January 18, 2025
Prakruti

ಗುರುವಿಗೆ ಕವಿನಮನ
ಶಿಕ್ಷಕರ ದಿನಾಚರಣೆಯ ಈ ಸುದಿನ
ಬರೆಯುತ್ತಿರುವೆನು ಒಂದು ಪುಟ್ಟ ಕವನ
ತಿಳಿಸಲು ಗುರುಗಳಿಗೆ ಮನ ಪೂರ್ವಕ ನಮನ.

ಆಟ ಪಾಠದಿಂದ ಸೆಳೆದರು ನನ್ನ ಗಮನ
ಜ್ಞಾನಾರ್ಜನೆಯಿಂದ ಅಳಿಸಿದರು ಅಜ್ಞಾನ
ಸಾವಿರಾರು ಮಕ್ಕಳಿಗೆ ಮಾಡುತ ಅಕ್ಷರದಾನ
ರೂಪಿಸಿದರು ಅರ್ಥಪೂರ್ಣ ಈ ಜೀವನ.

ನನ್ನಲ್ಲಿ ಅಡಗಿದ ಸುಪ್ತ ಪ್ರತಿಭೆಯನ್ನ
ಗುರುತಿಸಿ ಪ್ರೋತ್ಸಾಹಿಸಿದ ನಿಮ್ಮನ್ನ
ಜೀವನವಿಡೀ ಸ್ಮರಿಸುವೆ ಗುರುವರ್ಯರನ್ನ.

ಮಾಡಲು ಅಸಾಧ್ಯ ನಿಮ್ಮ ಗುಣಗಾನ
ಬಾಳಲ್ಲಿ ದೈವವಿತ್ತ ಬಹುದೊಡ್ಡ ಬಹುಮಾನ
ಭವಿಷ್ಯಕ್ಕೆ ಬುನಾದಿ ಹಾಕಿದ ಗುರುವಿನ
ಪಾದಾರವಿಂದಕೆ ನನ್ನ ಕೋಟಿ‌-ಕೋಟಿ ನಮನ.

✍️ ಪ್ರಕೃತಿ ಭಂಡಾರಿ ಆಲಂಕಾರು.

Leave a Reply

Your email address will not be published. Required fields are marked *