
ಕೊಪ್ಪ ತಾಲೂಕಿನ ಹರಿಹರಪುರದ ಶ್ರೀಮತಿ ಪ್ರತಿಭಾ ವಿಜೇತ್ ಭಂಡಾರಿಯವರಿಗೆ ಮಾರ್ಚ್ 11, 2019 ರ ಸೋಮವಾರದಂದು ತಮ್ಮ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಕಥೆ, ಕವನಗಳ ಜೊತೆಗೆ ಹೊಸ ಹೊಸ ರುಚಿಯ ಅಡಿಗೆಯ ಬಗ್ಗೆ ಬರೆದು ಭಂಡಾರಿವಾರ್ತೆ ಓದುಗರಿಗೆ ಪರಿಚಿತರಾಗಿರುವ ಇವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಶ್ರೀನಿವಾಸ ಭಂಡಾರಿ ಮತ್ತು ಶ್ರೀಮತಿ ಗೀತಾ ಶ್ರೀನಿವಾಸ್ ಭಂಡಾರಿ ದಂಪತಿಯ ಪುತ್ರಿ.ಇವರು ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ದಿವಂಗತ ಜಗದೀಶ್ ಭಂಡಾರಿ ಮತ್ತು ಸುಜಾತ ಜಗದೀಶ್ ಭಂಡಾರಿಯವರ ಪುತ್ರ ಶ್ರೀ ವಿಜೇತ್ ಭಂಡಾರಿಯವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರತಿಭಾರವರಿಗೆ ಅವರ ತಂದೆ, ತಾಯಿ, ತಮ್ಮ ಪ್ರತಾಪ್ ಭಂಡಾರಿ, ಪತಿ ವಿಜೇತ್ ಭಂಡಾರಿ, ರಿಪ್ಪನ್ ಪೇಟೆ ಮತ್ತು ಹರಿಹರಪುರ ಭಂಡಾರಿ ಬಂಧುಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಶುಭ ಹಾರೈಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿರುವ ಪ್ರತಿಭಾ ಅವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ, ಅವರ ದಾಂಪತ್ಯ ಜೀವನವು ಸುಖಮಯವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ತನ್ನ ತಂಡ ಹಾಗೂ ಓದುಗರ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
“ಭಂಡಾರಿ ವಾರ್ತೆ.”