“ಶ್ರೀ ಮದ್ಭಗವದ್ಗೀತಾ” ಆನಂದಚಿತ್ತ, ಷಟ್ ಐಶ್ವರ್ಯ ಪೂರ್ಣ, ಚರಾಚರವಂದಿತ, ಪರಮ ಪುರುಷೋತ್ತಮ, ಸಾಕ್ಷತ್ ಶ್ರೀ ಕೃಷ್ಣ ನ ದಿವ್ಯವಾಣಿಯಾಗಿದೆ. ಇದು ಅನಂತ ರಹಸ್ಯಗಳಿಂದ ಪೂರ್ಣವಾಗಿದೆ. ಪರಮ ದಯಾಮಯಿ ಭಗವಾನ್ ಶ್ರೀ ಕೃಷ್ಣನ ಕೃಪೆಯಿಂದಲೇ ಕೆಲವೇ ಅಂಶದಲ್ಲಿ ಇದರ ರಹಸ್ಯ ತಿಳುವಳಿಕೆಗೆ ಬರಬಲ್ಲುದು. ಯಾವ ಪುರುಷನು (ಮಾನವನು)ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಭಗವದ್ಗೀತೆಯ ಮನನ ಮಾಡುತ್ತಾನೋ ಅವನು ಭಗವಂತನ ಸ್ವರೂಪವನ್ನು ಇಣುಕಿ ನೋಡಬಲ್ಲನು. ಆದುದರಿಂದ ಯಾವ ಮನುಷ್ಯರು ತಮ್ಮ ಶ್ರೇಯಸ್ಸನ್ನು ಬಯಸುತ್ತಾರೋ ಅವರು ಭಕ್ತಿ ಪೂರ್ವಕವಾಗಿ ತಮ್ಮ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಶ್ರೀ ಮದ್ಭಗವದ್ಗೀತಾ-೪ನೇ ಅಧ್ಯಾಯ ೮ನೇ ಶ್ಲೋಕ
ಯಾವ ಪುರುಷನು (ಮನುಷ್ಯನು) ಅಹಿಂಸಾ, ಸತ್ಯ, ಅಸ್ತೀಯಾ, ಬ್ರಹ್ಮಚರ್ಯ ಮೊದಲಾದ ಸಮಸ್ತ ಸಾಮಾನ್ಯ ಧರ್ಮಗಳ ಹಾಗೆಯೇ ಯಜ್ಞ, ದಾನ, ತಪ ಹಾಗೂ ಅಧ್ಯಾಪನ, ಪ್ರಜಾಪಾಲನ ಮೊದಲಾದ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಚೆನ್ನಾಗಿ ಪಾಲಿಸುತ್ತಾರೋ, ಬೇರೆಯವರಿಗೆ ಹಿತವನ್ನು ಮಾಡುವುದೇ ಯಾರ ಸ್ವಭಾವ ಆಗಿದೆಯೋ ಯಾರ ಸದ್ಗುಣಗಳ ಭಂಡಾರ ಮತ್ತು ಸದಾಚಾರಿಗಳಾಗಿದ್ದಾರೋ ಹಾಗೆಯೇ ಶ್ರದ್ಧೆ ಮತ್ತು ಪ್ರೇಮ ಪೂರ್ವಕ ಭಗವಂತನ ರೂಪ, ಗುಣ, ಕೀರ್ತನ, ಮೊದಲಾದವುಗಳನ್ನು ಮಾಡುವ ಭಕ್ತರಿದ್ದಾರೋ ಅವರ ರಕ್ಷಣೆ ಭಗವಂತನ ಹೊಣೆ. ನಾವೆಲ್ಲರೂ ಭಗವದ್ಗೀತೆಯ ಸಂದೇಶವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ. ಅದರ ಮೊದಲು ಅಧ್ಯಯನ, ಅಧ್ಯಾಪನದ ಕಡೆ ನಮ್ಮ ಮನವಿರಲಿ.
”ಜಾತಸ್ರಹಿ ಧ್ರುವೋ ಮೃತ್ಯು”. ಹುಟ್ಟಿದವನ ಮರಣವು ನಿಶ್ಚಿತವಾಗಿದೆ. ಇದರಲ್ಲಿ ನಾವು ಶೋಕ ಪಡಲು ಏನೂ ಇಲ್ಲ. ಹುಟ್ಟು ಸಾವಿನ ನಡುವಿನಲ್ಲಿ ನಮ್ಮ ಕಾರ್ಯ ಸಾಧನೆಗಳನ್ನು ಪರಿಗಣಿಸಬೇಕು. ಸುಖ, ದು:ಖ, ಕಷ್ಟ ,ಸಂತೋಷ ಮನುಷ್ಯನ ಸಹಜ ಲಕ್ಷಣಗಳು. ಇದನ್ನು ಸಮತೋಲನದಿಂದ ತೂಗಿಸಿ ಬಾಳೋಣ, ಆನಂದದಿಂದ ಜೀವನ ಸಾಗಿಸೋಣ.
” ಕೃಷ್ಣ ನುಡಿದಂತೆ ನಮ್ಮ ನಡೆಯಿರಲಿ”
✍: ನಿರುಪಮಾ ರಾಯಿ
Very good information
Super
Nice