
ಮಂಗಳೂರು ಮೂಡು ಮಾರ್ನಾಡು “ಲಕ್ಷ್ಮಿ ಛಾಯಾದ ದಿವಂಗತ ಜಯಲಕ್ಷ್ಮಿ ಮತ್ತು ಶ್ರೀ ಪೂವಪ್ಪ ಭಂಡಾರಿ ದಂಪತಿಯ ಪ್ರಥಮ ಪುತ್ರ ಶ್ರೀ ಶೈಲೇಶ್ ಭಂಡಾರಿ ಯವರು ಮಾರ್ಚ್ 25,2019 ರ ಸೋಮವಾರ ತಮ್ಮ 32 ನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ . ಶೈಲೇಶ್ ಭಂಡಾರಿ ಯವರು ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದಾರೆ .

ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತ್ನಿ ರೇಶ್ಮಾ ,ತಂದೆ, ತಮ್ಮ , ತಂಗಿ ಹಾಗೂ ಬಂಧುಮಿತ್ರರು ಶುಭ ಹಾರೈಸುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶೈಲೇಶ್ ಭಂಡಾರಿ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ