

ವಿಟ್ಲಾ ಮಿತ್ತನಡ್ಕದ ಶ್ರೀ ಗಿರೀಶ್ ಭಂಡಾರಿ ಮತ್ತು ಶ್ರೀಮತಿ ಸವಿತಾ ಗಿರೀಶ್ ಭಂಡಾರಿ ದಂಪತಿಯು ತಮ್ಮ ಮುದ್ದಿನ ಮಗಳು
ಬೇಬಿ ದಿಶಾನಿ.ಜಿ.ಭಂಡಾರಿಯ ಪ್ರಪ್ರಥಮ ಹುಟ್ಟು ಹಬ್ಬವನ್ನು ಮೇ 23 ರ ಬುಧವಾರ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬಳಿಯ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದರು.
ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ತಂದೆ ತಾಯಿ ಮತ್ತು ನಾಗೇಶ್ ಭಂಡಾರಿ ಕರಿಂಕ, ಚಂದ್ರಿಕಾ ನಾರಾಯಣ್ ಭಂಡಾರಿ ಕರಿಂಕ, ಶಾಂಭವಿ ಭಂಡಾರಿ ಬಜೆ ,ಶೀನ ಭಂಡಾರಿ ಮತ್ತು ಮಕ್ಕಳು ಬಜೆ, ಬಾಬು ಭಂಡಾರಿ ಮಿತ್ತನಡ್ಕ,ಪ್ರೇಮಾ ಅಶೋಕ್ ಭಂಡಾರಿ ಉಡುಪಿ ಇತರ ಬಂಧುಗಳು,ಆತ್ಮೀಯರು,ಕುಟುಂಬಸ್ಥರು ದಿಶಾನಿಗೆ ಉಡುಗೊರೆಗಳನ್ನು ನೀಡಿ,ಶುಭ ಹಾರೈಸಿ ಹರಸಿದರು.
ಹುಟ್ಟು ಹಬ್ಬದ ಪ್ರಥಮಾನುಭವದ ಸಂಭ್ರಮದಲ್ಲಿರುವ ದಿಶಾನಿಗೆ ಶ್ರೀ ದೇವರು ಸಕಲವನ್ನೂ ದಯಪಾಲಿಸಿ ಸದಾ ಸಂತೋಷದಿಂದಿರುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಕತಾರ್