ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಉಡುಪಿ ಕುಕ್ಕಿಕಟ್ಟೆಯವರಾದ ಶ್ರೀ ರಾಜಶೇಖರ ಭಂಡಾರಿಯವರು ಜುಲೈ 14 ರ ಭಾನುವಾರ ತಮ್ಮ ಹುಟ್ಟು ಹಬ್ಬದ ನಲುವತ್ತಾರನೇ ವರ್ಷಾಚರಣೆಯನ್ನು ಕುಟುಂಬದವರೊಡಗೂಡಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಉಡುಪಿ, ಪರ್ಕಳ ಕಬ್ಯಾಡಿ ಶ್ರೀ ಕೆ.ವಿಠ್ಠಲ ಭಂಡಾರಿ ಮತ್ತು ಕುಕ್ಕಿಕಟ್ಟೆ ದಿವಂಗತ ಸುಮತಿ ವಿಠ್ಠಲ ಭಂಡಾರಿ ದಂಪತಿಯ ಪುತ್ರರಾದ ಇವರು ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ವೃತ್ತಿ ವಾಹನ ಚಾಲನೆ. ಅದರಲ್ಲಿದ್ದುಕೊಂಡೇ ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣದಲ್ಲಿ ಬಿ .ಎ. ಪದವಿ ಪಡೆದಿರುವ ಇವರು ಪ್ರಸ್ತುತ ಯಲಹಂಕದಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾ ನಿಲಯದಲ್ಲಿ ಪ್ರಯೋಗಾಲಯದ ಮೇಲ್ವಿಚಾರಕರಾಗಿ ತಮ್ಮ ವೃತ್ತಿಯನ್ನು ಮಾಡಿಕೊಂಡಿದ್ದರೂ ಭಂಡಾರಿ ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಎರಡು ವರ್ಷದ ಅವಧಿಗೆ ಬೆಂಗಳೂರು ಭಂಡಾರಿ ಸಮಾಜ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ ತಮ್ಮ ಹುಟ್ಟೂರಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಇವರು ಬೆಂಗಳೂರಿನ ಶ್ರೀ ವಿನಾಯಕ ಭಜನಾ ಮಂಡಳಿಯ ಸದಸ್ಯರೂ ಹೌದು.ಹವ್ಯಾಸಿ ಗಾಯಕರಾಗಿರುವ ಇವರು ಹಲವಾರು ಸಭೆ ಸಮಾರಂಭಗಳಲ್ಲಿ ತಮ್ಮ ಗಾಯನದಿಂದ ಸಭಿಕರನ್ನು ರಂಜಿಸುತ್ತಿರುತ್ತಾರೆ.ರಾಜಶೇಖರ್ ರವರು ಹವ್ಯಾಸಿ ಭಜನಾ ಗಾಯಕರೂ ಹೌದು.
ಭಂಡಾರಿವಾರ್ತೆಯ ಆರಂಭದ ದಿನಗಳಿಂದಲೂ ನಮ್ಮೊಂದಿಗೆ ಗಟ್ಟಿಯಾಗಿ ನಿಂತು ನಮ್ಮ ನೈತಿಕ ಬಲ ಹೆಚ್ಚಿಸಲು ತಮ್ಮ ಸಂಪೂರ್ಣ ಸಹಾಯ ಸಹಕಾರ ನೀಡುತ್ತಾ,ನಮ್ಮನ್ನು ಬೆಂಬಲಿಸಿದ ಅವರಿಗೆ ನಾವು ಚಿರಋಣಿಯಾಗಿದ್ದೇವೆ.
ಹುಟ್ಟು ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ಅವರ ತಂದೆ,ಪತ್ನಿ ಶ್ರೀಮತಿ ಅಮಿತಾ ರಾಜಶೇಖರ ಭಂಡಾರಿ,ಪುತ್ರಿ ಪ್ರಣತಿ ರಾಜಶೇಖರ ಭಂಡಾರಿ, ಸಹೋದರ,ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ.
ಭಂಡಾರಿವಾರ್ತೆ ಮತ್ತು ನಮ್ಮ ತಂಡದ ಮೇಲಿನ ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ,ಭಗವಂತನು ತಮಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ನಿಮ್ಮ ಆಶೋತ್ತರಗಳನ್ನು ಶ್ರೀ ದೇವರು ನೆರವೇರಿಸಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ“ ಹಾರೈಸುತ್ತಾ,ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ