January 18, 2025
nanda

ಭಾರತ ದೇಶದ ಚರಿತ್ರೆಯನ್ನು ತೆರೆದರೆ ಎದುರಿಗೆನಿಲ್ಲುತ್ತದೆ ನಂದ ವಂಶ ಮತ್ತು ಅವರ ಬೃಹತ್ ಸಾಮ್ರಾಜ್ಯ. ನಮ್ಮ ದೇಶದ ಚರಿತ್ರೆಯಲ್ಲಿ ಸೂದ್ರರೊಬ್ಬರು ಸಾಮ್ರಾಜ್ಯ ಕಟ್ಟಿ ಬೆಳೆಸಿದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಏಕೈಕ ವಂಶ ಅಂದರೆ ಅದು “ದಿ ಗ್ರೇಟ್ ನಂದ ವಂಶ” ಮಾತ್ರ. ಇದೇ ಪ್ರಾಚೀನ ಭಾರತದ ಮೊದಲ ಚಕ್ರವರ್ತಿ ವಂಶ. ನಂದ ವಂಶದ ಆ ಸೂದ್ರ ಚಕ್ರವರ್ತಿ ಮತ್ತೆ ಯಾರೂ ಅಲ್ಲ. ಅವನೇ ಸಾಮ್ರಾಟ್ ಮಹಾಪದ್ಮ ನಂದ. ಇವನೇ ನಂದ ವಂಶದ ಸಂಸ್ಥಾಪಕ.ಇವನನ್ನು ಎಲ್ಲಾ ಕ್ಷತ್ರಿಯರ ವಿನಾಶಕ ಎಂದಿದ್ದಾರೆ.ಎರಡನೆಯ ಪರಶುರಾಮ ಎಂದಿದ್ದಾರೆ ಹಲವು ಲೇಖಕರು ಬರಹಗಾರರು. ನಂದರ ಸಾಮ್ರಾಜ್ಯ ಪೂರ್ವ ಭಾರತದಿಂದ ಉತ್ತರ ಭಾರತದ ಬಹುಭಾಗವನ್ನು ಒಳಗೊಂಡಿತ್ತು. ಅಲ್ಲದೆ ಆಂಧ್ರ, ಮದರಾಸು, ಮೈಸೂರು ಪ್ರಾಂತ್ಯದವರೆಗೂ ಹಬ್ಬಿತ್ತು ಎಂದು ಪುರಾವೆಗಳು ಸಿಕ್ಕಿವೆ.

Nanda Empire - Wikipedia
ಮಗಧ ಪ್ರದೇಶದಿಂದ ಇವನ ಸಾಮ್ರಾಜ್ಯ ಆರಂಭ ಆಗುತ್ತದೆ. ಕ್ರಿಸ್ತಪೂರ್ವ 362 ರಲ್ಲಿ ಮಹಾಪದ್ಮ ನಂದನು ಪಾಟಲಿಪುತ್ರ ರಾಜಧಾನಿಯಲ್ಲಿ ಸಿಂಹಾಸನ ಏರುವನು. ಪರಿಷ್ಟ ಪರ್ವನ್ ಮತ್ತು ಅವಶ್ಯಕ ಸೂತ್ರದಂತಹ ಜೈನ ಕೃತಿಗಳಲ್ಲಿ ಮಹಾಪದ್ಮ ನಂದನ ತಂದೆಯು ಶಿಶುನಾಗ ರಾಜವಂಶದ ರಾಜನ ಅರಮನೆಯಲ್ಲಿ ಗಣಿಕೆ (Accountant) ನಾಗಿದ್ದ. ಅರಮನೆಯಲ್ಲಿ ಕೇಶ ಶೈಲಿ, ಕೇಶ ಕಲೆಗಾರ,ಕೇಶ ವಿನ್ಯಾಸಕ(Barber)ನಾಗಿ ತನ್ನ ವೃತ್ತಿ ಮಾಡುತ್ತಿದ್ದ. ಇವನು ಬಹಳ ಸುಂದರನಾಗಿದ್ದ. ತುಂಬಾ ಪ್ರತಿಭಾವಂತನಾಗಿದ್ದ. ಅರಮನೆಯಲ್ಲಿ ತುಂಬಾ ಪ್ರಭಾವಿತನಾಗಿ ಮಿಂಚುತ್ತಿದ್ದ. ನಿಧಿ ಭಂಡಾರವನ್ನು ನಿರ್ವಹಣೆ ಮಾಡಿ ಕೋಶಾಧಿಕಾರಿ ಆಗಿ ಕೆಲಸ ಮಾಡುವನು. ಇವನನ್ನು ‘ಭಂಡಾರಿ’ ಎಂದು ಕರೆಯು ಮಟ್ಟಿಗೆ ಹಿಡಿತ ಸಾಧಿಸುತ್ತಾನೆ. ಇದನ್ನು ಕಂಡ ರಾಜ
ಮತ್ತು ಅವನ ಮಕ್ಕಳು ಕೇಶ ವಿನ್ಯಾಸಕ ಜಾತಿಯವನೆಂದು ಕೀಳಾಗಿ ಕಾಣುವರು.

Mahapadma Nanda founder of Nanda dynasty

ಇವನ ಒಳ್ಳೆಯ ವ್ಯಕ್ತಿತ್ವವನ್ನು ಕೀಳಾಗಿ ಕಾಣುವರು. ಅವಮಾನ ತಡೆಯಲಾರದೆ ಅವನು ಶಿಶುನಾಗ ರಾಜವಂಶದ ರಾಜನನ್ನು ಕೊಲೆ ಮಾಡುವನು. ಕೊನೆಗೆ ರಾಜನ ಮಕ್ಕಳನ್ನೂ ಸಾಯಿಸುವನು. ಇದೇ ಕೇಶ ವಿನ್ಯಾಸಕನೊಬ್ಬ ತನ್ನ ಮಗನಾದ ಮಹಾಪದ್ಮ ನಂದನನ್ನು ನಂದ ಸಾಮ್ರಾಜ್ಯದ ರಾಜನನ್ನಾಗಿ ಪಟ್ಟದಲ್ಲಿ ಕೂರಿಸುವನು.ಪುರಾಣಗಳ ಪ್ರಕಾರ ಮಹಾಪದ್ಮ ಅಥವಾ ಮಹಾಪದ್ಮಪತಿ ಎಂದಿದೆ. ಬೋದಿ ವಂಶದ ಪ್ರಕಾರ ಇವನ ಹೆಸರು ಉಗ್ರಸೇನ ಎಂದಿದೆ. ರೋಮನ್ ಇತಿಹಾಸಕಾರ ಕರ್ಟಿಯಸ್ ಪ್ರಕಾರ ಶಿಶುನಾಗ ರಾಣಿಯ ಹೆಸರು ಸುನಂದಾ ಆಗಿತ್ತು. ಮಹಾಪದ್ಮನ ಹೆಸರಿಗೆ ಸುನಂದಾ ಹೆಸರಿನ “ನಂದ”ಪದವನ್ನು ಸೇರಿಸಿ ಮಹಾ ಪದ್ಮನಂದ ಎಂದು ಕರೆದಿದ್ದಾರೆ. ನಂತರದಲ್ಲಿ ಮಹಾ ಪದ್ಮನ ಎಂಟು ಮಕ್ಕಳಿಗೂ ನಂದ ಪದವನ್ನು ಇಟ್ಟು “ನವ ನಂದರು” ಎಂದು ಕರೆಸಿ ಕೊಂಡರು ಎಂದಿದ್ದಾನೆ.

Nanda Empire - Wikiwand
ಮಹಾಪದ್ಮನಂದನು ತನ್ನ ತಂದೆಯ ಪ್ರಭಾವದಿಂದ ಸೇನಾಧಿಪತಿ ಆಗಿದ್ದ ಮತ್ತು ಅವನ ತಂದೆ ಕೇಶ ಕಲೆಗಾರನಾಗಿದ್ದ ಎಂದು ಪುರಾಣಗಳಲ್ಲಿ ವಿಷಾಕದತ್ತನು ತಾನು ಬರೆದ ಮುದ್ರರಾಕ್ಷಸ ಪುಸ್ತಕದಲ್ಲಿ ಬರೆದಿರುವನು. ಜಾತಿಯ ವಿಷಯದಲ್ಲಿ ಅವಮಾನ ತಡೆಯಲಾರದೆ ಶಿಶುನಾಗ ರಾಜವಂಶದ ರಾಜನನ್ನು ಮತ್ತು ಅವರ  ಪರಿವಾರವನ್ನು ನಂದರು ಸಾಯಿಸಿ  ಸರ್ವಾಧಿಕಾರಿ ಆಗಿ ನಂದ ಸಾಮ್ರಾಜ್ಯವನ್ನು ಸುದೀರ್ಘ ಕಾಲ ಆಳುವರು.
ಬಲಿಷ್ಠ ಸೈನ್ಯ ಬಲ ನಂದ ಸಾಮ್ರಾಜ್ಯದಲ್ಲಿತ್ತು. ಎರಡು ಲಕ್ಷ ಸೈನಿಕರು, ಎಂಭತ್ತು ಸಾವಿರ ಅಶ್ವದಳ, ಎಂಟು ಸಾವಿರ ಯುದ್ಧ ರಥಗಳು, ಆರು ಸಾವಿರ ಯುದ್ಧ ಗಜಗಳು . ಇದು ಅತ್ಯಂತ ಕಡಿಮೆ ಅಂದಾಜಿನ ಪ್ರಕಾರ ವಾಗಿತ್ತು.

ನಂದರು ಎಲ್ಲೆಡೆ ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಯೊಜನೆಗಳನ್ನು ಕೈಗೊಂಡಿದ್ದರು. ಅದೇ ರೀತಿ ರೈತರಿಂದ  ಹೆಚ್ಚಿನ ಗೇಣಿ ತೆರಿಗೆ ತೆಗೆದು ಕೊಳ್ಳುತ್ತಿದ್ದರು. ಜಾತಿ ನಿಂದನೆಯಿಂದ ಬೇಸತ್ತ ನಂದರು ವೈದಿಕ
ಧರ್ಮವನ್ನು ವಿರೋಧಿಸಿ ಜೈನ ಧರ್ಮ ಮತ್ತು ಬೌದ್ಧ ಧರ್ಮಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಜನನ,ಮರಣ, ಮದುವೆ ಇತ್ಯಾದಿ ಹಿಂದೂ ಧರ್ಮದ ಕಾರ್ಯಕ್ರಮಗಳಿಗೆ ವೈದಿಕರನ್ನು ಕರೆಯದೆ ತಮ್ಮ ಜಾತಿ (Barber) ಯವರನ್ನೇ ಕಳುಹಿಸಿ ಅವರ ಕೈಯಿಂದಲೇ ಕಾರ್ಯಕ್ರಮಗಳನ್ನು ನಡೆಸುವ ಕಾನೂನನ್ನು ಜಾರಿಗೊಳಿಸುತ್ತಿದ್ದರು. ಕ್ಷತ್ರಿಯರು ಪರೋಕ್ಷವಾಗಿ ನಂದರಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಇತರ ಎಲ್ಲಾ ಸೂದ್ರರು ನಂದರಿಗೆ ಸಹಕರಿಸುತ್ತಿದ್ದರು.

Nanda Empire - Wikiwand
ನಂದರ ಆಸ್ಥಾನ ಮತ್ತು ಸರಕಾರದ ಇಲಾಖೆಗಳಲ್ಲಿ‌ ಜೈನರಿಗೆ ಮತ್ತು ಬೌದ್ಧರಿಗೆ ಮೊದಲ ಪ್ರಾಶಸ್ತ್ಯ ಇತ್ತು. ತನ್ನಜಾತಿಯವರು ಎಲ್ಲಾ ಇಲಾಖೆಗಳ ಕೋಶಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಅವಕಾಶ.
ತೆರಿಗೆ ವಸೂಲಿ ಮಾಡಿ ಲೆಕ್ಕ ಪತ್ರ ಇಡುವ ಕೆಲಸ. ಎಲ್ಲಾ ತನ್ನ ಸ್ವಜಾತಿಯವರಾಗಿತ್ತು. ಸರಕಾರದ ನಿಧಿ ಭಂಡಾರವನ್ನು ಕಾಯುವ ಕೆಲಸ ಇವರದಾಗಿತ್ತು. ಇವರಲ್ಲದೆ ಸುದ್ದಿ ಪ್ರಚಾರಕರೂ ಆಗಿದ್ದರು. ಕೃಷಿಯಿಂದ ವಸೂಲಿ ಮಾಡಿದ ಗೇಣಿ ‌ತೆರಿಗೆಯನ್ನು ಸೈನ್ಯವನ್ನು ಬೆಳೆಸಲು ವಿನಿಯೋಗ ಮಾಡುತ್ತಿದ್ದರು.ತಮ್ಮ ಭಂಡಾರದಲ್ಲಿ ಅಪಾರವಾದ ಸಂಪತ್ತು ಬೆಳ್ಳಿ ಬಂಗಾರವನ್ನು ಸಂಗ್ರಹಿಸುತ್ತಿದ್ದರು. ನಂದರ ಮಂತ್ರಿ ಮಂಡಲದಲ್ಲಿ ಜೈನರು ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಿಗಳು ಇದ್ದರು. ಮಹಾಪದ್ಮ ನಂದನ ಕೊನೆಯ ಮಗ ಧನನಂದನ ಕಾಲದಲ್ಲಿ ಅಲೆಗ್ಸಾಂಡರ್ ವಾಯವ್ಯ ಭಾರತವನ್ನು ಆಕ್ರಮಣ ಮಾಡುವನು.ಧನನಂದನ ಸೈನ್ಯವನ್ನು ಕಂಡು ಅಲೆಗ್ಸಾಂಡರ್ ಹೆದರಿ ತನ್ನ ಯಾತ್ರೆಯನ್ನು ಮೊಟಕು ಗೊಳಿಸುವನು. ಅಲೆಗ್ಸಾಂಡರ್ ಸೈನ್ಯದ ಎಂಟು ಪಟ್ಟು ಹೆಚ್ಚು ಸೈನ್ಯ ನಂದರಲ್ಲಿತ್ತು. ಇದರಿಂದ ಅಲೆಗ್ಸಾಂಡರ್ ಸೈನಿಕರು ಬೀನ್ಸ್ ನದಿಯಿಂದ ಮುಂದೆ ನುಗ್ಗಲು ಹೆದರಿದರು. ಹಿಮಾಲಯದಿಂದ ನರ್ಮದೆಯ ವರೆಗೆ ಮತ್ತು ಬಿಯಾಂಡ್ ನಿಂದ ಕಳಿಂಗದವರೆಗೆ ನಂದರ ಸಾಮ್ರಾಜ್ಯ ವಿಸ್ತಾರವಾಗಿ ಹರಡಿತ್ತು.

Nanda Sena: Samrat Mahapadma Nanda - The first king of Akhila Bharata khanda


ಮತ್ಸ ಪುರಾಣಗಳಲ್ಲಿ ನಂದರು 88 ವರ್ಷ ದೇಶವನ್ನು ಆಳಿದರು ಎಂದಿದೆ.ಹತಿಗುಂಪ ಶಾಸನದಲ್ಲಿ 103 ವರ್ಷ ಎಂದಿದೆ. ಆದರೆ ಜೈನಲೇಖಕನಾದ ಮೇರುತುಂಗ ಇವನ ” ವಿಚಾರ ಶ್ರೇಣಿ” ಪುಸ್ತಕದಲ್ಲಿ 155 ರಿಂದ 175 ವರ್ಷಗಳವರೆಗೆ ನಂದರ ಸಾಮ್ರಾಜ್ಯ ವಿಸ್ತಾರವಾಗಿ ಇದ್ದು ಬಲಿಷ್ಠವಾಗಿತ್ತು ಎಂದು ಬರೆದಿರುವನು. ಚಾಣಕ್ಯನ ಪ್ರವೇಶ ಚಾಣಕ್ಯನು ಅರ್ಥ ಶಾಸ್ತ್ರದ ತಜ್ಞನಾಗಿದ್ದ. ಸೂದ್ರರೆಂದರೆ ಅವನಿಗೆ ಅಷ್ಟಕ್ಕೆ ಅಷ್ಟೇ. ಶತ್ರುಗಳನ್ನು ಮುಗಿಸಲು ಸಂಹಾರ ಮಾಡಲು ವಿವಿಧ ತಂತ್ರಗಳನ್ನು ಕಲಿತಿದ್ದ. ನಂದ ವಂಶವನ್ನು ಮಣ್ಣು ಮುಕ್ಕಿಸಿ ಬಿಡುವಲ್ಲಿ ಜಯಶೀಲನಾಗುವನು. ನಂದರ ಕೊನೆಯ ದೊರೆ ಧನನಂದನನ್ನು ವೇಷ ಬದಲಾಯಿಸಿ ಕೊಂಡು ತಲೆಯನ್ನು ಕತ್ತರಿಸಿ ಬಿಡುವನು.

ಒಮ್ಮೆ ಧನನಂದನಿಗೆ ” ಅಖಂಡ ಭಾರತ”ದ ಸಲಹೆ ನೀಡಿ ಉಡುಗೊರೆ ಪಡೆಯುವ ಸಲುವಾಗಿ
ಆಶೆಯಿಂದ ಇರುವನು.ಧನನಂದನಿಗೆ ವಿಷ್ಣು ಗುಪ್ತ (ಚಾಣಕ್ಯ)ಮಹಾ ಚಾಣಕ್ಯ ಎಂದು ತಿಳಿದಿತ್ತು.ಅವನ ಸಲಹೆಗಳನ್ನು ಒಪ್ಪುವುದಿಲ್ಲ.ಈ ಸಿಟ್ಟಿನಿಂದ ಅಲ್ಲೇ ಕೂಟದಲ್ಲಿ”ಸೂದ್ರ ನಂದ ಸಾಮ್ರಾಜ್ಯವನ್ನು ಪತನ ಮಾಡುವೆನು”ಎಂದು ಪ್ರತಿಜ್ಞೆ ಮಾಡುವನು.ಧನನದನು ಅವನನ್ನು ಬಂಧಿಸಲು ಹೇಳುವನು. ಅಷ್ಟರಲ್ಲೇ ಚಾಣಕ್ಯ ಪರಾರಿ ಆಗಿದ್ದ‌‌. ಚಾಣಕ್ಯನು ಧನನಂದನ ಮಗ ಪಬ್ಬಟನ ಸ್ನೇಹ ಸಂಪಾದಿಸುವನು.ಅವನಿಂದ ರಾಜಮುದ್ರೆ ಉಳ್ಳ ಉಂಗುರವನ್ನು ಚಾಣಾಕ್ಷತನದಿಂದ ಪಡೆಯುವನು. ರಾಜ ಮುದ್ರೆ ಉಳ್ಳ ಉಂಗುರದಿಂಧ ಮೋಸದಿಂದ ಎಂಭತ್ತು ಕೋಟಿ ಬಂಗಾರದ ವರಹಗಳನ್ನು ಸಂಪಾದಿಸಿ ಕಾಡಲ್ಲಿ ಬಚ್ಚಿಡುವನು.ಭೋಜನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಗುಪ್ತನಿಗೆ ಎಲ್ಲಾ ತರದ ವಿದ್ಯೆಯನ್ನು ಕಲಿಸುವನು.

Story of The Great Chanakya | Full Life Story Of Chanakya

ರಹಸ್ಯವಾಗಿ ಸೈನ್ಯವನ್ನು ನಿರ್ಮಿಸುವನು.ಖರ್ಚಿಗೆ ಮೋಸದಿಂದ ಸಂಪಾದಿಸಿದ್ದ ವರಹಗಳನ್ನು ಖರ್ಚು ಮಾಡುವನು.ಧನನಂದನ ಮಗ ಪಬ್ಬಟನನ್ನು ಮೋಸದಿಂದ ಚಂದ್ರ ಗುಪ್ತನಿಂದ ಸಾಯಿಸುವನು.ಸಣ್ಣ ಪುಟ್ಟ ರಾಜರು ಧನನಂದನಿಗೆ ಹೆದರಿ ಚಂದ್ರ ಗುಪ್ತನ ಸೈನ್ಯವನ್ನು ಸೇರಲು ಹಿಂದೇಟು ಹಾಕುವರು. ಅವರನ್ನು ಚಾಣಕ್ಯನು ವಿಷ ಕನ್ಯೆಯರಿಂದ ಸಾಯಿಸುವನು.ಧನನಂದನು ಸೂದ್ರ ಎಂಬ ಮಾತ್ರಕ್ಕೆ ಚಾಣಕ್ಯನು ವೇಷ ಬದಲಾಯಿಸಿ ಕೊಂಡು ನಂದ ವಂಶದ ಒಂಭತ್ತನೇ ಕೊನೆ ಕೊಂಡಿಯನ್ನು ತಲೆ ಕಡಿದು ಕೊಲೆ ಮಾಡುವನು.ಅಲ್ಲಿ ನಂದಸಾಮ್ರಾಜ್ಯ ಪತನವಾಗುವುದು.

ನಂದರ ಅಪಾರ ಸಂಪತ್ತು ನರಿ ನಾಯಿ ತಿಂದುಹೋಯಿತು ಎಂಬ ಮಾತು ಈಗಲೂ ಜೀವಂತವಾಗಿ
ದೆ.ಸಿಕ್ಕ ಸಿಕ್ಕವರು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿಯುತ್ತದೆ.ಈಗ ಕೆಲವು ದೇವಾಲಯಗಳ
ಲ್ಲಿ ಅಪಾರವಾದ ಬಗೆ ಬಗೆಯ ಬಂಗಾರ,ಬೆಳ್ಳಿ ,ಬೆಲೆಬಾಳುವ ವಜ್ರ ಇತ್ಯಾದಿಗಳ ಸಂಗ್ರಹ ಇರುವುದು ಕೂಡಾ ನಂದರ ಕಾಲದ್ದು ಆಗಿರಬಹುದು.ಇದನ್ನು ಅಲ್ಲಗಳೆಯುವಂತಿಲ್ಲ.ನಂದರ ಆಳುವಿಕೆ ಪತನ ಆದ ಬಳಿಕ ಅವರ ಸಂಪತ್ತುಗಳನ್ನು ಅಡಗಿಸಿಟ್ಟಿರಬಹುದು.

322 B.C.E. - P - Chandragupta Maurya and Chanakya,... | Sutori



ಚಾಣಕ್ಯನೇ ಸಾಕಿ ಸಲಹಿದ ಚಂದ್ರ ಗುಪ್ತನೇ ಮೌರ್ಯ ಸಾಮ್ರಾಜ್ಯದ ರಾಜನಾಗುವನು.ಚಾಣಕ್ಯ ಪ್ರಧಾನ ಮಂತ್ರಿ ಆಗುವನು.ರಾಜನ ಪ್ರಭಾವಕ್ಕಿಂತ ಚಾಣಕ್ಯನ ಪ್ರಭಾವವೇ ಹೆಚ್ಚಾಗಿರುತ್ತದೆ.ಚಾಣಕ್ಯ ಚಂದ್ರಗುಪ್ತನಿಗೆ ಅಂಗ ರಕ್ಷಕರ ಜೊತೆಗೆ ವಿಷಕನ್ಯೆಯರನ್ನು ನೇಮಿಸುತ್ತಿದ್ದನು. ಅಲ್ಲದೆ ಚಂದ್ರಗುಪ್ತನಿಗೆ ಆಹಾರದಲ್ಲಿ ದಿನಾ ವಿಷ ಬೆರೆಸಿ ಕೊಡುತ್ತಿದ್ದ. ಚಾಣಕ್ಯನ ಕೈಗೊಂಬೆಯಂತೆ ಚಂದ್ರಗುಪ್ತ ಮೌರ್ಯ ಇರುತ್ತಿದ್ದ.

ಧನನಂದನ ಮಗಳನ್ನು ಚಂದ್ರ ಗುಪ್ತನೇ ಮದುವೆ ಆಗಿರುತ್ತಾನೆ. ಒಮ್ಮೆ ಚಂದ್ರಗುಪ್ತನಿಗೆ ಕೊಡುವ ವಿಷ ಬೆರೆಸಿದ ಆಹಾರವನ್ನು ಅವನ ಪತ್ನಿ ದುರ್ಧರಾ ಸೇವಿಸುವಳು.ಆಗ ಅವಳು ತುಂಬು ಗರ್ಭಿಣಿ ಆಗಿದ್ದಳು. ಅವಳು ಸಾಯುವ ಸ್ಥಿತಿಯಲ್ಲಿರುವಾಗ ಅವಳ ಹೊಟ್ಟೆಯಲ್ಲಿದ್ದ ಮಗುವನ್ನು ಚಾಣಕ್ಯನು ಅವಳ ಹೊಟ್ಟೆ ಸೀಳಿ ಹೊರಗೆ ತೆಗೆಯುವನು. ದುರ್ಧರಾ ಸಾಯುವಳು.ಆವಳ ಮಗನೇ ಬಿಂದುಸಾರ ಚಕ್ರವರ್ತಿ. ದುರ್ಧರಾ ಒರ್ವ ಕೇಶ ಶೈಲಿಯ ಸೂದ್ರ ರಾಜನ ಮಗಳು ಎಂಬ ಕೆಟ್ಟ ಯೋಚನೆ ಚಾಣಕ್ಯನಲ್ಲಿತ್ತು.

History | History, Literature, Puranas


ಚಾಣಕ್ಯನ ವಿವಿಧ ತಂತ್ರಗಳನ್ನು ತಡೆಯಲಾರದೆ ಬೇಸತ್ತು ಜೈನ ಧರ್ಮಕ್ಕೆ ಸೇರುವನು ಚಂದ್ರಗುಪ್ತ.ತನ್ನ ಸಾಮ್ರಾಜ್ಯವನ್ನು ಮಗ ಬಿಂದುಸಾರನ ಕೈಗೆ ಕೊಟ್ಟು ಚಂದ್ರ ಗುಪ್ತನು ಕರ್ನಾಟಕಕ್ಕೆ ಬರುವನು. ಆಗಲೇ ನಂದರ ಪ್ರೋತ್ಸಾಹದಿಂದ ಜೈನ ಧರ್ಮ ಶ್ರವಣ ಬೆಳಗೊಳದಲ್ಲಿ ಬಹಳಷ್ಟು ಗಟ್ಟಿಯಾಗಿತ್ತು. ಚಂದ್ರಗುಪ್ತನು ಇಲ್ಲಿ ಕೆಲವು ವರ್ಷ ಇದ್ದು ತನ್ನ 42 ನೇ ವಯಸ್ಸಿನಲ್ಲೇ ಸಲ್ಲೇಖನ ವೃತ ಆಚರಿಸಿ ಅನ್ನ ನೀರು ಬಿಟ್ಟು ದೇಹ ತ್ಯಜಿಸುವನು. ಚಂದ್ರ ಗುಪ್ತನೂ ಕೂಡಾ ನಂದರಾಜನೊಬ್ಬನಿಗೆ ಅನ್ಯ ಮಹಿಳೆಗೆ ಹುಟ್ಟಿದ ಮಗನಾಗಿದ್ದ ಎಂದು ಬರಹಗಾರರು ತಿಳಿಸಿದ್ದಾರೆ.

ಚಾಣಕ್ಯನು ಚಂದ್ರಗುಪ್ತ ಮೌರ್ಯನಿಗೂ ಪ್ರಧಾನಿ ಆಗಿದ್ದ. ನಂತರ ಅವನ ಮಗ ಬಿಂದುಸಾರನಿಗೂ
ಪ್ರಧಾನಿ ಆಗಿದ್ದ. ಮುದುಕನಾದರೂ ಪ್ರಧಾನಿ ಪಟ್ಟವನ್ನು ಯಾರಿಗೂ ಬಿಟ್ಟು ಕೊಡುತ್ತಿರಲಿಲ್ಲ.ತನ್ನದೇ ಮಾತುಗಳು ನಡೆಯಬೇಕು ಎಂಬ ಹಠವಾದಿ. ಚಾಣಕ್ಯರು ಹಿರಿಯರು ತಿಳಿದವರೆಂದು ಚಂದ್ರಗುಪ್ತ ಮತ್ತು ಬಿಂದುಸಾರರು ಕೇಳುತ್ತಲೇ ಬಂದಿದ್ದರು. ಬಿಂದುಸಾರನ ಸರ್ಕಾರದಲ್ಲಿ ಕಿರಿಯರಿಗೆ ಯಾವುದೇ ಗೌರವ ಈ ಚಾಣಾಕ್ಷನಿಂದ ಸಿಗುತ್ತಿರಲಿಲ್ಲ.ಇಂತಹ ಚಾಣಾಕ್ಷನ ಸರ್ವಾಧಿಕಾರಿ ಧೋರಣೆಯಿಂದ ಹೊರ ಬರಲು ಒರ್ವ ಕಿರಿಯ ಮಂತ್ರಿ
ಸುಬಂಧು ಎಂಬಾತ ಸಾಮ್ರಾಟ್ ಬಿಂದುಸಾರನಲ್ಲಿ ಅವನ ಹೆತ್ತವರ ವೃತ್ತಾಂತವನ್ನು ತಿಳಿಸುವನು.

राजा बिन्दुसार का इतिहास | History Of King Bindusara in Hindi Biography of  Maurya Emperor Bindusara in Hindi इतिहास और ज… | History of india, History,  Female sketch


ತನ್ನ ತಾಯಿಯನ್ನು ಸಾಯಿಸಿದ ಚಾಣಕ್ಯನ ಮೇಲೆ ಸಿಟ್ಟಾಗುವನು ಬಿಂದುಸಾರ. ತನ್ನ ತಾಯಿಯನ್ನೇ ನೆನೆದು
ಅತ್ತು ಬಿಡುವನು. ಮುದುಕ ಚತುರ ಚಾಣಾಕ್ಷನ ಮಾತುಗಳನ್ನು ಬಿಂದುಸಾರ ಧಿಕ್ಕರಿಸುವನು. ಅದೆಷ್ಟೋ ಹತ್ಯೆ ಮಾಡಿದ ಚಾಣಕ್ಯನು ಸಿಟ್ಟು ತಡೆಯಲಾರದೆ ಬಿಂದುಸಾರನ ಸರ್ಕಾರವನ್ನು ತೊರೆದುನಾಡಿನಿಂದ ಕಾಡಿಗೆ ಹೋಗುತ್ತಾನೆ. ಗುಡಿಸಲಿನಲ್ಲಿರುತ್ತಾನೆ. ನಂದರ ಭದ್ರವಾದ ಬಲಿಷ್ಠವಾದ ವಿಸ್ತಾರವಾದ ಸಾಮ್ರಾಜ್ಯವನ್ನು ಪತನಗೊಳಿಸಿ ಅದರ ಅಡಿಯಲ್ಲೇ ಮೌರ್ಯರ ಸಾಮ್ರಾಜ್ಯವನ್ನು ತಾನೇ ಸ್ಥಾಪನೆ ಮಾಡಿದ ಮೌರ್ಯ ವಂಶದವರಿಂದಲೇ ಸುಟ್ಟುಭಸ್ಮ ಆಗುವನು. ಅಂದರೆ ಬಿಂದುಸಾರನ ಮಂತ್ರಿ ಸುಬಂಧು ತಾನೇ ಸ್ವತಃ ಚಾಣಕ್ಯನ ಗುಡಿಸಲಿಗೆ ಬೆಂಕಿ ಕೊಟ್ಟು ಬಿಡುವನು. ಗುಡಿಸಲೊಡನೆ ಚಾಣಕ್ಯನೂ ಸುಟ್ಟು ಭಸ್ಮ ವಾಗುವನು.
‌ದ್ವೇಷದಿಂದ ಸೇಡಿಗಾಗಿ ಹೊರಟವನು ಒಂದಲ್ಲ ಒಂದು ದಿನ ಸುಡುಗಾಡು ಸೇರುತ್ತಾನೆ ಎಂಬ ಸತ್ಯದ
ಮಾತು ಚಾಣಾಕ್ಷನ ಕತೆಯಲ್ಲಿ ನಿಜವಾಗುತ್ತದೆ.

‌ಮಹಾ ಚತುರ ಚಾಣಾಕ್ಷನ ನೀತಿ ಪಾಠದಲ್ಲಿ ಪರೋಕ್ಷವಾಗಿ ನಂದವಂಶದ ಕೇಶ ಕಲೆಗಾರರಿಗೆ ಬಾಣ ಬಿಟ್ಟಿರುವುದು ಕಂಡು ಬರುತ್ತದೆ.ಮನುಷ್ಯರಲ್ಲೇ ಇವರು ಮೋಸಗಾರರು ಎಂದಿದ್ದಾನೆ. ಪಕ್ಷಿಗಳಲ್ಲಿ
ಕಾಗೆ ಮೋಸ ಮಾಡುತ್ತದೆ. ಪ್ರಾಣಿಗಳಲ್ಲಿ ನರಿ ಮೋಸ ಮಾಡುತ್ತದೆ ಎಂದಿದ್ದಾನೆ. ಆದರೆ ಅವನೆಷ್ಟು
ಮೋಸ,ವಂಚನೆ, ಹತ್ಯೆ,ಕೊಲೆ ಎಷ್ಟು ಮಾಡಿದ್ದಾನೆ ಎಂದು ಅವನು ಮರೆತಿದ್ದ.



ನಂದರ ಸಾಮ್ರಾಜ್ಯ ವಿಸ್ತಾರವಾಗಿ ಹರಡಿ ಗೋದಾವರಿ ನದಿಯ ಪ್ರದೇಶದಲ್ಲಿ”ನವನಂದ ದೇಶ” ಎಂಬ ಪತ್ತಣ ದಖನ್ ಪ್ರಸ್ಥಭೂಮಿಯ ಮೇಲೆ ಆಡಳಿತ ನಡೆಸಿತ್ತು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇವರು ಬಳ್ಳಾರಿ ಮೈಸೂರು ಸೀಮೆಯವರೆಗೂ ಆಡಳಿತ ನಡೆಸಿದ್ದರು ಎಂದು ಚಿತ್ರದುರ್ಗದಲ್ಲಿ ದೊರೆತ ಶಾಸನ ತಿಳಿಸಿದೆ.ಜಾತಿ ನಿಂದನೆಯಿಂದ ನೊಂದು ಬೇಸತ್ತು ವೈದಿಕ ಧರ್ಮವನ್ನು ವಿರೋಧಿಸುತ್ತಾ ಜೈನ ಧರ್ಮ ಮತ್ತು ಬೌದ್ಧ ಧರ್ಮವನ್ನು ಪ್ರೋತ್ಸಾಹಿಸುತ್ತಿದ್ದರು. ಈ ಕಾಲದಲ್ಲಿ ಜೈನಧರ್ಮವು ಎಲ್ಲೆಡೆ ಮೆರೆದು ಪ್ರಚಾರ ಪಡೆಯುವುದು.



 ಅದರಂತೆ ಕರ್ನಾಟಕದಲ್ಲೂ ಮಿಂಚಿರುವುದು. ಇದೇ ಕಾಲದಲ್ಲಿ ತುಲುನಾಡಲ್ಲೂ ಜೈನ ಧರ್ಮ ಸ್ಥಾಪಿಸಲು ಜೈನರು ತುಲುನಾಡು ಪ್ರವೇಶಿಸುವರು. ಅವರ ಧರ್ಮವು ಕುಡುಮ ಎಂಬ ಸ್ಥಳದಲ್ಲಿ ತಳವೂರುವುದು. ಅದೇ ಮುಂದಕ್ಕೆ ಧರ್ಮಸ್ಥಳ ಎಂದು ಕರೆಯಲಾಗುತ್ತದೆ.

ಜೈನರ ವಿನಂತಿ ಮೇರೆಗೆ ನಂದರಾಜನು ತನ್ನದೇ ವಂಶದ ಕೆಲವು ಭಂಡಾರಕರನ್ನು ಜೈನರ ಹೊಸ ತುಲುನಾಡು ಸಾಮ್ರಾಜ್ಯ ಕಟ್ಟಲು ಅವರಿಗೆ ನೆರವಾಗಲು ಕಳುಹಿಸಿ ಕೊಡುವನು. ಈ ಭಂಡಾರಕರು ಮೂಲ ಕೇಶ ಕರ್ಮದ ಕಲೆಯವರು. ನಂದರ ಸಾಮ್ರಾಜ್ಯದಲ್ಲಿ ಉತ್ತಮ ಹುದ್ದೆಯಲ್ಲಿ ಇದ್ದವರು. ಕೃಷಿ ಪರಿಣಿತರು.ಕಾಲುವೆ ನಿರ್ಮಾಣ ಕಾರ್ಯ ನಿರ್ವಹಿಸುವವರು. ಕಳಿಂಗರಾಜ್ಯದವರು. ಇತರರ ಜನನ,ಮರಣ,ಇತರ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಶುಭ್ರವಾಗಿ ನಡೆಸಿ ಕೊಡುವವರು. ಗಣಿಕೆಯವರು, ಕೋಶಾಧಿಕಾರಿಗಳು.
ನಂದ ಸಾಮ್ರಾಜ್ರದ ಕಳಿಂಗ (ಒಡಿಶಾ) ಮತ್ತುಇತರ ಕೆಲವು ರಾಜ್ಯಗಳಲ್ಲಿ ಈಗಲೂ ಕೇಶ ಕಲಾಕಾರರನ್ನು “ಭಂಡಾರಿ”ಎನ್ನುವರು. ಅಂದು ಕಳಿಂಗ ರಾಜ್ಯದಿಂದ ಬಂದ ಭಂಡಾರಿಗಳನ್ನು ಅದೇ ಹೆಸರಿನಲ್ಲಿ ಕರೆಯುತ್ತಾ ಬಂದರು ತುಲುನಾಡು ಜೈನರು .ಅದೇ ಕೆಲಸಗಳನ್ನು ತುಲುನಾಡಲ್ಲೂ ನಿರ್ವಹಿಸಲು ಜೈನ ರಾಜರು ವ್ಯವಸ್ಥೆ ಮಾಡುವರು.



ಈ ಕೆಳಗಿನ ಕೆಲಸಗಳನ್ನು ಕಳಿಂಗ ಭಂಡಾರಿಗಳು ತುಲುನಾಡಲ್ಲಿ ನಿರ್ವಹಿಸುವರು

1) ಜೈನರ ಕೇಶಲಂಕಾರ. ಇತರ ಜಾತಿಯವರಿಗೆಮಾಡುವ ಹಾಗಿಲ್ಲ.

2)ಜೈನ ರಾಜ ಮಹಾರಾಜರಿಗೆ ಕಾರ್ಯಕ್ರಮಗಳಲ್ಲಿ ಛತ್ರಿ ಹಿಡಿಯುವುದು.

3)ರಾಜ ಮಹಾರಾಜರ ಪ್ರಥಮ ಸೇವಕನಾಗಿ ಸೇವೆ ಮಾಡುವವರು.

4)ರಾಜ ಮಹಾರಾಜರಿಗೆ ತಾನೇ ಆಯುರ್ವೇದ ಮೂಲಿಕೆಗಳಿಂದ ತೈಲ ತಯಾರಿಸಿ ಅಂಗ ಮರ್ದನ
ಮಸಾಜ್ ಮಾಡಿಸುವುದು.

5) ಸ್ನಾನಕ್ಕೆ ಬಿಸಿ ನೀರು ಕಾಯಿಸಿ ಜಲಧಾರೆ ಮಾಡಿ
ಸುವುದು.

6)ತುಲುನಾಡಲ್ಲಿ ಇನ್ನೂ ದೇವರಾಧನೆ ಆರಂಭ ಆಗಿರದ ಕಾಲವದು. ಜನನ,ಮರಣ, ಮದುವೆ,ಇತರ
ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿಕೊಡುವುದು.

7)ನಂತರದ ಕಾಲದಲ್ಲಿ ಜೈನರ ಬೂತಗಳಿಗೆ ಛತ್ರಿಹಿಡಿಯುವುದು.


8)ರಾಜ ಮಹಾರಾಜರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕುದುರೆ ಗಾಡಿಯ,ಆನೆಗಳ‌ ವ್ಯವಸ್ಥೆ.


9)ಆಳುಗಳಿಗೆ ಪಡಿ ಮಜೂರಿ ವಿತರಣೆ.


10) ಗೇಣಿ ವಸೂಲಿ ಮಾಡಿ ಲೆಕ್ಕ ಪತ್ರ ಬರೆದು ಇಡುವುದು.

11)ಬೇರೆ ಊರಿನ ಇತರ ರಾಜರಿಗೆ ಪತ್ರ ಸುದ್ದಿ ಮುಟ್ಟಿಸುವ ಕೆಲಸ.


12)ಜೈನ ವಧು ವರರ ಸ್ಥಿತಿ ಗತಿ ಅರಿತು ಕೊಂಡು ಬರಲು ಆಯ ಊರಿನ ಭಂಡಾರಿಯೊಡನೆ ಮಾತುಕತೆ ಮಾಡಿ ಪ್ರತ್ಯಕ್ಷ ಅವರ ಮನೆ ಜಮೀನುಗಳನ್ನು ದೂರದಿಂದಲೇ ನೋಡಿ ಮಾಹಿತಿ ನೀಡುವುದು.


13) ಜೈನ ರಾಜ ಮಹಾರಾಜರ ಬಂಡಸಾಲೆ, ದಾಸ್ತಾನು, ಗೋದಾಮು ಇವುಗಳಿಗೆ ಭಂಡಾರಿಯೇ ಉಸ್ತುವಾರಿ ಆಗಿದ್ದ.ನಂದ ಸಾಮ್ರಾಜ್ಯದಲ್ಲೂ ಈ ಕೆಲಸವನ್ನು ಭಂಡಾರಿಯೇ ನಿರ್ವಹಿಸುತ್ತಿದ್ದ.

Tulu-Nadu's Bhootas - Devdutt

14)ಜೈನ ರಾಜ ಮಹಾರಾಜರ ಪಶು ಸಂಗೋಪನಾ ನಿರ್ವಹಣೆ ಮತ್ತು ಊರ ಕೃಷಿ ಮೇಲ್ವಿಚಾರಣೆ. ಭಂಡಾರಿಯನ್ನು ಜೈನ ರಾಜ ಮಹಾರಾಜರು “ಮೇಲಂಟ” ,”ಮೇಲ್ ಬಂಟ” ಎಂದು ಕರೆಯುತ್ತಿದ್ದರು. ಬಂಟ ಎಂದರೆ ಸೇವೆ ಅಥವಾ ಸೇವಕನೆಂಬ ಅರ್ಥ. ಜೈನ ರಾಜ ಮಹಾರಾಜರ ಸೇವೆ ಮಾಡುವುದರಲ್ಲಿ ಭಂಡಾರಿಯಷ್ಟು ನಿಸ್ಸೀಮರು ಬೇರೆ ಯಾರೂ ಇರಲಿಲ್ಲ. ಎಲ್ಲಾ ಸೇವಕರಲ್ಲಿ ಭಂಡಾರಿಯಷ್ಟು ವಿಶ್ವಾಸದ ಸೇವಕರು ಇರಲಿಲ್ಲ. ತನ್ನ ಸೇವೆಯಲ್ಲಿ ಕೀಳರಿಮೆ ಅವರಿಗೆ ಇರಲಿಲ್ಲ.ಒಟ್ಟಾರೆ ರಾಜನ ಸೇವಕನಾಗಿ ಸೇವೆ ಮಾಡುವುದರಲ್ಲಿ ಭಂಡಾರಿಯಷ್ಟು ಮೇಲೆ ಯಾರೂ ಸರಿಸಾಟಿ ಇರಲಿಲ್ಲ. ಜಾತಿ ಕೀಳಾಗಿದ್ದರೂ ತಮ್ಮ ಸೇವೆಯಲ್ಲಿ ಮೇಲೆ ಆಗಿದ್ದರು‌. ಭಂಡಾರಿಗಳ ಸೇವೆ ಕಂಡು ಜೈನ ರಾಜರು ಅವರಿಗೆ ಮೇಲಂಟ/ಮೇಲ್ಬಂಟ ಎಂಬ ಬಿರುದು ಕೊಟ್ಟು ಅಂದೇ ಗೌರವಿಸಿದ್ದಾರೆ. ಸೇವೆಯ ಮೇಲೆ ಸೇವೆ ಮಾಡುವವನೇ ಮೇಲಂಟ.ಮಹಾನ್ ಸೇವಕ. ಸೇವೆಯೇ ಜನಾರ್ಧನ ಸೇವೆ ಎಂಬಂತೆ.



‌ ‌ ತುಲುನಾಡಲ್ಲಿ ಈಗಲೂ ಇಪ್ಪತ್ತೊಂದನೇ ಶತಮಾನದಲ್ಲೂ ತುಲುನಾಡ್ ಭಂಡಾರಿಯನ್ನು ಕೆಲವು ವರ್ಗದವರು “ಮೇಲಂಟ”(ಪುರುಷರನ್ನು) ಎಂದೂ “ಮೆಲಂಟ್ತಿ”(ಮಹಿಳೆಯರನ್ನು) ಎಂದು ಕರೆಯುತ್ತಾರೆ.ನಮ್ಮ ದಲಿತರು, ಕೊರಗರು, ಮುಗೇರ ರರು ಭಂಡಾರಿಗಳನ್ನು “ಮೇಲಂಟೆರ್” ಎಂದು ಸಂಭೋದಿಸುವರು.
ಧರ್ಮಸ್ಥಳದಲ್ಲಿ ಶಿವಾಲಯ ನಿರ್ಮಿಸಲು ಶಿವಲಿಂಗವನ್ನು ತಂದು ಕೊಟ್ಟ ಪಂಜುರ್ಲಿ ದೈವದ ಪಾತ್ರಿ ಆಗಿದ್ದ ಅನ್ನಪ್ಪ ಸ್ವಾಮಿಯನ್ನು ಸ್ಮರಿಸಲು ಅವನನ್ನು ಜೈನರು ದೇವಾಲಯದಲ್ಲೇ ಪ್ರತಿಷ್ಟೆ ಮಾಡುವರು.ಅದೇ ಜೈನರು ತುಲುನಾಡಲ್ಲಿ ಬಸದಿ, ಗೊಮ್ಮಟೇಶ್ವರನ ಮೂರ್ತಿ ನಿರ್ಮಿಸಿದ ನೆನಪಿಗೆ ಕಲ್ಲುಕುಟ್ಟಿಗನ ನೆನಪಿಗೆ “ಕಲ್ಕುಡ” ಎಂಬ ಹೆಸರಲ್ಲಿ ದೈವದ ರೂಪದಲ್ಲಿ ಸ್ಮರಿಸುತ್ತಾ ಬಂದರು.ಅದೇ ರೀತಿಯಲ್ಲಿ ತುಲುನಾಡು ಭಂಡಾರಿಯ ನೆನಪಿಸಲು ಅವನನ್ನು”ಮೇಲಂಟ”, ” ಮೇಲ್ಬಂಟ” ಎಂದು ದೈವದ ರೂಪದಲ್ಲಿ ಆರಾಧಿಸುವಂತೆ ಜೈನ ರಾಜರು
ಮಾಡಿರುವರು.ತುಲುನಾಡಿಗೆ ಶ್ರಮಿಸಿದವರನ್ನು ಜಾತಿ ಬೇಧ ನೋಡದೆ ಅವರನ್ನು ಸ್ಮರಿಸಲು ಅವರನ್ನು ಕಲ್ಲು ಹಾಕಿ ನಂಬುತ್ತಾ ಬಂದಿದ್ದಾರೆ.ತುಲುನಾಡು ಭಂಡಾರಿಗಳಿಗೆ “ಮೇಲಂಟ” ಬೂತವೇ ಆರಾಧ್ಯ ದೈವವಾಗಿದೆ. ಇದು ತನ್ನ ಸೇವಕನಿಗೆ ಜೈನ ರಾಜರು ಕೊಟ್ಟಿರುವ ಕೊಡುಗೆ.

Hindu Funeral Traditions | Everplans

ಚಾಣಕ್ಯನಿಂದ ನಂದರ ಸಾಮ್ರಾಜ್ಯ ಪತನ ಆದ ಆರಂಭದಲ್ಲೇ ಆತನ ವಂಶಸ್ಥರು ದುರ್ಬಲತೆಯಿಂದ
ಬಳಲುವರು.ದಾರಿ ತೋಚದೆ ತಮ್ಮ ಮೂಲ ವೃತ್ತಿ ಆದ ಕೇಶಕರ್ಮದ ಕಲೆಯನ್ನು ಮುಂದುವರಿಸುತ್ತಾ
ಹೋಗುವರು. ನಂದರಿಂದ ಆರಂಭವಾದ ಜನನ, ಮರಣ, ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಇವರ ಅವಶ್ಯಕತೆಯ ಪದ್ಧತಿ ಮುಂದುವರಿಯುತ್ತದೆ. ಆದರೆ ಈ ವರ್ಗವನ್ನು ಉಳಿದ ಜನಾಂಗಗಳು ತುಚ್ಛೀಕರಿಸುತ್ತಾ ಬಂದಿದ್ದರಿಂದ ಈ ಭಂಡಾರಿ ಜಾತಿ ನಂದರ ವಿಸ್ತಾರವಾಗಿ ಹರಡಿದ್ದ ಸಾಮ್ರಾಜ್ಯದಲ್ಲಿ ನೆಲ ಕಚ್ಚಿತು. ನಂದರ ಸಾಮ್ರಾಜ್ಯ ಪತನವಾಗಿದ್ದರೂ ತುಲುನಾಡಲ್ಲಿ ಮಾತ್ರ ಜೈನ ಅರಸರು ಭಂಡಾರಿ ವಂಶವನ್ನು ನೆಲೆ ಕಚ್ಚಲು ಬಿಡಲಿಲ್ಲ. ಏಕೆಂದರೆ ಅಂದು ನಂದರಕಾಲದಲ್ಲಿ ನಂದ ಸಾಮ್ರಾಜ್ಯದಲ್ಲಿ ಜೈನರು ಗೌರವಾನ್ವಿತರಾಗಿದ್ದರು. ಇದರಿಂದಲೇ ಅತ್ತ ನಂದ ವಂಶದ ಸಾಮ್ರಾಜ್ಯ ಪತನವಾಗಿದ್ದರೂ ಇತ್ತ ತುಲುನಾಡಿನ ಜೈನ ಸಾಮ್ರಾಜ್ಯ ಮಾತ್ರ ನಂತರವೂ ಹಲವು ವರ್ಷಗಳಷ್ಟು ಕಾಲ ಗಟ್ಟಿಯಾಗಿ ಮೆರೆಯುತ್ತಿತ್ತು.


ಅಖಂಡ ಭಾರತವನ್ನು ಒಗ್ಗೂಡಿಸಿ ಆಳಿದ ಮೊಟ್ಟ ಮೊದಲ ಸೂದ್ರ ಚಕ್ರವರ್ತಿ ಮಹಾಪದ್ಮನ ಮತ್ತು ಅವನ ಮಕ್ಕಳ ಸಾಮ್ರಾಜ್ಯ ಪತನವಾದಂತೆ ತುಲು ನಾಡಿನಲ್ಲೂ ಬಲಿಷ್ಠವಾದ ಜೈನ ಸಾಮ್ರಾಜ್ಯ ಪತನವಾಗಲು ಆರಂಭವಾಗುತ್ತದೆ. ಬೇರೆ ಬೇರೆ ರಾಜರುಗಳ ಆಳ್ವಿಕೆಯ ಆಕ್ರಮಣ ಧಾಳಿಗಳು,ಹೈದರ್ ಆಲಿ, ಟಿಪ್ಪು ಸುಲ್ತಾನ್ ಆಕ್ರಮಣ, ಪೋರ್ಚುಗೀಸ್, ಡಚ್ಚರು, ಬ್ರಿಟಿಷರ ಪ್ರವೇಶ. ಹೀಗೆ ತೊಂದರೆಗಳು ಒಂದರ ಹಿಂದೆ ಒಂದು ಬರುತ್ತದೆ. ತುಲುನಾಡಿನ ಆಳುವಿಕೆಯು ಕೈ ತಪ್ಪಿ ಹೋಗುವುದು. ಕೊನೆಗೆ ತುಲು ನಾಡಿನಾದ್ಯಂತ ಭೂಮಲಿಕರಾಗಿ ಇರುತ್ತಾರೆ


ಜೈನರು. ತುಲುನಾಡಲ್ಲಿ ಜೈನ ರಾಜ ಮಹಾರಾಜರು ತಮ್ಮ ಸೇವಕನಾಗಿ ದುಡಿದ ಭಂಡಾರಿಗಳಿಗೆ ಸಾಕಷ್ಟು ಜಮೀನು ಉಂಬಳಿ ಕೊಟ್ಟಿರುವರು.ಆದರೆ ಅವುಗಳನ್ನು ಅವರು ಉಳಿಸಿ ಕೊಂಡು ಬರಲಿಲ್ಲ. ಅವರು ಉಳಿಸಲು ಅಸಮರ್ಥರಾಗುವರು.ಕೆಟ್ಟ ಹವ್ಯಾಸಗಳು, ಸಾಲಗಳು, ಕುಟುಂಬದೊಳಗಿನ ಕಿತ್ತಾಟಗಳು ಇತ್ಯಾದಿ ಕಾರಣಗಳಿಂದ ಅವರ ಮನೆ ಜಮೀನುಗಳು ಇತರರ ಪಾಲಾಗುತ್ತದೆ. ಈಗ ಅದೇ ಭಂಡಾರಿಗಳು ತಮ್ಮ ಮೂಲ ನಾಗಾರಾಧನೆ ಮಾಡಲು ಈ ಇತರರ ಪಾಲಾದ ಮೂಲ ಮನೆ ಜಮೀನಿಗೆ ಬಂದು ಹೋಗುವರು. ಬೆರಳಿಣಿಕೆಯಷ್ಟು ಜೈನರು ಕೊಟ್ಟಿರುವ ಗುತ್ತು ಬರ್ಕೆ ಮನೆಗಳು ಉಳಿದಿದೆ. ಕೆಲವು ಅಂತಹ ಮನೆಗಳು ನಾಶವಾಗಿ ಅದರ ಅವಶೇಷಗಳು ಉಳಿದಿದೆ.ಕೆಲವೆಡೆ ಜೈನರು ತಮ್ಮ ಗುತ್ತು ಬರ್ಕೆ ಮನೆಗಳನ್ನೇ ತಮ್ಮ ಸೇವೆಯನ್ನು ಸಲ್ಲಿಸಿದ್ದ ಭಂಡಾರಿಗಳಿಗೆ ನೀಡಿರುವುದು ಕಂಡುಬರುತ್ತದೆ.

Dugalaya daiva - YouTube


ಜೈನ ಬೂತವಾದ “ದುಗ್ಗಲಾಯ” ದೈವ ಇರುವ ಮನೆಗಳು ಮೂಲದಲ್ಲಿ ಜೈನರದ್ದಾಗಿತ್ತು. ಕೆಲವೆಡೆ ಭಂಡಾರಿ ಕುಟುಂಬದಲ್ಲಿ ಈ ದೈವ ಇರುವುದು ಕಂಡುಬರುತ್ತದೆ. ಭೂಮಿ ಉಂಬಳಿ ಕೊಡುವಾಗ ದೈವವೂ ಅದರೊಡನೆ ಬಂದಿರುತ್ತದೆ. ತುಲುನಾಡಲ್ಲಿ ಜೈನ ಆಡಳಿತ ಮುರಿದಂತೆ ನಂದ ವಂಶದ ಭಂಡಾರಿಗಳು ತಮ್ಮ ಮೂಲ ಕೇಶ ಕರ್ಮದ ಕಲೆಯನ್ನು ಮುಂದುವರಿಸುವರು. ಆದಿ ಮೂಲದಲ್ಲಿ ಜೈನರಿಗೆ ಮಾತ್ರ ಜಂಭದಿಂಧ ಕೇಶ ಶೈಲಿ ಮಾಡುತ್ತಿದ್ದ ಭಂಡಾರಿಗಳು ಬದುಕು ಸಾಗಿಸಲು ಜಾತಿಬೇಧ ಮರೆತು ಎಲ್ಲರಿಗೂ ಕೇಶ ವಿನ್ಯಾಸ ಮಾಡುವರು.ತಮ್ಮ ಕಿಟ್ ಹಿಡಿದು ಕೊಂಡೆ ಕೇಶ ಸೇವೆ ಮಾಡುವರು. ಅಳಿದುಳಿದ ಜಮೀನಲ್ಲಿ ಉತ್ತು ಬಿತ್ತಿ ಬದುಕು ಸಾಗಿಸುವರು. ಭಂಡಾರಿಗಳ ಸ್ಥಿತಿ ಎಲ್ಲಿಯವರೆಗೆ ಬಂತೆಂದರೆ ಜೈನ ರಾಜರು ಭಂಡಾರಿಗಳಿಗೆಂದೆ ಕಟ್ಟಿ ಕೊಟ್ಟ ಕಚ್ಚೂರು ನಾಗೇಶ್ವರ ದೇವಸ್ಥಾನವು ಪಾಳು ಬಿದ್ದು ಹೋಗುತ್ತದೆ. ಪೂಜೆ ಆರಾಧನೆ ಇಲ್ಲದೆ ಹೋಗುವುದು. ಭಂಡಾರಿಗಳ ಬದುಕು ಬರುಡಾಗುವುದು.


ನಂದ ವಂಶದ ಭಂಡಾರಿಗಳ ಬದುಕು ತೀರಾ ದುಃಖದಿಂದ ಕೂಡಲು ಬೇರೆ ಬೇರೆ ಆದಿ ಮೂಲದ ದೋಷಗಳು ಕೂಡಿತ್ತು. ಅವುಗಳಲ್ಲಿ ಮುಖ್ಯವಾಗಿ ನಂದ ರಾಜರು ಹಲವು ಹಲವು ಕ್ಷತ್ರಿಯ ರಾಜರನ್ನು ಕೊಲೆ ಮಾಡಿರುವುದು. ಅಲ್ಲದೆ ಬ್ರಾಹ್ಮಣ ಚಾಣಕ್ಯನ ಶಾಪಗಳು. ಹಲವು ದಾಳಿ ಆಕ್ರಮಣಗಳ ಫಲವಾಗಿ ನಾಗೇಶ್ವರ ದೇವಾಲಯ ಪಾಳು ಬೀಳುತ್ತದೆ. ಪಾಳು ಬಿದ್ದ ಶಿವಾಲಯದ ನಾಗೇಶ್ವರ ದೇವರನ್ನು ಕಂಡು ಬ್ರಾಹ್ಮಣ ಕುಟುಂಬ ಒಂದು ಪೂಜೆ ಮಾಡುತ್ತಾ ಇರುತ್ತಿದ್ದರು. ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಶಕ್ತಿ ಭಂಡಾರಿ ಭಕ್ತರಿಗೆ ಇರಲಿಲ್ಲ.
ಭಂಡಾರಿಯವರೇ ಆರಾಧಿಸುತ್ತಿದ್ದ ನಾಗೇಶ್ವನಿಗೆ ಅವರಿಂದಲೇ ಜೀರ್ಣೋದ್ಧಾರ ಪಡೆಯುವ ಆಶೆ
ಆಯಿತು. ಅದರಂತೆ ಪೂಜೆ ಮಾಡುತ್ತಿದ್ದ ಬ್ರಾಹ್ಮಣರೇ ಭಂಡಾರಿ ಸಮಾಜದ ಗಣ್ಯರನ್ನು ಭೇಟಿ ಮಾಡಿ
ದೇವಾಲಯದ ಜವಾಬ್ದಾರಿಯನ್ನು ಭಂಡಾರಿ ಸಮಾಜಕ್ಕೆ 1988 ಒಪ್ಪಿಸುವರು.

ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ ಸಂಭ್ರಮದಲ್ಲಿ ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ  ನಾಗೇಶ್ವರ ದೇವಸ್ಥಾನ ಬಾರ್ಕೂರು - ಭಂಡಾರಿವಾರ್ತೆ


ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆ ಮಂಗಳೂರು ಇವರು ಈ ದೇವಾರಯವು ಭಂಡಾರಿಗಳದ್ದೇ ಎಂದು ದೃಢಪಡಿಸಿದೆ .ತಡ ಮಾಡದೆ ನೂರಾರು ವರ್ಷಗಳಿಂದ ಪಾಳುಬಿದ್ದ ದೇವಾಲಯದ ಜೀರ್ಣೋದ್ಧಾರದ ಶಿಲಾನ್ಯಾಸ ಹರಿಕೃಷ್ಣ ಪುನರೂರು ಇವರಿಂದ ನಡೆಯುತ್ತದೆ. ಈ ದೇವಾಲಯವನ್ನು ಭಂಡಾರಿಗಳಿಗೆ ಬ್ರಾಹ್ಮಣರು ಹಸ್ತಾಂತರಿಸಿದ ದಿನದಿಂದಲೇ ಎಲ್ಲಾ ದೋಷಗಳು ಶಾಪಗಳು ಇಳಿಯಲು ಆರಂಭಿಸಿತ್ತು. ನಂತರದ
ವರ್ಷಗಳಲ್ಲಿ ಪ್ರಾಯಶ್ಚಿತ್ತ ರೂಪವಾಗಿ ಹಲವು ಹಲವು ಪೂಜೆ ಆರಾಧನೆಗಳು ನಡೆದಿದೆ. ಹಾಗೂ
ನಡಿಯುತ್ತಲೂ ಇದೆ. ನಾಗಮಂಡಲದಂತಹ ದೊಡ್ಡ ದೊಡ್ಡ ಪೂಜಾರಾಧನೆಗಳು ನಡೆದಿದೆ. ಧರ್ಮಸ್ಥಳದ
ಪೆರ್ಗಡೆಯವರ ಮತ್ತು ಉಡುಪಿಯ ಎಲ್ಲಾ ಮಠಾಧೀಶರರ ಕಾಲು ಸ್ಪರ್ಶ ಆಗಿದೆ. ಅಲ್ಲದೆ ತುಲುನಾಡಿನ
ಎಲ್ಲಾ ಇತರ ಮಠಗಳ ಸ್ವಾಮೀಜಿಗಳು ಇಲ್ಲಿ ಬಂದು ಆಶೀರ್ವಚನ ನೀಡಿದ್ದಾರೆ. ಈಗ ಯಾವುದೇ ದೋಷ
ಶಾಪ ಭಂಡಾರಿಗಳಿಗೆ ಇಲ್ಲ.ಇಂದು ಭಂಡಾರಿ ಸಮಾಜ ವಿದ್ಯಾ ಬುದ್ಧಿ ,ಫ್ರೌಢಿಮೆಯಲ್ಲಾಗಲೀ,ರಾಜಕೀಯ ದಲ್ಲಾಗಲೀ, ಆರ್ಥಿಕವಾಗಿಯಾಗಲೀ ಹಿಂದುಳಿದಿಲ್ಲ.

Shri Nageshwara Temple, Barkur Town - Temples in UDUPI, Udupi - Justdial

ಸಮಾಜದಲ್ಲಿ ನಾವೆಲ್ಲರೂ ‘ಭಂಡಾರಿ’ಗಳು ನಂದಸಾಮ್ರಾಜ್ಯದ ವಂಶಸ್ಥರು ಎಂದು  ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಏನೇ ಕಷ್ಟ ತೊಂದರೆಗಳು ಎದುರಾದಲ್ಲಿ ತಮ್ಮ ಆರಾಧ್ಯ ದೇವರಾದ ನಾಗೇಶ್ವರನಲ್ಲಿ
ಮತ್ತು ಆರಾಧ್ಯ ದೈವ ಮೇಲಂಟ/ಮೇಲ್ಬಂಟನಲ್ಲಿ ತೋಡಿಕೊಳ್ಳುವರು. ಹಿಂದಿನ ಕಾಲದಲ್ಲಿ ಕೇಶ ವಿನ್ಯಾಸಕರನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆದು ತುಚ್ಛೀಕರಿಸುತ್ತಿದ್ದರು. ಈಗ ಅದು ಇಲ್ಲವಾಗಿದೆ.ಅಂದು ಅವಮಾನ ಮಾಡುತ್ತಿದ್ದ ಜನರು ಕೂಡಾ ಭಂಡಾರಿಗಳ ಉದ್ಯೋಗವನ್ನು ಆರಿಸಿ ಗಳಿಸಿದ ಹಣದಿಂದಲೇ ಬದುಕುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದೆನಿಸುತ್ತದೆ ಭಂಡಾರಿಗಳಿಗೆ. ಕೇಶ ವಿನ್ಯಾಸದ ಕೆಲಸ ಅದೊಂದು
ಕಲೆ ಎಂದು ಜನರಿಗೆ ತಿಳಿದಿದೆ.
(ಮುಗಿಯಿತು)




ಬರೆದು ಕಳುಹಿಸಿದವರು
ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *