
ಪಡುಬಿದ್ರಿಯ ನಡ್ಸಾಲು ಗ್ರಾಮದ ಭಂಡಾರಿ ಹೌಸ್ ನಲ್ಲಿ ಹಂಗ್ಳೂರು ಶ್ರೀ ಶೀನ ಭಂಡಾರಿಯವರು ಏಪ್ರಿಲ್ 12 ರ ಗುರುವಾರ ಬೆಳಿಗ್ಗೆ 6:30 ಕ್ಕೆ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.ಅವರಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಕಮಲಾ ಶೀನ ಭಂಡಾರಿ,ಮೂವರು ಗಂಡು ಮಕ್ಕಳು,ಮೂವರು ಹೆಣ್ಣು ಮಕ್ಕಳು,ಸೊಸೆಯಂದಿರು,ಅಳಿಯಂದಿರು,ಮೊ ಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಹಂಗ್ಳೂರು,ಪಡುಬಿದ್ರಿ ಭಂಡಾರಿ ಕುಟುಂಬಸ್ಥರ ಹಿರಿಯರಾಗಿ,ಮಾರ್ಗದರ್ಶಕರಾಗಿದ್ದ ಶ್ರೀ ಶೀನ ಭಂಡಾರಿಯವರ ನಿಧನದಿಂದ ದುಃಖತಪ್ತ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ
ತೊಂಬತ್ತರ ಆಸುಪಾಸಿನಲ್ಲೂ ಲವಲವಿಕೆಯಿಂದ ಓಡಾಡಿಕೊಂಡಿದ್ದ ಹಿರಿಯ ಜೀವ,ಅಸಂಖ್ಯಾತ ಬಂಧುಗಳಿಗೆ ವೃತ್ತಿಯನ್ನು ಕಲಿಸಿ ಜೀವನಕ್ಕೊಂದು ದಾರಿ ಮಾಡಿಕೊಟ್ಟ ಗುರುಗಳು….ನನ್ನ ಮಾವ ಹಂಗ್ಳೂರು ಶ್ರೀ ಶೀನ ಭಂಡಾರಿ ಇನ್ನಿಲ್ಲ…..ದುಃಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಈ ವರದಿ.
ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
ಪೂಜ್ಯರು
ನಮ್ಮ ತಾಯಿಯವರ ಸಹೋದರ ಮಾವ
ನಮ್ಮ ತಂದೆಯವರಿಗೆ ವೃತ್ತಿಯ ಮೊದಲ ಗುರುಗಳು
ನಿಮ್ಮ ನೆನಪು ಸದಾ ನಮ್ಮೊಂದಿಗೆ ಅಜ್ಜಯ್ಯ…
ಓಂ ಶಾಂತಿ