January 18, 2025
1

ಕೀಲು-ಗಂಟುಗಳ ನೋವನ್ನು ಶಾಶ್ವತವಾಗಿ ದೂರ ಮಾಡುವ ಆಹಾರಗಳು

ಇನ್ನು ಮುಂದೆ ಕೀಲು ನೋವು ಇರಲ್ಲ ಬಿಡಿ. ಏಕೆಂದರೆ ನಿಮಗಾಗಿ, ಪೌಷ್ಠಿಕಾಂಶ ತಜ್ಞರಾದ ಲ.ಬಾ ಅವರು ಚಳಿಗಾಲದಲ್ಲಿ ಸೇವಿಸ ಬಹುದಾದ ಕೆಲವೊಂದು ಮನೆ ಬಳಕೆ ಗಿಡಮೂಲಿಕೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಮಳೆಗಾಲ ಮತ್ತು ಚಳಿಗಾಲ ಬಂತು ಎಂದರೆ ಮೈ ಕೈ ನೋವು ಮತ್ತು ಮೂಳೆ ನೋವು ಪ್ರಾರಂಭ ಎಂದೇ ಅರ್ಥ. ಹಿಂದೆ ವಯಸ್ಸಾದವರು ಮಾತ್ರ ಈ ಸಮಸ್ಯೆಗಳನ್ನು ಹೇಳಿ ಕೊಳ್ಳುತ್ತಿದ್ದರು. ಆದರೆ ಈಗ ಮಧ್ಯ ವಯಸ್ಸಿನ ಹಾಗೂ ಯುವ ಜನತೆ ಕೂಡ ಇಂತಹ ದೂರು ದಾಖಲಿಸುತ್ತಿದ್ದಾರೆ. ಅದೇನು ಎಂದು ಗೊತ್ತಿಲ್ಲ.

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಆ ರೀತಿ ಇರಬಹುದು. ಆದರೆ ಇದಕ್ಕೆಲ್ಲ ಪರಿಹಾರವಾಗಿ ನಮ್ಮ ಮನೆಯಲ್ಲಿ ನಾವು ತಿನ್ನುವಂತಹ ಕೆಲವೊಂದು ಆಹಾರ ಪದಾರ್ಥಗಳು ಉಪಯೋಗಕ್ಕೆ ಬರುತ್ತವೆ ಎಂಬ ಮಾಹಿತಿಯನ್ನು ಲವನೀತ್ ಬಾತ್ರಾ ತಮ್ಮ ಅಂಕಣದಲ್ಲಿ ಈ ರೀತಿ ತಿಳಿಸಿಕೊಟ್ಟಿದ್ದಾರೆ.

ಕೀಲು ನೋವು-ಗಂಟುಗಳ ನೋವನ್ನು ದೂರಮಾಡುವ ಆಹಾರಗಳು

ಅರಿಶಿನ

ಅರಿಶಿನ ಒಂದು ಉರಿಯುತ ನಿವಾರಕ ಗುಣಲಕ್ಷಣ ಹೊಂದಿರುವ ಗಿಡಮೂಲಿಕೆ. ಇದರಲ್ಲಿ curcumin (ಕರ್ಕ್ಯುಮಿನ್) ಎಂಬ ನಿಸರ್ಗದತ್ತವಾದ ರಾಸಾಯನಿಕ ಇರುವುದರಿಂದ ಇದು ಮೂಳೆಗಳ ನೋವು ಮತ್ತು ಕೀಲುಗಳ ನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಸಹ ಕೀಲು ನೋವು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಹಾಗಾಗಿ ಚಳಿಗಾಲದ ಈ ಸಂದರ್ಭದಲ್ಲಿ ಎದುರಾಗುವ ಕೀಲು ನೋವಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಶುಂಠಿ

ಮನುಷ್ಯನ ದೇಹದ ಉರಿಯುತವನ್ನು ನಿವಾರಣೆ ಮಾಡುವ ಜೊತೆಗೆ ದೇಹಕ್ಕೆ ಹಲವಾರು ಔಷಧೀಯ ಗುಣಗಳನ್ನು ಧಾರೆ ಎರೆಯುವ ಗಿಡಮೂಲಿಕೆ ಇದು. ವಿಶೇಷವಾಗಿ ಮಳೆಗಾಲದ ಹಾಗೂ ಚಳಿಗಾಲ ಸಂಬಂಧಿತ ತೊಂದರೆಗಳನ್ನು ಇದು ಇಲ್ಲವಾಗಿಸುತ್ತದೆ.

ವಾಲ್ ನಟ್ಸ್

ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಮ್ಲಗಳು ಇರಲಿದ್ದು, ಕೀಲು ನೋವಿಗೆ ಮತ್ತು ಕೀಲು ಹಿಡಿದುಕೊಳ್ಳು ವುದಕ್ಕೆ ಸರಿಸಾಟಿಯಾಗಿ ಕೆಲಸ ಮಾಡುತ್ತದೆ. ಉರಿಯುತವನ್ನು ನಿವಾರಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಚೆರ್ರಿ ಹಣ್ಣು

ಚೆರ್ರಿ ಹಣ್ಣುಗಳಲ್ಲಿ ಮಾಂಸ ಖಂಡಗಳ ಉರಿಯುತವನ್ನು ನಿವಾರಣೆ ಮಾಡುವ ಜೊತೆಗೆ ಕೀಲು ನೋವನ್ನು ವಾಸಿ ಮಾಡುವ ಲಕ್ಷಣಗಳು ಸಾಕಷ್ಟಿವೆ. ಆಂಟಿ ಆಕ್ಸಿಡೆಂಟ್ ಗಳನ್ನು ಹೆಚ್ಚಾಗಿ ಒಳಗೊಂಡಿ ರುವ ಈ ಹಣ್ಣುಗಳನ್ನು ಆಗಾಗ ತಿನ್ನುವುದರಿಂದ ಇಂತಹ ಒಂದು ನರಕ ಯಾತನೆ ಅನುಭವಿಸುವು ದರಿಂದ ತಪ್ಪಿಸಿಕೊಳ್ಳಬಹುದು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *