
ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕುಶಾಲ್ ಕುಮಾರ್ ಭಂಡಾರಿ ಇವರು ದಿನಾಂಕ 13/04/2019 ರ ಶನಿವಾರ ತಮ್ಮ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಪತ್ನಿ ಭವ್ಯ ಕುಶಾಲ್ , ಮಗಳು ಜಗತಿ ಕುಶಾಲ್ ಮತ್ತು ಬಂಧು ಮಿತ್ರರು , ಸ್ನೇಹಿತರು ಮತ್ತು ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.

ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕುಶಾಲ್ ಭಂಡಾರಿ ಬೆಂಗಳೂರು ಇವರು ಭಂಡಾರಿ ವಾರ್ತೆಯ ಸಕ್ರಿಯ ಸದಸ್ಯರಾಗಿದ್ದು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ . ಬೆಂಗಳೂರು ಭಂಡಾರಿ ಸಮಾಜ ಸೇವಾ ಸಂಘದಲ್ಲಿ ಖಜಾಂಚಿಯಾಗಿರುವ ಇವರು ಸಮಾಜಮುಖಿ ಕೆಲಸಗಳಿಗೆ ಬಹು ಬೇಗ ಸ್ಪಂಧಿಸುವ ಗುಣ ಹೊಂದಿದ್ದಾರೆ . ಇದಲ್ಲದೆ ಅನೇಕ ಭಂಡಾರಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ .ಮುಂದೆಯೂ ಅತಿಹೆಚ್ಚು ಸೇವಾಕಾರ್ಯಗಳು ಇವರಿಂದ ನಡೆಯಲಿ ಮತ್ತು ದೇವರು ಇನ್ನಷ್ಟು ಶಕ್ತಿ ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ
ಭಂಡಾರಿ ವಾರ್ತೆ