September 20, 2024

       ಗುರು ಗ್ರಹ ದಿನಾಂಕ 12.09.2017 ರಂದು 7 ಗಂಟೆ 30 ನಿಮಿಷಕ್ಕೆ ತುಲಾರಾಶಿಗೆ ಪ್ರವೇಶಿಸುತ್ತಾನೆ. ಮಳೆಯು ಧಾರಾಳವಾಗಿ ಸುರಿಯುತ್ತದೆ ದವಸಧಾನ್ಯಗಳ ಬೆಳೆ ಹಾಳಾಗಬಹುದು. ನಿತ್ಯೋಪಯೋಗಿ ವಸ್ತುಗಳಿಗೆ ಬೆಲೆ ಏರಲಿದೆ. ವೃಷಭ, ಧನು, ಕರ್ಕ ರಾಶಿಯವರಿಗೆ ಸುವರ್ಣ ಪಾದ – ಶುಭಫಲ. ಮೇಷ, ಮಕರ, ಕನ್ಯಾ ರಾಶಿಗೆ ಕೌಪ್ಯ ಪಾದ – ಧನಲಾಭ. ಮೀನ, ವೃಶ್ಚಿಕ, ಸಿಂಹ ರಾಶಿಗೆ ತಾಮ್ರ ಪಾದ – ಲಕ್ಷ್ಮಿ ಪ್ರಾಪ್ತಿ. ಕುಂಭ, ತುಲಾ, ಮಿಥುನ ರಾಶಿಯವರಿಗೆ ಲೋಹ ಪಾದ – ಕಷ್ಟ ಫಲ.
        ಶನಿದೇವನು 26.09.2017 ರಿಂದ ಮಾರ್ಗಿಯಾಗಿ ಧನುರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಸರಕಾರಿ ತೊಂದರೆಗಳು, ಮಂತ್ರಿ ಮಾನ್ಯರಲ್ಲಿ ಗಲಾಟೆ, ಪಕ್ಷಾಂತರಗಳು ಆಡಳಿತರೂಢ ಪಕ್ಷಕ್ಕೆ ಬಹುಮತ ಬರಲು ತೊಂದರೆಗಳು ಸಂಭವ ಕಾಶ್ಮೀರ ಬಂಗಾಳ ಉತ್ತರಪ್ರದೇಶ ಮಧ್ಯಪ್ರದೇಶಗಳಲ್ಲಿ ಹೆಚ್ಚಿನ ತೊಂದರೆಗಳು ಬರುತ್ತದೆ. ವಸ್ತುಗಳ ಬೆಲೆ ಸ್ವಲ್ಪ ಕಡೀಮೆಯಾಗಲಿದೆ ಮೇಷ ವೃಶ್ಚಿಕ ಮಿಥುನ ರಾಶಿಗೆ ಸುವರ್ಣ ಪಾದ – ಮಹಾಚಿಂತೆ. ಮೀನ ಧನು ಸಿಂಹ ಕೌಪ್ಯಪಾದ – ಧನಲಾಭ. ಕುಂಭ ತುಲಾ ಕರ್ಕಕ್ಕೆ ತಾಮ್ರ ಪಾದ – ಲಕ್ಷ್ಮಿ ಪ್ರಾ ಪ್ತಿ. ಮಕರ ಕನ್ಯಾ ವೃಷಭಕ್ಕೆ ಲೋಹ ಪಾದ – ಕಷ್ಟ ವಿದೆ. ವೃಶ್ಚಿಕ ಶನಿಯ ಫಲ, ಶನಿ ಧನು ರಾಶಿಯಲ್ಲಿ ಸಂಚರಿಸಲು, ಧನು ಕರ್ಕ ಕುಂಭ ರಾಶಿ ಬಿಟ್ಟು ಉಳಿದ ರಾತಿಯವರಿಗೆ ಶುಭಫಲವಿದೆ.

ಗುರು ತುಲಾ ರಾಶಿಗೆ, ಶನಿ ಧನುರಾಶಿಗೆ ಬಂದು ವರ್ಷಪೂರ್ತಿ ಇರುತ್ತಾರೆ. ರಾಹು ಕೇತುಗಳ ಮಕರ ಕರ್ಕದಲ್ಲಿ ಸಂಚರಿಸುತ್ತಿದ್ದು, ಜಗತ್ತಿಗೆ ಜಲಾಪಘಾತ ತೊಂದರೆ ನೀಡುತ್ತಾರೆ. ಗ್ರಹಣದ ದೋಷದೊಂದಿಗೆ ಈ ಛಾಯ ಗ್ರಹಗಳು, ಹಲವಾರು ದೇಶಕ್ಕೆ ತೊಂದರೆದಾಯಕ, ಪಾಶ್ಚಿಮಾತ್ಯದೇಶ ಉತ್ತರದೇಶಗಳಿಗೆ ಹಾನಿನೀಡಲಿದೆ.

ಗೋಚಾರ ಫಲಗಳು

        ಮೇಷರಾಶಿಗೆ ಗುರುಸಪ್ತನಾಗಿದ್ದು, ಕೌಪ್ಯ ಪಾದದಲ್ಲಿ ಇರುವುದರಿಂದ ಧನಲಾಭವಿದೆ. ವೃಷಭರಾಶಿಗೆ ಗುರು 6 ನೇ ಮನೆಯಲ್ಲಿ ಸುವರ್ಣಪಾದದಲ್ಲಿ ಇರುವುದರಿಂದ ಶುಭಫಲವಿದೆ. ಮಿಥುನರಾಶಿಗೆ ಗುರು ಪಂಚಮನಾದರೂ ಲೋಹಪಾದದಲ್ಲಿ ಕಷ್ಟಫಲ ನೀಡುತ್ತಾನೆ, ರಾಜಕೀಯ ಸೋಲು ಸಂಭವ. ಕರ್ಕರಾಶಿಗೆ ನಾಲ್ಕನೇ ಗುರು ಶುಭ. ಸಿಂಹರಾಶಿಗೆ ಮೂರನೇ ಗುರು ಲಾಭ ನೀಡುವನು. ಕನ್ಯಾರಾಶಿಗೆ ಧನಲಾಭ ಕಾರಕ. ತುಲಾರಾಶಿಗೆ ಬಹಳಷ್ಟು ಕಷ್ಟಫಲ. ವೃಶ್ಚಿಕರಾಶಿಗೆ, ಧನುರಾಶಿಗೆ, ಮಕರರಾಶಿಗೆ ಸುಖಫಲವಿದೆ. ಕುಂಭರಾಶಿಗೆ ಅಶುಭ, ಮೀನರಾಶಿಗೆ ಶುಭ. ಅಷ್ಟಕವರ್ಗ ಕುಂಡಲಿಯಲ್ಲಿ ಶುಭ ಬಿಂದುಗಳು ಹೆಚ್ಚು ಇದ್ದರೆ, ಬಾರೀ ತೊಂದರೆಗಳು ಬಾಧಿಸುವುದಿಲ್ಲ. ಶನಿಯು ಧನು ರಾಶಿಯವರಿಗೆ ಏಲುವರೆ ಪೀಡೆಯನ್ನು ನೀಡುತ್ತಾನೆ. ಕರ್ಕರಾಶಿಯವರಿಗೆ ಆರನೇ ಶನಿಯಾದರೂ ಸಪ್ತಮ ಕೇತುವಿನಿಂದಾಗಿ ತೊಂದರೆ ನೀಡುವನು. ಕುಂಭರಾಶಿಯವರಿಗೆ ಏಕಾದಶ ಶನಿಯಾದರೂ ಆರನೇ ರಾಹು ಇರುವುದರಿಂದ ಅಶುಭದಾಯಕ. ಶನಿಯು ಧನುರಾಶಿ ಸಂಚಾರ, ಬೆನ್ನುಮೂಲೆ, ಎತ್ತರದಿಂದ ಪತನ, ವಾಹನ ಅಪಘಾತ, ಇದರ ತೊಂದರೆ ನೀಡಿದರೆ, ಗುರು ಮಧುಮೇಹ, ಕೊಬ್ಬು ಹೆಚ್ಚುವುದು, ಹೃದ್ರೋಗ, ಮೂತ್ರಾಶ್ಮರಿ ಇತ್ಯಾದಿ ತೊಂದರೆ ಈ ವರ್ಷ ನೀಡುತ್ತಾರೆ. ಉಳಿದ ಗ್ರಹಗಳು ಪ್ರತಿ ತಿಂಗಳು ಪರ್ಯಟನೆ ಮಾಡುವುದರಿಂದ, ಮಿಶ್ರಫಲ ಮಾತ್ರ ಇದೆ. ಶನಿಯು ಶುಭ ಬಿಂದು ಹೆಚ್ಚಾಗಿರುವ ರಾಶಿಯಲ್ಲಿ ಸಂಚರಿಸಲು ಶುಭವಿದೆ.

ಜ್ಯೋತಿಷ್ಯಿ: ಕೆ.ಅನಂತರಾಮ ಬಂಗಾಡಿ

 

Leave a Reply

Your email address will not be published. Required fields are marked *