ದೀಪಾವಳಿಯ ಮೂರನೇ ದಿನ ಗೋವಿನ ಪಾದ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ನೋಡಲೂ ಸಹ ಹಸು ಸಿಗುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಸುಧಾಕರ ಆರ್ ಭಂಡಾರಿ ಯವರು ಹಾಗಲ್ಲ. ಇವರಿಗೆ ದೀಪಾವಳಿಯ ಈ ದಿನ ಗೋ ಪೂಜೆ ಆಗಲೇ ಬೇಕು. ಇದಕ್ಕೆ ಅವರಿಗೆ ಬೆಂಬಲವಾಗಿ ಇರುವವರು ಅದೇ ಊರಿನ ಭೋವಿ ಕಾಲೋನಿಯ ಶಂಶೀರ್ ಸಾಬ್. ಹಬ್ಬದ ದಿನ ಬೆಳಗ್ಗೆ ಅವರ ಮನೆಯ ಹಸುವನ್ನು ಚೆನ್ನಾಗಿ ಮೈ ತೊಳೆದು ಮದ್ಯಾಹ್ನದ ಪೂಜೆಗೆ ಸುಧಾಕರ ಅವರ ಮನೆಗೆ ಕರೆದುಕೊಂಡು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಇದು ಸುಮಾರು ಹತ್ತು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ದತಿ.
– ಭಂಡಾರಿ ವಾರ್ತೆ