
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಲ್ಗುಣಿಯಲ್ಲಿ ಶ್ರೀ ಶಿವು ಪಲ್ಗುಣಿ ಮತ್ತು ಶ್ರೀಮತಿ ಸುಧಾ ಶಿವು ಪಲ್ಗುಣಿ ದಂಪತಿಯು ತಮ್ಮ ಮುದ್ದಿನ ಮಗಳು
ಬೇಬಿ ಶ್ರೀಶಾ ಳ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 11 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಈ ಶುಭ ಸಂದರ್ಭದಲ್ಲಿ ತಂದೆ ತಾಯಿ ಅಜ್ಜ ಶ್ರೀ ಈರಪ್ಪ ಭಂಡಾರಿ, ಅಜ್ಜಿ ಶ್ರೀಮತಿ ಸುಮತಿ ಈರಪ್ಪ ಭಂಡಾರಿ,ಅಜ್ಜಿ ಮಂಜಮ್ಮ ಕೇಶವ ಭಂಡಾರಿ ಮತ್ತು ಕುಟುಂಬಸ್ಥರು ಶುಭ ಕೋರಿದರು.
ಬೇಬಿ ಶ್ರೀಶಾ ಳ ಮಾವ ಯುವ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಮಹೇಂದ್ರ ಕುಮಾರ್ ಪಲ್ಗುಣಿಯವರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಮ್ಮ ಸಂತಸವನ್ನು ಭಂಡಾರಿವಾರ್ತೆಯೊಂದಿಗೆ ಹಂಚಿಕೊಂಡರು.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀಶಾಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.