January 18, 2025
Raksha bhandary9

ಕುಂದಾಪುರ ಬಸ್ರೂರಿನ ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ ಉಮಾ ರತ್ನಾಕರ್ ಭಂಡಾರಿ ದಂಪತಿಯು ತಮ್ಮ ಪುತ್ರಿ “ರಕ್ಷಾ.ಆರ್.ಭಂಡಾರಿ” ಯವರ ಹುಟ್ಟುಹಬ್ಬವನ್ನು ಫೆಬ್ರವರಿ 1, 2019 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ರತ್ನಾಕರ್ ಭಂಡಾರಿ ದಂಪತಿಯ ಪುತ್ರಿಯಾದ ರಕ್ಷಾ ರವರು ದ್ವಿತೀಯ ಪಿಯುಸಿ ವರೆಗೆ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಪದವಿಯನ್ನು ಕುಂದಾಪುರದ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದವರು ಕಳೆದ ಆರು ತಿಂಗಳಿಂದ ಬೆಂಗಳೂರಿನ ಮಾರತ್ ಹಳ್ಳಿಯ ದೊಡ್ಡನೆಕ್ಕುಂದಿ ಯಲ್ಲಿರುವ ಆಕ್ಸೆಂಚರ್ ಗ್ರೂಪ್ಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ರಕ್ಷಾ ಅವರ ತಂದೆ ಶ್ರೀಯುತ ರತ್ನಾಕರ್ ಭಂಡಾರಿಯವರು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಸಕ್ರಿಯ ಸದಸ್ಯರಾಗಿದ್ದು ಆತ್ಮೀಯರೆಲ್ಲರಿಗೂ “ಆರ್ ಬಿ” ಎಂದೇ ಚಿರಪರಿಚಿತರು. ಇವರು ಸುಖಸಾಗರ್ ಗ್ರೂಪ್ಸ್ ನಲ್ಲಿ ಉದ್ಯೋಗಿಯಾಗಿದ್ದ ದಿನಗಳಿಂದಲೂ ಸಮಾಜ,ಸಂಘಟನೆಗಳಲ್ಲಿ ತೊಡಗಿಸಿಕೊಂಡವರು.ಪ್ರಸ್ತುತ ಇವರು ಬೆಂಗಳೂರಿನ ರಾಜಾಜಿನಗರದ ಕದಂಬ ಇಂಟರ್ನ್ಯಾಷನಲ್ ಹೋಟೆಲ್ ನ ಉದ್ಯೋಗಿಯಾಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಕ್ಷ ಅವರಿಗೆ ಅವರ ತಂದೆ, ತಾಯಿ, ಚಿಕ್ಕಪ್ಪ, ಅತ್ತೆಮಾವಂದಿರು, ಆಕ್ಸೆಂಚರ್ ಗ್ರೂಪ್ಸ್ ನ ಸಹೋದ್ಯೋಗಿಗಳು,ಬಸ್ರೂರು,ಮಂದರ್ತಿ,ತೀರ್ಥಹಳ್ಳಿಯ ಹೆಗ್ಗೋಡು ಹಾಗೂ ಶಿರಾಳಕೊಪ್ಪದ ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಜನುಮದಿನದ ಸಡಗರದಲ್ಲಿರುವ ರಕ್ಷಾ ಅವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು, ಉಜ್ವಲ ಭವಿಷ್ಯವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ. 

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *