪತಿಯ ಆರು ಜನ ಮಕ್ಕಳ ಪೈಕಿ ಮೂರನೆಯವರು. ಬಿ.ಎ ಪದವಿ ಪೂರೈಸಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಶ್ರೀ ಗಜಾನನ ಎಂಟರ್ಪ್ರೈಸಸ್ ನ ಅಡಿಯಲ್ಲಿ “ಫಲ್ಗುಣಿ ಜಾಬ್ಸ್” ಎಂಬ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಿ ಸಾವಿರಾರು ಉದ್ಯೋಗಾಸಕ್ತರಿಗೆ ನೆರವಾಗಿದ್ದಾರೆ.ಇವರ ಮಾರ್ಗದರ್ಶನದಲ್ಲಿ ಉದ್ಯೋಗ ಸೃಷ್ಟಿಸಿಕೊಂಡವರು ರಾಜ್ಯಾದ್ಯಂತ ಪಸರಿಸಿದ್ದು ಇವರ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಫಲ್ಗುಣಿಯ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಪರಮಭಕ್ತರಾದ ಇವರು ಹೇಳುವ ಮಾತುಗಳು ಮತ್ತು ಲೆಕ್ಕಾಚಾರಗಳು ನುಡಿದಂತೆ ನೆಡೆದ ಅದೆಷ್ಟೋ ಉದಾಹರಣೆಗಳಿವೆ. ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ ಈ ರೀತಿಯ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ನಮ್ಮ ಸಮಾಜದ ಹೆಮ್ಮೆ.

ಸಾಮಾಜಿಕ ಕ್ಷೇತ್ರದಲ್ಲಿ,ರಾಜಕೀಯ ಕ್ಷೇತ್ರದಲ್ಲಿ,ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲಾ ಕಡೆಯೂ ಅಪಾರ ಅಭಿಮಾನಿಗಳನ್ನು,ಹಿತೈಷಿಗಳನ್ನು,ಆತ್ಮಿಯರು ಹೊಂದಿರುವ ಇವರಿಗೆ ಈ ಕಾರ್ಯ ಅಂತಹ ಕಠಿಣವಾದುದೇನೂ ಅಲ್ಲ.

ನೀವು ಸಂಪರ್ಕಿಸ ಬೇಕಾದ ವಿಳಾಸ….
ಮಹೇಂದ್ರ ಕುಮಾರ್ ಫಲ್ಗುಣಿ.
ರಾಜ್ಯಾಧ್ಯಕ್ಷರು.
ಕರ್ನಾಟಕ ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ.
ಫಲ್ಗುಣಿ ಉದ್ಯೋಗ.(Phalguni Jobs) 
ಉದ್ಯೋಗ ಮಾಹಿತಿ ಕೇಂದ್ರ.
ಮಾಗಡಿ ಮುಖ್ಯ ರಸ್ತೆ. ಸುಂಕದಕಟ್ಟೆ.
ಬೆಂಗಳೂರು.
Mobile : 9845210490

ಶ್ರೀ ಮಹೇಂದ್ರ ಕುಮಾರ್ ಫಲ್ಗುಣಿಯವರ ಈ ಸೇವಾ ಕೈಂಕರ್ಯದಲ್ಲಿ ಅವರಿಗೆ ಶ್ರೀ ದೇವರು ಶಕ್ತಿ ಚೈತನ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *