


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪೂರೈಸಿ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಕಳೆದ ನಾಲ್ಕು ವರ್ಷಗಳಿಂದ ದೈಜಿವರ್ಲ್ಡ್ ನ ಉದ್ಯೋಗಿಯಾಗಿರುವ ದಿವ್ಯಾರವರಿಗೆ ನಮ್ಮ ಭಂಡಾರಿವಾರ್ತೆಯೊಂದಿಗೆ ಅವಿನಾಭಾವ ಸಂಬಂಧ. ನಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಭಾಗವಹಿಸುತ್ತಾ, ನಿರೂಪಣೆ ಮಾಡುತ್ತಾ, ಆಗಾಗ ಲೇಖನಗಳನ್ನು ಬರೆಯುತ್ತಾ, ಕನ್ನಡ ಭಾಷೆಯ ವರದಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುತ್ತಾ, ಅವರಿಗೆ ದೊರೆತ ಸುದ್ದಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಭಂಡಾರಿವಾರ್ತೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಭಂಡಾರಿ ವಾರ್ತೆಯ ಒಂದು ವಿಡಿಯೋ ತುಣುಕಿನಲ್ಲಿ ದಿವ್ಯಾರವರ ಹಿನ್ನಲೆ ಧ್ವನಿಯನ್ನು ನೀಡಿರುತ್ತಾರೆ .
ಉಜಿರೆಯ ಶ್ರೀ ವಸಂತ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ವಸಂತ ಭಂಡಾರಿಯವರ ಹಿರಿಯ ಮಗಳಾದ ದಿವ್ಯ ಶಾಲಾ ದಿನಗಳಿಂದಲೂ ಪ್ರತಿಭಾವಂತೆ. ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ಜಿಲ್ಲಾ ಮಟ್ಟದಲ್ಲಿ,ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು. ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿದ ಇವರು ಮಂಗಳೂರಿನ ಆಕಾಶವಾಣಿಯಲ್ಲಿ ವಾಯ್ಸ್ ತರಬೇತಿ ಪಡೆದು ನಂತರ ಪ್ರಸಾರಭಾರತಿ ದೆಹಲಿಯಿಂದ ವಾಯ್ಸ್ ಆರ್ಟಿಕ್ಯುಲೇಶನ್ ಮತ್ತು ನರ್ಚರಿಂಗ್ ಇನ್ಷಿಯೇಟಿವ್ ತರಬೇತಿಯನ್ನೂ ಪಡೆದು ಕಳೆದ ನಾಲ್ಕು ವರ್ಷಗಳಿಂದ ದಾಯ್ಜಿವರ್ಲ್ಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಓದುವುದು, ಸಂಗೀತವನ್ನು ಆಲಿಸುವುದು ಇವರ ನೆಚ್ಚಿನ ಹವ್ಯಾಸಗಳು.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿವ್ಯಾರಿಗೆ ಅವರ ತಂದೆ,ತಾಯಿ, ತಂಗಿ ನವ್ಯ ಭಂಡಾರಿ, ತಮ್ಮ ದೀಕ್ಷಿತ್ ಭಂಡಾರಿ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.
ಕುಮಾರಿ ದಿವ್ಯಾ ಉಜಿರೆಯವರಿಗೆ ಹುಟ್ಟು ಹಬ್ಬದ ಈ ಶುಭದಿನದಂದು ಶ್ರೀ ದೇವರು ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ ಆಶೀರ್ವದಿಸಲಿ, ಭಂಡಾರಿವಾರ್ತೆಯೊಂದಿ ಗಿನ ನಿಮ್ಮ ಅನುಬಂಧ ಇನ್ನಷ್ಟು ಸದೃಡವಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಆಶಿಸುತ್ತಾ, ಭಂಡಾರಿವಾರ್ತೆ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
-ಭಂಡಾರಿವಾರ್ತೆ.
Happy birthday sis🎂🎂🎂