ಗುಜರ್ , ಗುಜರನ್
ಗುಜ್ಜೆರ್ ಅಥವಾ ಗುಜರನ್ ಸಮುದಾಯ ತುಳುನಾಡಿಗೆ ವಲಸೆ ಬಂದಿರುವುದಕ್ಕೆ ಸ್ಪಷ್ಡ ಪುರಾವೆ ದೊರೆಯುತ್ತದೆ. ತುಳುನಾಡಿನ ಇತರ ಸಮುದಾಯ ಮತ್ತು ವಲಸೆ ಸಮುದಾಯಗಳ ಅಧ್ಯಯನ ನಡೆಸಿದಾಗ ಗುಜರನ್ನರ ಮೂಲ ಸ್ಪಷ್ಟವಾಗಿ ತಿಳಿದುಬರುತ್ತದೆ.
ಗುಜರನ್ನರು ಮೂಲತಃ ದಕ್ಷಿಣ ರಷ್ಯಾ ದೇಶದ ಜಾರ್ಜಿಯಾದವರು ( ಪರ್ಷಿಯನ್ ಭಾಷೆಯಲ್ಲಿ ಗುಜ್ರಿಯಾ ಎಂಬ ಉಚ್ಚಾರಣೆಯಿದೆ.) ನಂತರದ ದಿನಗಳಲ್ಲಿ ಈ ಜನಾಂಗದ ಜನರು ಅಪ್ಗಾನಿಸ್ತಾನ , ಪಾಕಿಸ್ತಾನ ಮೂಲಕ ಭಾರತಕ್ಕೆ ಕಾಲಿಟ್ಟರು. ಪ್ರಾಚೀನ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಗುಜರನ್ನರು ಭಾರತದ ಕಾಶ್ಮೀರ, ಪಂಜಾಬ್ , ರಾಜಸ್ತಾನ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿ ನೆಲೆಯೂರಿದ್ದರು. ಹೆಸರೇ ತಿಳಿಸುವಂತೆ ‘ಗುಜರಾತ್’ ಹೆಸರು ಗುಜರನ್ನರು ನೆಲೆಯೂರಿದ ನಾಡು. ಇಲ್ಲಿ ಈಗಲೂ ಗುಜರ್/ಗುಜ್ಜರ್ ಸಮುದಾಯದ ಜನ ಕಂಡುಬರುತ್ತಾರೆ. ಕ್ರಮೇಣ ಗುಜರನ್ನರು ತುಳುನಾಡಿನಲ್ಲೂ ನೆಲೆಯೂರಿದರು.
ತುಳುನಾಡಿನಲ್ಲಿ ಅಗೋಳಿ ಮಂಜಣ ಎಂಬ ಪ್ರಸಿದ್ದ ವೀರ ಪುರುಷ ಜನಿಸಿದ್ದ . ಈತ ಗುಜರನ್ ಬರಿಯ ವೀರ ಪುರುಷ.
ಗುಜ್ಜೆ: ಹಲಸಿನ ಹಣ್ಣಿಗೆ ಸಾಮಾನ್ಯವಾಗಿ ತುಳುವಿನಲ್ಲಿ ಪೆಲಕಾಯಿ ಎನ್ನುತ್ತಾರೆ. ಗುಜ್ಜೆ ಎಂಬ ಪದವೂ ಬಳಕೆಯಲ್ಲಿದೆ. ಆದರೆ ಗುಜ್ಜೆ ಎಂಬುದು ಹಲಸಿನ ಮರದ ಒಂದು ತಳಿಯಾಗಿದ್ದು ಕ್ರಮೇಣ ಪೆಲಕಾಯಿ ಬದಲು ಆ ಶ್ರೇಷ್ಟ ತಳಿಯ ಹೆಸರು ಜನಪ್ರಿಯವಾಯಿತು. ಗುಜ್ಜರ್ ಬುಡಕಟ್ಟು ಅಥವಾ ವಲಸೆ ಜನಾಂಗದ ಜನ ಈ ತಳಿಯನ್ನು ತುಳುನಾಡಿಗೆ ಪರಿಚಯಿಸಿದ ಕಾರಣ ಈ ತಳಿಗೆ ‘ಗುಜ್ಜೆ ‘ ಎಂಬ ಹೆಸರು ಬಂದಿತು. ಬಾಟಲ್ (Minaral water) ನೀರಿಗೆ ಬಿಸ್ಲರಿ ಹೆಸರು ಬಂದಂತೆ ಪೆಲಕಾಯಿಗಿಂತ ಗುಜ್ಜೆ ಜನಪ್ರಿಯವಾಯಿತು. ಎಲ್ಲದಕ್ಕೂ ಗುಜ್ಜೆ ಎನ್ನುವ ಕಾರಣ ಗುಜರನ್ನರು ತಂದ ಹಲಸಿನ ತಳಿ ಯಾವುದೆಂದು ತಿಳಿಯಲು ಸಾಧ್ಯವಾಗುವುದಿಲ್ಲ.
ಗುಜ್ಜಾಡಿ: ಗುಜ್ಜರ್ ಸಮುದಾಯ ಕರಾವಳಿ ಮೂಲಕ ಉಡುಪಿಯ ಸಮೀಪ ನೆಲೆಯೂರಿದ ಪ್ರದೇಶವಾಗಿದೆ.
ಗುಜ್ಜರಬೆಟ್ಟು:ಗುಜ್ಜರ್ ಜನಾಂಗ ತುಳುನಾಡಿನಲ್ಲಿ ನೆಲೆಸಿ ಒಣಭೂಮಿಯಲ್ಲಿ ಕೃಷಿ ಮಾಡಿದ ಪ್ರದೇಶ ಉಡುಪಿಯ ಕೆಮ್ಮಣ್ಣು ಗ್ರಾಮದಲ್ಲಿದೆ.
ಗುಜ್ಜರ ಕೆರೆ: ಇದು ಅತೀ ಪ್ರಾಚೀನ ಕೆರೆಯಾಗಿದ್ದು, ಈಗ ಹೂಳು ತುಂಬಿ ಮುಚ್ಚಿ ಹೋಗಿದೆ. ಇದು ಗುಜರನ್ನರು ವಲಸೆ ಬಂದ ನಂತರ ನಿರ್ಮಿಸಿದ ಕೆರೆಯಾಗಿದೆ. ದಕ್ಷಿಣ ಮಂಗಳೂರಿನ ಜಪ್ಪಿನಮೊಗೆರು ಭಾಗದಲ್ಲಿ ಈ ಕೆರೆ ಕಂಡು ಬರುತ್ತದೆ.
ಗುಜರನ್ : ತುಳುನಾಡಿನಲ್ಲಿ ಗುಜ್ಜರ್ ಎಂಬುದು ಗುಜರನ್ ಆಗಿ ಬದಲಾಗಿದ್ದು ಒಂದು ಪುರಾತನ ಜನಾಂಗ. ಗುಜರನ್ ಒಂದು ಅತೀ ಪ್ರಾಚೀನ ಜಾತಿ ಪೂರ್ವ ಬರಿಗಳಲ್ಲಿ ಒಂದಾಗಿದ್ದು. ಬಂಟ ಮತ್ತು ಇತರ ಎಲ್ಲ ತುಳುವ ಜಾತಿಗಳಲ್ಲಿ ಕಂಡುಬರುವ ಸಾಮಾನ್ಯ ವಂಶವಾಹಿ ಬರಿಯಾಗಿದೆ.
ಪ್ರಶಾಂತ್ ಭಂಡಾರಿ ಕಾರ್ಕಳ