January 18, 2025
srinidhi02-20-08.56.23

ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದಲ್ಲಿ ಶ್ರೀ ಜಗದೀಶ್ ಭಂಡಾರಿ  ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ ಮತ್ತು ಪುತ್ರ ರಾದ ಶ್ರೀ ಪವನ್ ಕುಮಾರ್ ಮತ್ತು ಶ್ರೀಮತಿ ಅಕ್ಷತಾ ಪವನ್ ಹಾಗೂ ಶ್ರೀ  ಪ್ರಣಾಮ್ ಕುಮಾರ್ ಇವರ “ಶ್ರೀನಿಧಿ” ನಿಲಯದ ಗೃಹ ಪ್ರವೇಶದ ಪ್ರಥಮ ವರ್ಷದ ಸಂಭ್ರಮಾಚರಣೆ  ಫೆಬ್ರವರಿ 19 ನೇ ಸೋಮವಾರದಂದು ದೇವತಾಕಾರ್ಯ ಹಾಗೂ ಗಣಹೋಮದೊಂದಿಗೆ ವೈಭವದಿಂದ ನೆರವೇರಿಸಲಾಯಿತು.  ಮೊಮ್ಮಗಳಾದ ಕು|| ತನಿಷ್ಕ ಪವನ್ ಕುಮಾರ್  ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.ಪೂಜಾ ಕಾರ್ಯಕ್ರಮದ ನಂತರ ನೆರೆದಿದ್ದ ಅತಿಥಿ ಅಭ್ಯಾಗತರು ಸಿಹಿ ಭೋಜನ ಸವಿದು ಅತಿಥೇಯರನ್ನು ಹರಸಿ ಹಾರೈಸಿದರು. 


ಶ್ರೀ ಜಗದೀಶ್ ಭಂಡಾರಿ ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ ಮತ್ತು ಕುಟುಂಬದವರ ಮನೆಯಲ್ಲಿ ಹೀಗೆಯೇ ಹಲವಾರು ಮಂಗಳ ಕಾರ್ಯಗಳು ಸದಾ ನಡೆಯುತ್ತಿರಲಿ,ಮಾತಾ ಅನ್ನಪೂರ್ಣೇಶ್ವರಿಯ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *