ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ದಿವಂಗತ ಶ್ರೀ ಕೆ.ಅನಂತರಾಮ ಬಂಗಾಡಿ ಮತ್ತು ಶ್ರೀಮತಿ ಸುಮತಿ ಅನಂತರಾಮ ಬಂಗಾಡಿಯವರ ಪುತ್ರ ಶ್ರೀ ಸಂದೇಶ್ ಕುಮಾರ್ ಬಂಗಾಡಿಯವರು ನವೆಂಬರ್ 4, 2019 ರ ಸೋಮವಾರ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಇವರಿಗೆ ಇವರ ತಾಯಿ, ಪತ್ನಿ ಶ್ರೀಮತಿ ಶುಭ ಸಂದೇಶ್, ಅಕ್ಕ ಶ್ರೀಮತಿ ಸಂಧ್ಯಾ ಕೇಶವ ಹಿರೇಬೆಟ್ಟು, ಬಾವ ಶ್ರೀ ಕೇಶವ್ ಭಂಡಾರಿ ಹಿರೇಬೆಟ್ಟು, ಅಳಿಯ ಸಂಕೇತ್, ಸೊಸೆ ಸೃಷ್ಠಿ, ಮಾವ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿಯ ಜೀ ಲಕ್ಷ್ಮೀಪುರದ ಶ್ರೀ ಮಾಧು ಭಂಡಾರಿ, ಅತ್ತೆ ಶ್ರೀಮತಿ ಮಮತಾ ಮಾಧು ಭಂಡಾರಿಯವರು, ಬಂಧುಗಳು, ಸಹೋದ್ಯೋಗಿಗಳು, ಆತ್ಮೀಯರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಶ್ರೀ ಸಂದೇಶ್ ಕುಮಾರ್ ಬಂಗಾಡಿಯವರು ನಮ್ಮ ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಯ ಆರಂಭದ ದಿನದಿಂದಲೂ ಜೊತೆಗಿದ್ದು ಪತ್ರಿಕೆಯ ಅಭ್ಯುದಯಕ್ಕಾಗಿ ಶ್ರಮಿಸಿ,ಪ್ರಸ್ತುತ ಭಂಡಾರಿವಾರ್ತೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಂದೇಶ್ ಬಂಗಾಡಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ,ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯು ತುಂಬಿ ಹರಿಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಭಂಡಾರಿವಾರ್ತೆ ತಂಡದಿಂದ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.
- ಭಂಡಾರಿವಾರ್ತೆ.