
ಭಂಡಾರಿ ವಾರ್ತೆಯ ಮುಖ್ಯ ವರದಿಗಾರರು, ಭಂಡಾರಿ ಬಂಧುಗಳಿಗೆ ಚಿರಪರಿಚಿತರಾಗಿರುವ ಮತ್ತು ನೇರ ನಡೆ ನುಡಿಯ ವ್ಯಕ್ತಿತ್ವ ದ ಶಿರಾಳಕೊಪ್ಪದ ಭಾಸ್ಕರ ಭಂಡಾರಿ ಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಇವರು ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ಪುತ್ರ. ಸ್ವಂತ ಸಲೂನ್ ಉದ್ದಿಮೆ ಹೊಂದಿರುವ ಇವರು ಶಿರಾಳಕೊಪ್ಪದಲ್ಲಿ ಅನೇಕ ಪ್ರಮುಖ ರಾಜಕೀಯ, ಸೇವಾ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಪ್ರಿಯರಾಗಿದ್ದಾರೆ.
ಇವರು ಪತ್ನಿ ನವ್ಯ ಭಾಸ್ಕರ್ ಭಂಡಾರಿ ಮತ್ತು ಮಗ ಭುವನ್ , ಭಾವನ್ ಮಗಳು ಭೂಮಿಕಾ ಮತ್ತು ಬಂಧುಗಳೊಂದಿಗೆ ಸಂಭ್ರಮ ಸಡಗರದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತ್ನಿ, ಪುತ್ರಿಯರು,ಅತ್ತೆ, ಮಾವ, ಸಹೋದರರು,ಸಹೋದರಿಯರು, ಸ್ನೇಹಿತರು, ಸಹೋದ್ಯೋಗಿಗಳು, ಆತ್ಮೀಯರು, ಶುಭ ಹಾರೈಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಮ್ಮ ಪ್ರೀತಿಯ ಭಾಸ್ಕರಣ್ಣನಿಗೆ ಭಂಡಾರಿ ವಾರ್ತಾ ತಂಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇವೆ. ದೇವರು ನಿಮಗೆ ಆರೋಗ್ಯ, ಐಶ್ವರ್ಯ ನೀಡಿ ಕರುಣಿಸಲಿ ಎಂದು ಬೇಡುತ್ತೇವೆ .
_ಭಂಡಾರಿ ವಾರ್ತೆ