ಅಪ್ಪ ನೆಟ್ಟ ಆಲದ ಮರ ಅಂತಲೋ
ಮಾವಿನ ಮರ ಅಂತಲೋ
ನಾನು ನೇಣು ಹಾಕಿ ಕೊಳ್ಳಲಾರೆ
ಅಂದ ನನ್ನ ಮಗ
ನಾನು ದಂಗಾದೆ
ಟ್ವಿಟ್ಟರ್ ವಾಟ್ಸಪ್ ಫೇಸ್ಬುಕ್
ಅಂತ 24ಗಂಟೆ ಇರಬೇಡ
ಮೊಬೈಲ್ ನಲ್ಲಿ
ಸ್ವಲ್ಪ ಓದು ಅಂದದ್ದಕ್ಕೆ
ನಿಮ್ಮ ಕಾಲದಲ್ಲಿ ಅದೆಲ್ಲಾ
ಇರಲಿಲ್ಲ
ಅದಕ್ಕೆ ಹೊಟ್ಟೆ ಕಿಚ್ಚು ಅಂದ
ನಾನು ದಂಗಾದೆ
ಹಿರಿಯರಾಗಿ ಕಿರಿಯರಿಗೆ
ಬುದ್ದಿ ಹೇಳಿದ್ರೆ
ಅದು ಹೊಟ್ಟೆ ಕಿಚ್ಚೇ
ಸಕ್ಕರೆ ಕಾಯಿಲೆಯವ
ಸಕ್ಕರೆ ತಿನ್ನುವವರ ಕಂಡು
ಜಾಸ್ತಿ ಸಕ್ಕರೆ ತಿನ್ನಬೇಡಿ
ಅಂದರೆ
ಕುಡಿದು ಲಿವರ್ ಕಳಕೊಂಡವ
ಕುಡಿಯುವವರಿಗೆ
ಕುಡಿಯಬೇಡಿ
ಅಂದರೆ
ಓದದೆ ಫೇಲ್ ಆದವ
ಓದದವರಿಗೆ ಓದಿ
ಅಂದರೆ
ಹೊಟ್ಟೆ ಕಿಚ್ಚೇ
ಕೇಳಿದರೆ ಸಾಕು ಅಂತಾನೆ
ಜನರೇಶನ್ ಗ್ಯಾಪ್
ನಮ್ಮಪ್ಪ ನಮ್ಮಮ್ಮ
ಹೇಳಿದ್ದನ್ನು ನಾವು
ಕೇಳಿದ್ದೇವೆ
ಆದರೆ ನಮ್ಮ ಮಕ್ಕಳೇಕೆ
ಕೇಳೋಲ್ಲ
ಸುಮ್ಮನೆ ಇದ್ದೀಯಾ
ನನ್ ಶರ್ಟ್ ಗೆ
ಇಸ್ತ್ರಿ ಮಾಡು
ಮಗ ಅಂದಾಗ ಪೆಚ್ಚಾಗಿ
ನಗು ತಂದುಕೊಂಡು ಎದ್ದೆ
ನನ್ ಅಪ್ಪನ ಬಾರುಕೋಲು
ನೆನಪಾಯಿತು
ಆದರೆ ಏನು ಮಾಡುವುದು
ಫೀಸ್ ಫಿಲ್ಮ್ ಪಾಸ್
ಬಟ್ಟೆ ಬರೆಗೆ
ದುಡ್ಡು ಕೊಡುವುದು
ಮಾತ್ರ ನನ್ನ ಕೆಲಸ
ನಾನು ಹಣ ಇರಲೇ ಬೇಕಾದ
ಎಟಿಎಂ
ಏನ್ ಮಾಡೋದು
ಜನರೇಶನ್ ಗ್ಯಾಪ್
✍ಸುಧಾಕರ್ ಬನ್ನಂಜೆ