January 18, 2025
kae-2018-2-28-1514437541

ಕರ್ನಾಟಕ ರಾಜ್ಯದಲ್ಲಿ 2018 ವಿಧಾನಸಭಾ ಚುನಾವಣಾ ವರ್ಷವಾಗಿದ್ದು, ಮೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆ ಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಕಾರ್ಯತಂತ್ರದಲ್ಲಿ ತೊಡಗಿದ್ದು ಸಮರ್ಥ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡಿ ಕಣಕ್ಕಿಳಿಸುವ ಕಸರತ್ತು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಈ ಸಂದರ್ಭ ಜಾತಿ ಲೆಕ್ಕಚಾರ, ಅಭ್ಯರ್ಥಿಯಾಗುವವರ ನಾಯಕತ್ವ ಗುಣ, ಬೆಂಬಲಿಗರ ಸಂಖ್ಯೆ ಮತ್ತು ಇತರ ಸಾಮಾಜಿಕ ವರ್ಚಸ್ಸನ್ನು ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಈ ನಡುವೆ ನಮ್ಮ ಸಮುದಾಯದ ರಾಜಕಾರಣಿಗಳಾಗುವ ಯುವಕರಿಗೆ ಅವಕಾಶ ಒದಗಿ ಬಂದಿದೆ. ಈ ಮೊದಲು ಕೂಡ ತನ್ನ ಅರ್ಹತೆ ಮತ್ತು ಅರ್ಹ ನಾಯಕತ್ವ ಗುಣದಿಂದ ರಾಜಕೀಯದಲ್ಲಿ ಮೇಲೆರಬಹುದು ಎಂಬುದನ್ನು ಕೂಡಾ ಸಾಧಿಸಿ ತೋರಿಸಿದ್ದಾರೆ. ಜಾತಿ ಸಮುದಾಯ ಸಣ್ಣದು ಎಂಬ ಕಾರಣಕ್ಕೆ ಕೆಲವರು ಟಿಕೆಟ್ ವಂಚಿತರಾಗಿದ್ದರೂ ತಮ್ಮ ಸ್ವಯಂ ಸಾಮರ್ಥ್ಯದಿಂದ ಅರ್ಹತೆ ಪಡೆದು ಜನರಿಂದ ಆಯ್ಕೆಯಾದ ಭಂಡಾರಿ ಸಮುದಾಯದ ಮೊದಲ ಶಾಸಕ ಶ್ರೀ ಹೆಚ್. ಗೋಪಾಲ ಭಂಡಾರಿ ಕಾರ್ಕಳ. ಇವರು ಈ ಬಾರಿಯೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಇನ್ನೊಬ್ಬ ಯುವ ನಾಯಕ ಶ್ರೀ ಕಿಶೋರ್ ಕುಮಾರ್ ಪುತ್ತೂರು ಇವರದೇ ಹಾದಿಯಲ್ಲಿದ್ದು ಈಗಾಗಲೇ ಭಾರತೀಯ ಜನತಾ ಪಾರ್ಟಿಯಲ್ಲಿ ಉನ್ನತ ಸ್ಥಾನ ಹೊಂದಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಶ್ರೀ ಹೆಚ್. ಗೋಪಾಲ ಭಂಡಾರಿ

  • ಕಾರ್ಕಳ ತಾಲೂಕಿನ ಹೆಬ್ರಿಯ ಚಾರಾ ಗ್ರಾಮ ಹುತ್ತುರ್ಕೆ ಮನೆಯ ನಂದ್ಯಪ್ಪ ಭಂಡಾರಿಯವರ ಪುತ್ರನಾಗಿ ಜನನ
  • ವೃತ್ತಿಯಲ್ಲಿ ಕೃಷಿಕನಾಗಿದ್ದು ಕೃಷಿಕ ಹಿನ್ನಲೆಯುಳ್ಳ ಗೇಣಿದಾರ ಕುಟುಂಬಕ್ಕೆ ಸೇರಿದವರಾಗಿದ್ದು ರಾಜಕೀಯ ಹಿನ್ನಲೆಯಿಲ್ಲದೆ ರಾಜಕಾರಣಿಯಾದರು.
  • ಒಕ್ಕಲು ಗೇಣಿದಾರರ ಹೋರಾಟಕ್ಕೆ ಹೊಸ ಭಾಷ್ಯ ಬರೆದ ನಾಯಕ
  • 22000 ಗೇಣಿದಾರ ಕುಟುಂಬಗಳಿಗೆ ಭೂಮಿ ಒದಗಿಸುವಲ್ಲಿ ಶ್ರಮಿಸಿದ ನೇತಾರ.
  • 1999 ರಲ್ಲಿ ಮೊದಲ ಬಾರಿಗೆ ಕಾರ್ಕಳ ವಿಧಾನಸಭೆ ಚುನಾವಣೆಯಲ್ಲಿ ಕೆ ಪಿ ಶೆಣೈಯವರನ್ನು ಬಹು ಅಂತರದಿಂದ ಸೋಲಿಸಿ ಶಾಸಕರಾದರು.
  • 2008 ರಲ್ಲಿ ಎರಡನೇ ಬಾರಿ ಮತ್ತೊಮ್ಮೆ ಕಾರ್ಕಳ ವಿಧಾನಸಭೆಗೆ ಸ್ಪರ್ಧಿಸಿ ಶಾಸಕರಾದರು.
  • ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನ ಹೊಂದಿರುವ ಶ್ರೀಯುತರು 2018 ರ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
  • ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಇವರು ಜನರ ಕಷ್ಟ ಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಗುಣದ ಕಾರಣಕ್ಕಾಗಿ ಕಾರ್ಕಳದಾದ್ಯಂತ ತನ್ನ ವರ್ಚಸ್ಸು ಹೊಂದಿದ್ದಾರೆ.
  • ಹಿಂದುಳಿದ ವರ್ಗಗಳ ನಾಯಕನೆಂಬ ಜನಪ್ರಿಯತೆ ಕೂಡಾ ಇವರಿಗಿದೆ.

 

 

ಶ್ರೀ ಕಿಶೋರ್ ಕುಮಾರ್ ಪುತ್ತೂರು

  • ಪುತ್ತೂರಿನ ಆರ್ ಎಸ್ ಎಸ್ ಪ್ರಮುಖರಾದ ರಾಮಣ್ಣ ಬೊಟ್ಯಾಡಿಯವರ ಪುತ್ರ.
  • ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರುವ ಇವರು ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತರ ಪದವಿ ಪಡೆದಿರುತ್ತಾರೆ.
  • ವಿದ್ಯಾರ್ಥಿ ಜೀವನದಲ್ಲೇ ಆರ್ ಎಸ್ ಎಸ್ ಮತ್ತು ಎಬಿವಿಪಿ ಯ ಕಡೆ ಒಲವು ಹೊಂದಿದ್ದ ಇವರು ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
  • 2008 ರಲ್ಲಿ ಯುವ ಸಂಘಟನೆಯ ಜವಬ್ದಾರಿ ಹೊತ್ತು ನಳಿನ್ ಕುಮಾರ್ ರವರು ಲೋಕಸಭೆಗೆ ಆಯ್ಕೆಯಾಗುವಲ್ಲಿ ಶ್ರಮಿಸಿದ ಯುವ ನಾಯಕ.
  • ಆರ್ ಎಸ್ ಎಸ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಮಂಡಲ ಪ್ರವಾಸಿ ಮತ್ತು ಮುಖ್ಯ ಶಿಕ್ಷಕ ಮೊದಲಾದ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ‘ಸರಹದ್ ಕೋ ಪ್ರಣಾಮ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 2011ರಲ್ಲಿ ‘ಕಾಶ್ಮೀರ ಚಲೋ’ ಎಂಬ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
  • 2009 ರಲ್ಲಿ ದಕ್ಷಿನ ಕನ್ನಡ ಬಿಜೆಪಿ ಯುವಮೋರ್ಚಾ ಅಭ್ಯರ್ಥಿಯಾಗಿ ಆಯ್ಕೆಯಾಗಿ, 2014 ರಿಂದ ಭಾರತೀಯ ಜನತಾ ಯುವ ಮೋರ್ಚಾದ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಪ್ರಿಯರಾದರು.
  • ಪುತ್ತೂರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಅನುಭವ, ಪ್ರಮುಖರ ಗೆಲುವಿಗೆ ಶ್ರಮಿಸಿದಲ್ಲದೆ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ದುಡಿದ ಕಾರಣ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ.
  • ಇವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ವೈಯಕ್ತಿಕ ವರ್ಚಸ್ಸು, ಉತ್ತಮ ಶೈಕ್ಷಣಿಕ ಮತ್ತು ಸಂಘದ ಹಿನ್ನಲೆ, ಯುವ ನಾಯಕತ್ವ ಮತ್ತು ಪ್ರಭಾವಿ ಸಮುದಾಯಗಳ ಬೆಂಬಲ ಇವರ ಗೆಲುವಿಗೆ ಸಹಕಾರಿಯಾಗಬಹುದು.

 

ಈ ಇಬ್ಬರು ಅರ್ಹ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಗುರುತಿಸಿ ಟಿಕೆಟ್ ನೀಡಿ ಹಿಂದುಳಿದ ವರ್ಗಗಳ ನಾಯಕರಿಗೆ ರಾಜಕೀಯವಾಗಿ ಬೆಳೆಯಲು ಸಹಕರಿಸಬೇಕೆಂದು ಭಂಡಾರಿ ವಾರ್ತೆ ಆಗ್ರಹಿಸುತ್ತದೆ. ಶ್ರೀಯುತ ಹೆಚ್. ಗೊಪಾಲ ಭಂಡಾರಿ ಮತ್ತು ಶ್ರೀ ಕಿಶೋರ್ ಕುಮಾರ್ ಪುತ್ತೂರು ಇವರಿಗೆ ಟಿಕೆಟ್ ದೊರೆತು ಶಾಸಕರಾಗಿ ಆಯ್ಕೆಯಾಗಿ ಉನ್ನತ ಮಟ್ಟಕ್ಕೆ ಏರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಆಶಿಸುತ್ತದೆ.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *