January 18, 2025
Vital Bhandary BSNL4
Advt.

 

Advt.

ಡುಪಿ ತಾಲೂಕಿನ ಬ್ರಹ್ಮಾವರ ಹೊಲಾ೯ಳಿ ದಿ॥ ಶ್ರೀ ನಂದ್ಯಪ್ಪ ಭಂಡಾರಿ ಮತ್ತು ದಿ॥ ಶ್ರೀಮತಿ ಮೀನಾಕ್ಷಿ ನಂದ್ಯಪ್ಪ ಭಂಡಾರಿ ದಂಪತಿಯ ಪುತ್ರ ವಿಠಲ್ ಭಂಡಾರಿ ಇವರು ತಮ್ಮ  ಪ್ರಾಥಮಿಕ ಶಿಕ್ಷಣವನ್ನು  ಹೊಲಾ೯ಳಿ ಯಲ್ಲಿ  ಪ್ರೌಢ ಶಿಕ್ಷಣವನ್ನು  ಕೊಕ್ಕರ್ಣೆಯಲ್ಲಿ ಪಿ.ಯು.ಶಿಕ್ಷಣವನ್ನು  ಕುಮಟಾದಲ್ಲಿ ಹಾಗೂ ಉಡುಪಿ ಎಂ.ಜಿ.ಎಂ ಕಾಲೇಜ್ ನಲ್ಲಿ ಪದವಿ ವ್ಯಾಸಂಗ ಪಡೆದರು, ಬಳಿಕ 1985 ರ ಮೇ 18 ರಂದು  ಭಾರತೀಯ ದೂರ ಸಂಚಾರ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಮಡಿಕೇರಿಯ ಗೋಣಿಕೊಪ್ಪ ದಲ್ಲಿ  ವೃತ್ತಿ ಜೀವನಕ್ಕೆ ಕಾಲಿಟ್ಟರು ಬಳಿಕ ಮಂಗಳೂರು ಬಿಎಸ್ಎನ್ಎಲ್ ಪ್ರಧಾನ ಕಚೇರಿಗೆ  ವರ್ಗಾವಣೆಗೊಂಡರು ಅಲ್ಲಿ ಇವರ ಪ್ರಾಮಾಣಿಕ ಕೆಲಸವನ್ನು ಗುರುತಿಸಿದ ಇಲಾಖೆ ಸಬ್ ಡಿವಿಜನ್ ಲ್ ಅಧಿಕಾರಿ ಹುದ್ದೆಗೆ ಬಡ್ತಿ ನೀಡಿ ಬಂಟ್ವಾಳ ಕಛೇರಿಗೆ ವರ್ಗಾವಣೆಗೊಳಿಸಲಾಯಿತು. ನಂತರ ಮೂಡಬಿದ್ರೆ,ಬೆಳ್ತಂಗಡಿ ,ಗೋಳ್ತಮಜಲು ನಲ್ಲಿ ಕಾರ್ಯ ನಿರ್ವಹಿಸಿದರು. ದಕ್ಷ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ ಎಂದು ಮನಗಂಡ ಇಲಾಖೆ ಎಜಿಎಂ ಹುದ್ದೆಗೆ ಬಡ್ತಿಗೊಳಿಸಿ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಜವಾಬ್ದಾರಿ ನೀಡಲಾಗಿತ್ತು. ಇಲಾಖೆಯಲ್ಲಿ ದಕ್ಷತೆಯಿಂದ ಹಾಗೂ ಪ್ರಾಮಾಣಿಕತೆಯಿಂದ 33 ವರ್ಷ 2 ತಿಂಗಳ ಕಾಲ ಕಾಯ೯ ನಿರ್ವಹಿಸಿದ ವಿಠಲ್ ಭಂಡಾರಿ ಇಲಾಖೆ ಸೇವೆಯಿಂದ ಜೂನ್ 30 ರಂದು ಸೇವಾ ನಿವೃತ್ತಿ ಹೊಂದಿದರು .
ಅಂದು ಶ್ರೀ  ವಿಠಲ್ ಭಂಡಾರಿ ಮತ್ತು ಶ್ರೀಮತಿ ಸ್ನೇಹಲತಾ ವಿಠಲ್ ಭಂಡಾರಿ ದಂಪತಿಗಳಿಗೆ ಇಲಾಖೆಯ ವತಿಯಿಂದ ನಿವೃತ್ತಿ ಸನ್ಮಾನವನ್ನು ಬಿ.ಸಿ.ರೋಡ್‌ ಲಯನ್ಸ್ ಸೇವಾ ಮಂದಿರದಲ್ಲಿ ನಡೆಸಲಾಯಿತು  ಮಂಗಳೂರು ಬಿಎಸ್ಎನ್ಎಲ್ ಪ್ರಧಾನ ಕಚೇರಿಯ ಆಡಳಿತ ಮತ್ತು  ಗ್ರಾಮಾಂತರ ವಿಭಾಗದ  ಡಿಜಿಎಂ ಪ್ರಕಾಶ್ ಎಮ್.ಎಚ್ .ರವರ ಅಧ್ಯಕ್ಷತೆ ಯಲ್ಲಿ ಜರಗಿತು. ಬಳಿಕ ಮಾತನಾಡಿದ ಡಿಜಿಎಂ, ವಿಠಲ್ ಭಂಡಾರಿ ಸರಳ ಸಜ್ಜನಿಕೆಯ ಪ್ರಾಮಾಣಿಕ ಅಧಿಕಾರಿ ಎಂಬಾ ಹೆಗ್ಗಳಿಕೆಗೆ  ಪಾತ್ರರಾಗಿದ್ದರು ಎಂದು ಇವರ ಕಾರ್ಯವೈಖರಿಯನ್ನು  ಕೊಂಡಾಡಿದರು. ಹಣಕಾಸು ವಿಭಾಗದ ಅನುಭವಿ ಡಿಜಿಎಂ. ಶಿವರಾಮ ಕಾರಂತ ಮಾತನಾಡಿ ಅಂತರ್ಜಾಲ ವ್ಯವಸ್ಥೆಯು ಖಾಸಗಿ ವ್ಯವಸ್ಥೆಗೆ ತೆಗೆದು ಕೊಂಡಾಗ ಬಿಎಸ್ಎನ್ಎಲ್ ದೊಡ್ಡ ಆರ್ಥಿಕ ಕುಸಿತವನ್ನು ಎದುರಿಸಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳ ಉತ್ತಮ ಸೇವೆಯಿಂದ ಬಿಎಸ್ಎನ್ಎಲ್ ಗ್ರಾಹಕರು ಉಳಿದು ಬರುತ್ತಾರೆ. ಉತ್ತಮ ಸೇವಾ ದಾಖಲೆ ಹೊಂದಿರುವ ವಿಠಲ್ ಭಂಡಾರಿ ಯವರಂತಹ ಅಧಿಕಾರಿ ಸಿಬ್ಬಂದಿ ವರ್ಗ ಸೇವಾ ನಿವೃತ್ತಿ  ಹೊಂದುತ್ತಿರುವುದು ಇಲಾಖೆಗೆ ಇನ್ನಷ್ಟು ಹೊರೆ ಆಗುತ್ತದೆ ಎಂದು ಹೇಳಿದ್ದರು  ಸನ್ಮಾನ  ಸ್ವೀಕರಿಸಿ ಮಾತನಾಡಿದ ವಿಠಲ್ ಭಂಡಾರಿ 33 ವರ್ಷ ಗಳ ಕಾಲ ಸೇವೆ ಸಲ್ಲಿಸುವಾಗ ಸಹಕಾರ ಮತ್ತು  ಪ್ರೋತ್ಸಾಹ ನೀಡಿದ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ  ಸೇವೆಯನ್ನು ನೆನಪಿಸಿಕೊಂಡು  ಕೃತಜ್ಞತೆ ಸಲ್ಲಿಸಿದರು .
ಈ ಸಂದರ್ಭದಲ್ಲಿ ಪುತ್ರಿ ನಮ್ರತ ಬಂಟ್ವಾಳ, ಎಸ್‌ .ವಿ.ಎಸ್‌ .ಕಾಲೇಜ್ ಉಪನ್ಯಾಸಕ ನಾರಾಯಣ್ ಬಿ.ಭಂಡಾರಿ ,ಬಂಟ್ವಾಳ ಬಿಎಸ್ಎನ್ಎಲ್ ಸಬ್  ಡಿವಿಶನಲ್ ಇಂಜಿನಿಯರ್ ಜಯಮ್ಮ ಸಿ. ಮತ್ತು  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು  ಬಂಟ್ವಾಳ ಬಿಎಸ್ಎನ್ಎಲ್ ಕಚೇರಿ ಸೀನಿಯರ್  ಸೂಪರಿಂಟೆಂಡೆಂಟ್ ಯಶೋಧ ನಾರಾಯಣ್ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಈಶ್ವರ್ ಭಟ್ ರಾಕೋಡಿ ವಂದಿಸಿದರು. 
ಬಂಟ್ವಾಳ ಭಂಡಾರಿ ಸಮಾಜ ಸಂಘದ  ಉಪಾಧ್ಯಕ್ಷರಾಗಿಯೂ ಸಮಾಜದ  ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ .
ವಿಠಲ್ ಭಂಡಾರಿ ಶೈಕ್ಷಣಿಕ ಮತ್ತು ವೃತ್ತಿ ಜೀವನದ ನೆನಪು ಗಳನ್ನು ಭಂಡಾರಿ ವಾತೆ೯ ಜೊತೆ ಹಂಚಿಕೊಂಡರು  ಪ್ರಸ್ತುತ ಬಿ.ಸಿ.ರೋಡ್‌ ಸಂಚಯಗಿರಿ ಬಳಿಯ ನಿವಾಸ ದಲ್ಲಿ ಪತ್ನಿ ಸ್ನೇಹಲತಾ ರೊಂದಿಗೆ ಸಂತೃಪ್ತ  ಜೀವನ ನಡೆಸುತ್ತಿದ್ದಾರೆ .ಪುತ್ರ ನಿಖಿಲ್  ಅಮೇರಿಕದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಅಲ್ಲಿಯೇ ಉದ್ಯೋಗದಲ್ಲಿ ಇದ್ದಾರೆ  ಪುತ್ರಿ ನಮ್ರತಾ ಬೆಂಗಳೂರು ಇನ್ಫೋಸಿಸ್ ಸಂಸ್ಥೆ ಯಲ್ಲಿ  ಸಾಫ್ಟವೇರ್ ಇಂಜಿನಿಯರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಕ್ಕೆ ತೆರಳಲಿದ್ದಾರೆ.  ವಿಠಲ್ ಭಂಡಾರಿಯವರ ನಿವೃತ್ತಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯ ಬದುಕನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
Advt.
Advt.
advt.

 

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ

http://www.bhandaryvarthe.in/selfie-contest-2018/

ಭಂಡಾರಿ ವಾತೆ೯

Leave a Reply

Your email address will not be published. Required fields are marked *