
ಬಳ್ಳಾರಿಯ ಜೆ.ಎಸ್.ಡಬ್ಲ್ಯೂ.ಸ್ಟೀಲ್ ಲಿಮಿಟೆಡ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಶ್ರೀ ರಾಜೇಶ್ ಭಂಡಾರಿ ಬೆಳುವಾಯಿ ಮತ್ತು ಶ್ರೀಮತಿ ಚೇತನ ರಾಜೇಶ್ ಭಂಡಾರಿ ದಂಪತಿಯು ತಮ್ಮ ಪುತ್ರ ಅದ್ವಿತ್ ರ ನಾಲ್ಕನೇ ವರ್ಷದ ಹುಟ್ಟು ಹಬ್ಬವನ್ನು ಜನವರಿ 18,2019 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅದ್ವಿತ್ ರಿಗೆ ಅವರ ತಂದೆ,ತಾಯಿ,ಅಜ್ಜಿ ಲಲಿತಾ ಗೋಪಾಲ್ ಭಂಡಾರಿ ಬೆಳುವಾಯಿ,ಅಜ್ಜ ಶ್ರೀ ನಿರಂಜನ್ ಭಂಡಾರಿ ಬಾರ್ಕೂರು, ಅಜ್ಜಿ ಶ್ರೀಮತಿ ವನಿತಾ ನಿರಂಜನ್ ಭಂಡಾರಿ,ಅತ್ತೆ ಮಾವಂದಿರು,ದೊಡ್ಡಪ್ಪ ದೊಡ್ಡಮ್ಮಂದಿರು,ಅಣ್ಣಂದಿರು,ಅಕ್ಕಂದಿರು, ಕುಟುಂಬಸ್ಥರು ಹಾಗೂ ಬಳ್ಳಾರಿಯ ಕಿಡ್ಸ್ ನರ್ಸರಿಯ ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅದ್ವಿತ್ ರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
–ಭಂಡಾರಿ ವಾರ್ತೆ.