January 18, 2025
Tulukoota-Kuwait

ತುಳು ಕೂಟ ಕುವೈಟ್ ನ ನೇತೃತ್ವದಲ್ಲಿ , ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ಯವರ ಪ್ರಧಾನಿಕೆಯಲ್ಲಿ, ಸನ್ಮಾನ್ಯ ಶ್ರೀ ಡಿ.ವಿ.ಸದಾನಂದ ಗೌಡರು , ಕೇಂದ್ರ ಸಚಿವರು ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಮತ್ತು ಮಾನ್ಯ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರ ಜೊತೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸುಮಾರು 40 ನಿಮಿಷಗಳ ಕಾಲ  ಕೋವಿಡ್-19 ಮಹಾಮಾರಿಯಿಂದ ಸಂಕಷ್ಟವನ್ನು ಎದಿರುಸಿತ್ತಿರುವ ಕುವೈಟ್ ನ ಕನ್ನಡಿಗರನ್ನು ಸ್ವದೇಶಕ್ಕೆ ಕರೆತರುವ ಬಗ್ಗೆ ಸವಿಸ್ತಾರವಾಗಿ  ಚರ್ಚಿಸಲಾಯಿತು. ಈ ಪ್ರಮುಖ ಚರ್ಚೆಯಲ್ಲಿ  ಕುವೈಟ್ ನಲ್ಲಿರುವ  ಕರ್ನಾಟಕದ ಸಂಘಟನೆಗಳ  ಪ್ರಮುಖ ಪ್ರತಿನಿಧಿಗಳಾದ  ಶ್ರೀ ರಾಜೇಶ್ ವಿಠ್ಠಲ್ (ಕುವೈಟ್ ಕನ್ನಡ ಕೂಟ ), ಶ್ರೀ ಸ್ಟೀವನ್ ರೇಗೊ (ಕುವೈಟ್ ಕೆನರಾ ವೆಲ್ಫೇರ್ ಅಸೋಸಿಯೇಷನ್), ಶ್ರೀ ಅಬ್ದುಲ್ ನಾಸಿರ್ ಖಾನ್ (ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ), ಶ್ರೀ  ಗುರು ಹೆಗ್ಡೆ (ಬಂಟರ ಸಂಘ ಕುವೈಟ್), ಶ್ರೀ ಕೃಷ್ಣ ಎಸ್ ಪೂಜಾರಿ (ಬಿಲ್ಲವ ಸಂಘ ಕುವೈಟ್) ಮತ್ತು ಶ್ರೀ ಜಾಫರ್ ಸಾದಿಕ್ (ಇಂಡಿಯನ್ ಮುಸ್ಲಿಂ ಅಸೋಸಿಯೇಷನ್) ಇವರುಗಳು ಭಾಗವಹಿಸಿದ್ದರು.

ಮೊದಲಿಗೆ ಕಾರ್ಯಕ್ರಮದ ಆಯೋಜಕರಾದ ಶ್ರೀ ರಮೇಶ್ ಎಸ್ ಭಂಡಾರಿ ಯವರು ಸನ್ಮಾನ್ಯ ಕೇಂದ್ರ ಸಚಿವರಾದ  ಶ್ರೀ ಡಿ.ವಿ. ಸದಾನಂದ ಗೌಡರಿಗೆ ಮತ್ತು ಪಾಲ್ಗೊಂಡ ಇತರೆ ಸಂಘಟನೆಗಳ ಗಣ್ಯರಿಗೆ ತುಂಬು ಹೃದಯದ ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದ ಪ್ರಮುಖ ಅಂಶವಾದ ಕುವೈಟ್ ನ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆ ತರುವ ವಿಷಯದ ಬಗ್ಗೆ ಪ್ರಸ್ತಾಪಿಸಿದ ಶ್ರೀ ರಮೇಶ್ ಭಂಡಾರಿ ಇವರು ಪ್ರಸ್ತುತ ಕುವೈಟ್ ನಲ್ಲಿ ಸುಮಾರು 11 ಲಕ್ಷ ಕ್ಕಿಂತ  ಅಧಿಕ ಅನಿವಾಸಿ ಭಾರತೀಯರಿದ್ದು ಅದರಲ್ಲಿ 50 ಸಾವಿರಕ್ಕೂ ಅಧಿಕ ಕನ್ನಡಿಗರು ನೆಲೆಸಿದ್ದಾರೆ ಮತ್ತು ಈ ಕೊರೋನ ಮಹಾಮಾರಿಗೆ ಸಿಲುಕಿ ಹಲವಾರು ಕನ್ನಡಿಗರು  ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಇದರಲ್ಲಿ ಹಲವಾರು ಜನ ತುರ್ತು ಆರೋಗ್ಯದ ಸಮಸ್ಯೆ, ಗರ್ಭಿಣಿ ಸ್ತ್ರೀಯರು, ಭೇಟಿ ವೀಸಾ ಅವಧಿ ಮುಗಿದವರು, ವ್ಯಾಪಾರ ಮತ್ತು ಉದ್ಯೋಗ ಸಮಸ್ಯೆಗಳು, ಉದ್ಯೋಗ ಕಳೆದುಕೊಂಡು ಜೀವನ ಸಾಗಿಸಲು, ಸಂಸಾರ ನೋಡಿಕೊಳ್ಳಲು ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದರು ಮತ್ತು ಸಂಕಷ್ಟದಲ್ಲಿರುವ ಕನ್ನಡಿಗರು ಮಾತೃಭೂಮಿಗೆ ತೆರಳಲು ಬಯಸುತ್ತಿದ್ದಾರೆ ಈ ಕಷ್ಟದ ಸಂದರ್ಭದಲ್ಲಿ ತನ್ನವರೊಂದಿಗೆ ಬದುಕುವ  ಇಚ್ಚೆಯಲ್ಲಿದ್ದಾರೆ ಇದರಿಂದ ಅವರಿಗೆ ಧೈರ್ಯ  ಆತ್ಮ ವಿಶ್ವಾಸವು ಹೆಚ್ಚುವುದು ಮತ್ತು ನೆಮ್ಮದಿ ಸಿಗುವುದು ದಯವಿಟ್ಟು ತಾಯ್ನಾಡಿಗೆ ಮರಳಲು ವಿಮಾನ ವ್ಯವಸ್ಥೆ ಮಾಡಿಕೊಡಬೇಕೆಂದು ಸರ್ವ ಕನ್ನಡಿಗರ ಪರವಾಗಿ ವಿನಂತಿಸಿಕೊಂಡರು ಹಾಗು ಇದರ ಬಗ್ಗೆ ಈಗಾಗಲೇ ಅಧಿಕೃತವಾಗಿ ಪತ್ರದ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ರವಾನಿಸಲಾಗಿದೆ ಮತ್ತು ಅವರೊಂದಿಗೆ ವಿಡಿಯೋ ಕಾನ್ಫರೆನ್ಸ ಮೂಲಕ ಚರ್ಚೆ ಮಾಡಿದ್ದು ನಮ್ಮ ಮನವಿಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ತುಳುಕೂಟ ಕುವೈಟ್ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಕ್ಷೇಮಾಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಚಿವರಿಗೆ ತಿಳಿಸಿಕೊಡಲಾಯಿತು।

ಪ್ರಸ್ತುತ ಕುವೈಟ್ ನ ಪರಿಸ್ಥಿಯ ಬಗ್ಗೆ ವಿವರಿಸಿದ ತುಳು ಕೂಟ ಅಧ್ಯಕ್ಷರು ಕುವೈಟ್ ಸರ್ಕಾರ ಈ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಮತ್ತು ಗುಣಮುಖರಾಗುವವರ ಸಂಖ್ಯೆ  ಕೂಡ ದಿನದಿದಿಂದ ದಿನಕ್ಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು .

ಪ್ರತಿಯೊಂದು ಸಮಸ್ಯೆಯನ್ನು ಬಹಳ ತಾಳ್ಮೆಯಿಂದ ಆಲಿಸಿದ ಸನ್ಮಾನ್ಯ ಸಚಿವರು, ತಾವು ಪ್ರಸ್ತುತ ದೆಹಲಿಯಲ್ಲಿದ್ದು ನಿಮ್ಮ ಮನವಿಯು ನನ್ನ ದೆಹಲಿಯ ಕಾರ್ಯಾಯಲಕ್ಕೆ ತಲುಪಿದ್ದು ಅದನ್ನ ನಾನು ಪರಿಶೀಲಿಸಿದ್ದೇನೆ ಮತ್ತು ಮಾನ್ಯ ಮುಖ್ಯಮಂತ್ರಿಗಳು ಸಹ ಕರೆ ಮಾಡಿ  ಅವರೊಡನೆ  ನೀವು ನಡೆಸಿದ ಚರ್ಚೆಯ ಬಗ್ಗೆ ಮತ್ತು ನಿಮ್ಮ ಮನವಿಯ ಬಗ್ಗೆ ತಿಳಿಸಿ ಅದರ ಬಗ್ಗೆ ಒತ್ತು ಕೊಡುವುದಾಗಿ ತಿಳಿಸಿದರು ಎಂದು ಹೇಳಿದರು. ಬೇರೆ ಬೇರೆ ದೇಶಗಳಿಂದ ಹಲವಾರು ವಿಮಾನಗಳ ಹಾರಾಟವನ್ನು  ಈಗಾಗಲೇ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿ ,ಅದರ ಬಗ್ಗೆ ಚುಟುಕಾಗಿ ವಿವರಿಸಿದರು ಮತ್ತು ಹಿರಿಯ ನಾಗರಿಕರು , ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾಗಿರುವವರು,ಗರ್ಭಿಣಿ ಸ್ತ್ರೀಯರು ಹೀಗೆ ಆದ್ಯತೆ ಮೇರೆಗೆ ಪಟ್ಟಿಯನ್ನು ತಯಾರಿಸಲಾಗಿದೆ ಈಗಾಗಲೇ   ಕುವೈಟ್ ನಿಂದ 3 ವಿಮಾನಗಳನ್ನು ಬೇರೆ ರಾಜ್ಯಗಳಿಗೆ  ವ್ಯವಸ್ಥೆ ಮಾಡಿ ಅನಿವಾಸಿಗರನ್ನು ಕರೆ ತರಲಾಗಿದೆ, ಇದೆ ನಿಟ್ಟಿನಲ್ಲಿ ಹಂತ ಹಂತವಾಗಿ ವಿಮಾನ ವ್ಯವಸ್ಥೆಯನ್ನು ಮಾಡುತ್ತೇವೆ ಮತ್ತು ಕನ್ನಡಿಗರಿಗಾಗಿ ಕುವೈಟ್ ಇಂದ ಬೆಂಗಳೂರು ಮತ್ತು ಮಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಿಕೊಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

 ಕುವೈಟ್ ನಲ್ಲಿ 600 ಕ್ಕೂ ಅಧಿಕ ಕನ್ನಡಿಗರು ಭಾರತೀಯ ರಾಯಭಾರಿ ಕಚೇರಿಯಲ್ಲಿ ನೊಂದಣಿ ಮಾಡಿರುವುದಾಗಿ ಈ ಹಿಂದಿನ ವಿವರಗಳಲ್ಲಿ ಬಂದಿದ್ದು ತಕ್ಷಣಕ್ಕೆ 1 ವಿಮಾನವನ್ನು ತುರ್ತಾಗಿ ಕರ್ನಾಟಕಕ್ಕೆ ಈ 10  ದಿನಗಳ ಒಳಗಾಗಿ ಬೆಂಗಳೂರು ಅಥವಾ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವ್ಯವಸ್ಥೆಯನ್ನು ಖಂಡಿತವಾಗಿಯೂ ಮಾಡುತ್ತೇವೆ ಎಂದು ಭರವಸೆ ಕೊಟ್ಟರು  ಮತ್ತು ಇನ್ನೆರೆಡು ದಿನಗಳಲ್ಲಿ ವಿಮಾನದ ವೇಳಾಪಟ್ಟಿಯನ್ನು ಒದಗಿಸುವ ಬರವಸೆಯನ್ನಿಟ್ಟು ಈ ವಿಷಯದ ಬಗ್ಗೆ ತನ್ನೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು  ಶ್ರೀ ರಮೇಶ್ ಭಂಡಾರಿಯವರಿಗೆ ಸೂಚಿಸಿದರು ಹಾಗು ಬರುವ ದಿನಗಳಲ್ಲಿ ಆದ್ಯತೆಯ ಆಧಾರವಾಗಿ ಹಂತ ಹಂತವಾಗಿ ವಿಮಾನ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು.

ಎಲ್ಲ ಸಮಸ್ಯೆಗಳನ್ನು ಸ್ಪಷ್ಟವಾಗಿ  ವ್ಯಕ್ತಪಡಿಸಿದ್ದೀರಿ ಎಲ್ಲವು ನನ್ನ ಗಮನದಲ್ಲಿದೆ ಈ ಸಂಕಷ್ಟದ  ಸಂದರ್ಭದಲ್ಲಿ ಎಲ್ಲ ಕಡೆಯಿಂದಲೂ ಒತ್ತಡ ಬರುತ್ತಿದೆ ಹಾಗು ಬಂದಿಳಿದ ಅನಿವಾಸಿಗರಿಗೆ ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ವ್ಯವಸ್ಥೆಯನ್ನು ಮಾಡಬೇಕಾಗಿದೆ ಪ್ರತಿಯೊಂದನ್ನು ವ್ಯವಸ್ಥಿತವಾಗಿ ಮಾಡುತ್ತೇವೆ ಎಂದು ತಿಳಿಸಿದರು ಮತ್ತು ನನ್ನನ್ನು ನೀವುಗಳು ಈ ಸ್ಥಾನದಲ್ಲಿ ಕೂರಿಸಿದ್ದೀರಿ  ಇದು ದೇವರ ಕೆಲಸ ಎಂದು ಭಾವಿಸಿ ನಮ್ಮವರಿಗಾಗಿ ನಾನು ಶ್ರದ್ದೆಯಿಂದ ಅತ್ಯಂತ ಕಾಳಜಿಯಿಂದ ಕರ್ತವ್ಯವನ್ನು ಮಾಡುತ್ತೇನೆ  ಎಂದು ಭರವಸೆ ನೀಡಿದರು.

ಅನೇಕ ಕಂಪನಿಗಳು ತಮ್ಮ ಕಾರ್ಮಿಕರನ್ನು ದೀರ್ಘ ರಜೆಗೆ ಹೋಗುವಂತೆ ಕೇಳಿಕೊಂಡಿವೆ ಮತ್ತು ಬಾಡಿಗೆ ಪಾವತಿಸಲು ಹಣವಿಲ್ಲದ ಕಾರಣ ಅವರು ಭಾರತಕ್ಕೆ ಬರಲು ಬಯಸುತ್ತಾರೆ ಎಂದು ಅವರ ಗಮನಕ್ಕೆ ತರಲಾಗಿದೆ. ಮನವಿಗೆ ಉತ್ತರಿಸಿದ ಗೌರವಾನ್ವಿತ ಸಚಿವರು ಸ್ಥಳೀಯ ವಿಮಾನಗಳು ಮೇ 2020 ರ ಅಂತ್ಯದ ವೇಳೆಗೆ ಪ್ರಾರಂಭವಾಗಲಿವೆ ಮತ್ತು ವಾಣಿಜ್ಯ ವಿಮಾನಗಳ ವೇಳಾಪಟ್ಟಿ ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದರು.

Ramesh Shekar Bhandary elected president of Tulu Koota Kuwait ...

ಇದೆ ಸಂದರ್ಭದಲ್ಲಿ ಶ್ರೀ ರಮೇಶ್ ಎಸ್ ಭಂಡಾರಿಯವರು ,ಈ ಮೊದಲೇ ಇತರ ಸಂಘ ಸಂಸ್ಥೆಗಳ ಗಣ್ಯರೊಂದಿಗೆ ಚರ್ಚಿಸಿ ಸಮಾಲೋಚಿಸಿದಂತೆ , ಪ್ರಸ್ತುತ ಕುವೈಟ್ ರಾಷ್ಟ್ರದಲ್ಲಿ 50  ಸಾವಿರಕ್ಕಿಂತ ಅಧಿಕ ಕನ್ನಡಿಗರಿದ್ದು ಈ ಅನಿವಾಸಿ ಕನ್ನಡಿಗರಿಗಾಗಿ ಸರ್ಕಾರದ ವತಿಯಿಂದ ಅಧಿಕೃತವಾಗಿ ಕುವೈಟ್ ಕರ್ನಾಟಕ ಅನಿವಾಸಿ ಭಾರತೀಯ ಸಂಸ್ಥೆ (Kuwait  Karnataka  NRI Forum ) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೊಂದು ಸಮಿತಿಯನ್ನು ನೇಮಿಸಿ ಅದರಲ್ಲಿ ಎಲ್ಲ ಕನ್ನಡಿಗರು ಭಾರತ ಸರ್ಕಾರದ ಅಡಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡುವಂತ ವ್ಯವಸ್ಥೆ ಮಾಡಬೇಕು ಮತ್ತು ಈ ಸಂಸ್ಥೆಯು ಭಾರತ  ಸರ್ಕಾರದ ಅಧಿಕೃತ ಸಂಸ್ಥೆಯಾಗಿರಬೇಕು ಎಂದು  ವಿನಂತಿಸಿಕೊಂಡರು. ಈ ಸಂಸ್ಥೆಯು ನಮ್ಮ ರಾಜ್ಯದ ಭಾಷೆ, ಸಂಸ್ಕತಿ ಆಚಾರ ವಿಚಾರಗಳನ್ನು ಬೆಳೆಸುವಂತ ಕಾರ್ಯಕ್ಕೆ ಮತ್ತು ಕುವೈಟ್ ನಲ್ಲಿ ನೆಲಿಸಿರುವ ಕನ್ನಡಿಗರ ಕ್ಷೇಮಾಭಿವೃದ್ದಿಗೂ ಸಹಕಾರಿಯಾಗಲಿದೆ  ಎಂದು ಅಭಿಪ್ರಾಯ ಪಟ್ಟರು.

ಈ ಮನವಿಗೆ ಪ್ರತಿಕ್ರಿಯಿದ ಗೌರವಾನ್ವಿತ ಸಚಿವರಾದ ಶ್ರೀ ಡಿ ವಿ ಸದಾನಂದ ಗೌಡರು , ಅನಿವಾಸಿ ಭಾರತೀಯರ ಕೊಡುಗೆ ರಾಷ್ಟ್ರಕ್ಕೆ , ರಾಜ್ಯಕ್ಕೆ ಅಪಾರ ನಿಮ್ಮ ಸಲಹೆ  ಅತ್ತ್ಯುತ್ತಮವಾಗಿದ್ದು ಈ ನಿಮ್ಮ ಮನವಿಯನ್ನು ಗಮನದಲ್ಲಿಟ್ಟುಕೊಂಡು ಈ ಕೋವಿಡ್-19 ನಿಂದ ಉದ್ಬವವಾಗಿರುವ ಈ ವಿಷಮ ಪರಿಸ್ಥಿತಿಯು ಹತೋಟಿಗೆ ಬಂದಾಕ್ಷಣ ನಿಮ್ಮ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇದನ್ನು ಅಂಗೀಕಾರಕ್ಕೆ ತರಲು ನಾನು  ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕೋವಿಡ್ -19 ನಿಂದ ದೇಶದಲ್ಲಿ ,ರಾಜ್ಯದಲ್ಲಿ ಉಂಟಾದ ಅನಿರೀಕ್ಷಿತ ವಿಷಮ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ದೇಶದ ಹಾಗು ರಾಜ್ಯದ ಜನರ ಕ್ಷೇಮವನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅತ್ತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ ಇದಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಮಾನ್ಯ ಪ್ರಧಾನಿಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮತ್ತು  ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರ ಕಾರ್ಯವನ್ನು ರಮೇಶ್ ಭಂಡಾರಿಯವರು ಪ್ರಶಂಸಿಸಿದರು ಹಾಗು  ರಾಷ್ಟ್ರ ಮತ್ತು ರಾಜ್ಯದ ಜನರಿಗಾಗಿ ಶ್ರಮವಹಿಸುತ್ತಿರುವ ,  ನಮ್ಮೆಲ್ಲ ಮನವಿಗಳನ್ನು ಆಲಿಸಿ ಅದಕ್ಕೆ ತುರ್ತಾಗಿ ಸ್ಪಂದಿಸಿ ಕಾರ್ಯರೂಪಕ್ಕೆ ತರುವುದಾಗಿ ಭರವಸೆಯನ್ನು ಕೊಟ್ಟ ಸರಳ ಸಜ್ಜನ ಸನ್ಮಾನ್ಯ ಡಿ ವಿ ಸದಾನಂದ ಗೌಡರಿಗೆ ತುಳುಕೂಟ ಕುವೈಟ್ ಮತ್ತು ಇತರ  ಸಂಘ ಸಂಸ್ಥೆಗಳ ಪರವಾಗಿ , ಕುವೈಟ್ ಕನ್ನಡಿಗರ ಪರವಾಗಿ ಶ್ರೀ ರಮೇಶ್ ಭಂಡಾರಿಯವರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.

ಇದೆ ವೇಳೆಯಲ್ಲಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಕುವೈಟ್ ನ ಕನ್ನಡಿಗರಿಗಾಗಿ ಕುವೈಟ್ ನ ಸಂಘ ಸಂಸ್ಥೆಗಳು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿ, ತುಳುಕೂಟ ಕುವೈಟ್ ನ ಅಧ್ಯಕ್ಷರಾದ ರಮೇಶ್ ಎಸ್ ಭಂಡಾರಿಯವರು ಈ ತುರ್ತು ಸಂದರ್ಭದಲ್ಲಿ ಎಲ್ಲರನ್ನು ಒಗ್ಗೂಡಿಸಿ ಛಲಬಿಡದೆ ಎಲ್ಲ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ದಿನನಿತ್ಯ ಕನ್ನಡಿಗರಿಗಾಗಿ ಪಡುತ್ತಿರುವ ಶ್ರಮ ಪ್ರಶಂಸನೀಯ ಎಂದು ಶ್ರೀ ರಮೇಶ್ ಎಸ್ ಭಂಡಾರಿಯವರಿಗೆ ಶುಭ ಹಾರೈಸಿ ಧನ್ಯವಾದಗಳನ್ನು ಅರ್ಪಿಸಿದರು.

ತುಳುಕೂಟ ಕುವೈಟ್ ನ ನೇತೃತ್ವದಲ್ಲಿ ಆಯೋಜಿಸಿದ್ದ ಈ ವಿಡಿಯೋ ಕಾನ್ಫರೆನ್ಸ್ ಫಲಪ್ರದವಾಗಿದ್ದು ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲ ಪ್ರಮುಖರ  ಹಾಗು ತುಳುಕೂಟ ಕುವೈಟ್ ನ ಅಧ್ಯಕ್ಷರಾದ ರಮೇಶ್ ಭಂಡಾರಿ ಯವರ  ಪ್ರಯತ್ನ ಶ್ಲಾಘನೀಯ .

Leave a Reply

Your email address will not be published. Required fields are marked *