January 18, 2025
srikanth
ಬಂಟ್ವಾಳ ತಾಲ್ಲೂಕು ಪಾಣೆಮಂಗಳೂರು ತೆಕ್ಕಿಗುಡ್ಡೆ ದಿವಂಗತ ಬಾಲಕೃಷ್ಣ ಭಂಡಾರಿ ಮತ್ತು ಕಮಲಾಕ್ಷಿ ಬಾಲಕೃಷ್ಣ ಭಂಡಾರಿ ದಂಪತಿಗಳ ಪುತ್ರ…

 

ಶ್ರೀಯುತ ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು

ಜನವರಿ 1, 2020 ಬುಧವಾರ. ಇಂದು  ತನ್ನ ನಲವತ್ತೊಂದನೇ ವರ್ಷದ  ಜನ್ಮದಿನವನ್ನು ಬಹಳ ಸಡಗರ ಸಂಭ್ರಮದಿಂದ  ಆಚರಿಸಿಕೊಳ್ಳುತ್ತಿದ್ದಾರೆ.

ಸಮಾಜ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ಭಂಡಾರಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಭಂಡಾರಿ ವಾರ್ತೆಯ ಅಪ್ಪಟ ಅಭಿಮಾನಿಯಾಗಿರುವ ಶ್ರೀಕಾಂತ್ ಅವರು ಭಂಡಾರಿ ವಾರ್ತೆಗೆ ಹಲವಾರು ಸುದ್ದಿಗಳನ್ನು, ವರದಿಗಳನ್ನು ನೀಡಿ ಭಂಡಾರಿವಾರ್ತೆಗೆ ತಮ್ಮ ಪ್ರೋತ್ಸಾಹ, ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ.

 
 
 
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಕಾಂತ್ ಅವರಿಗೆ ಅವರ ತಾಯಿ, ಪತ್ನಿ ಶ್ರೀಮತಿ ಕಾವ್ಯ.ಜೆ.ಶ್ರೀಕಾಂತ್, ಮಕ್ಕಳಾದ ಬೇಬಿ ತನ್ವಿತ,ಮಾಸ್ಟರ್ ಅಶ್ವಿತ್, ಸಹೋದರಿಯರು, ಭಾವಂದಿರು, ಬಂಧು ಮಿತ್ರರು, ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.
 
 
 
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ಅವರಿಗೆ ಶ್ರೀ ದೇವರು ಆರೋಗ್ಯ, ಆಯುಷ್ಯ, ಸಕಲ ಐಶ್ವರ್ಯಗಳನ್ನು ಕೊಟ್ಟು ಅವರ ಸಂಸಾರವನ್ನು ಮುನ್ನಡೆಸಿ, ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಶಕ್ತಿ ಚೈತನ್ಯವನ್ನು ನೀಡಿ ಭಗವಂತನು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”  ಪ್ರೀತಿಪೂರ್ವಕವಾಗಿ ಶುಭ ಹಾರೈಸುತ್ತದೆ.
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *