
ನೀ ಬಂದ ಮೊದಲದಿನ
ನನ್ನ ಬಳಿ ಕುಳಿತಿದ್ದೆ
ಸುತ್ತಲೂ ಅಪರಿಚಿತರ ಕಂಡು
ನನ್ನ ಹಿಂದೆಯೇ ಇರುತ್ತಿದ್ದೆ
ನಾವಾದೆವು ಉತ್ತಮ ಗೆಳೆಯರು
ಶಾಲೆಯಿಡೀ ನಮ್ಮದೆ ಹೆಸರು
ಎಲ್ಲೆಂದರಲ್ಲಿ ನಮ್ಮದೇ ಜೋಡಿ
ಮಾಡಿದ್ದೆವು ನಾವು ಎಲ್ಲರಿಗೂ ಮೋಡಿ
ನಾವಾಡಿದ ಸಿಹಿ ಮಾತುಗಳೆಷ್ಟೋ
ಹಂಚಿಕೊಂಡ ಸಿಹಿ ಕನಸುಗಳೆಷ್ಟೊ
ಕಾಲಾಂತರದಲ್ಲಿ ಎಲ್ಲಾ ಈಗ ಸವಿ ನೆನಪು
ಆದರೂ ಮಾಸಿಲೢ ಗೆಳೆತನದ ಹೊಳಪು
✍: ನೀತಾ ಮಂಗಳೂರು
👌👌