January 19, 2025
prakash pavoor

ಕಾಸರಗೋಡು ಮಂಜೇಶ್ವರದ ಶ್ರೀ ಪ್ರಕಾಶ್ ಭಂಡಾರಿ ಪಾವೂರು ಜೂನ್ 11 ರ ಮಂಗಳವಾರ ತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರೊಡಗೂಡಿ ಸಂತಸ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಮಂಜೇಶ್ವರದ ಪಾವೂರಿನ ಶ್ರೀ ಬಿರ್ಮಣ್ಣ ಭಂಡಾರಿ ಮತ್ತು ಶ್ರೀಮತಿ ಪ್ರೇಮ ಬಿರ್ಮಣ್ಣ ಭಂಡಾರಿ ದಂಪತಿಯ ಪುತ್ರರಾದ ಶ್ರೀ ಪ್ರಕಾಶ್ ಭಂಡಾರಿಯವರು ಮಂಗಳೂರಿನ ದಿಯಾ ಸಿಸ್ಟಮ್ಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಭಂಡಾರಿವಾರ್ತೆಯ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ  ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.


ಭಂಡಾರಿ ಸಮಾಜದೆಡೆಗಿನ ಕಳಕಳಿಯಿಂದ,ತಮ್ಮ ಕೈಲಾದ ಕಿಂಚಿತ್ ಸೇವೆ ಮಾಡುವ ಉದ್ದೇಶದಿಂದ  ಭಂಡಾರಿವಾರ್ತೆ ತಂಡದ ತಾಂತ್ರಿಕ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಸರಗೋಡು ಭಂಡಾರಿ ಸಮಾಜ ಸಂಘದ ಸಧಸ್ಯರಾಗಿರುವ ಇವರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರಕಾಶ್ ರವರಿಗೆ ಅವರ ತಾಯಿ,ಪತ್ನಿ ಶ್ರೀಮತಿ ಅಶ್ವಿನಿ ಪ್ರಕಾಶ್,ಮಗ ಪ್ರಶಸ್ತ್, ಅಣ್ಣಂದಿರು,ಅತ್ತಿಗೆಯಂದಿರು,ಅತ್ತೆ,ಮಾವ,ಭಾವಂದಿರು ಮತ್ತು ಸಮಸ್ತ ಮಂಜೇಶ್ವರ ಪಾವೂರು ಹಾಗೂ ಕಾರ್ಕಳ ಕಾಬೆಟ್ಟು ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು ಆಶೀರ್ವದಿಸಲಿ,ಅವರ ಮುಂದಿನ ಬಾಳು ಹಾಲು ಜೇನಿನಂತೆ ಸಿಹಿಯಾಗಿರಲಿ ಎಂದು ಹಾರೈಸುತ್ತಾ,ಭಂಡಾರಿವಾರ್ತೆಯ ಮತ್ತು ತಂಡದ ಪ್ರತಿಯೊಬ್ಬರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗುತ್ತಿದೆ.


-ಭಂಡಾರಿವಾರ್ತೆ.

Leave a Reply

Your email address will not be published. Required fields are marked *