
ಭಂಡಾರಿ ಕುಟುಂಬದ ಬಾಲಪ್ರತಿಭೆ,ಕನ್ನಡ ಚಿತ್ರರಂಗದ ಬಾಲನಟ ಮಾಸ್ಟರ್ ಪ್ರೇರಣ್ ಇಂದು ತಮ್ಮ ಹದಿನಾಲ್ಕನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಪ್ರೇರಣ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ,ನಿರ್ದೇಶಕ, ನಿರ್ಮಾಪಕ, ಸಾಹಿತಿ ಶ್ರೀ ಸುಧಾಕರ ಬನ್ನಂಜೆಯವರ ದ್ವಿತೀಯ ಪುತ್ರ.

ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರೇರಣ್ ಗೆ ತಂದೆ ಶ್ರೀ ಸುಧಾಕರ ಬನ್ನಂಜೆ, ತಾಯಿ ಶ್ರೀಮತಿ ಮಮತಾ ಸುಧಾಕರ ಬನ್ನಂಜೆ ಮತ್ತು ಅಣ್ಣ ಶ್ರೀ ಪ್ರಾರ್ಥನ್ ಬನ್ನಂಜೆಯವರು ಶುಭ ಹಾರೈಸಿದ್ದಾರೆ. ಈ ಶುಭ ಸಂದರ್ಭದಲ್ಲಿ ಪ್ರೇರಣ್ ನ ಭವಿಷ್ಯ ಉಜ್ವಲವಾಗಿರಲಿ ಮತ್ತು ಅವರು ಚಿತ್ರರಂಗದಲ್ಲಿ ತಾರೆಯಾಗಿ ಮಿನುಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನದುಂಬಿ ಹಾರೈಸುತ್ತದೆ.
— ಭಂಡಾರಿವಾರ್ತೆ.