
ನೆಲ್ಯಾಡಿಯ ದಿವಂಗತ ನಾರಾಯಣ ಭಂಡಾರಿ ಮತ್ತು ರುಕ್ಮಿಣಿ ನಾರಾಯಣ ಭಂಡಾರಿ ದಂಪತಿಯ ಮೊಮ್ಮಗ ಮತ್ತು ದಿವಂಗತ ಸುಜಾತ ಭಂಡಾರಿಯವರ ಪುತ್ರ
ಶ್ರೀಪಾಲ್ ಭಂಡಾರಿ
ತಮ್ಮ ಹುಟ್ಟುಹಬ್ಬವನ್ನು ದಿನಾಂಕ 28 ಡಿಸೆಂಬರ್ 2019 ರ ಶನಿವಾರದಂದು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಇವರ ಪತ್ನಿ ರಮ್ಯಾ ಶ್ರೀಪಾಲ್ , ಅಜ್ಜಿ ರುಕ್ಮಿಣಿ ನಾರಾಯಣ ಭಂಡಾರಿ , ಮಾವ ಶ್ರೀ ರವಿ ಭಂಡಾರಿ ಗಣೇಶ್ ನಗರ ಮತ್ತು ಅತ್ತೆ ಪೂರ್ಣಿಮಾ ರವಿ ಭಂಡಾರಿ ಮತ್ತು ನೆಲ್ಯಾಡಿಯ ಕುಟುಂಬಸ್ಥರು, ಕಾರ್ಕಳದ ಕುಟುಂಬಸ್ಥರು ಸ್ನೇಹಿತರು ಶುಭಾಶಯ ಕೋರಿದ್ದಾರೆ.
ಸಮಾಜ ಸೇವೆಯಲ್ಲಿ ಅತಿಯಾದ ಆಸಕ್ತಿ ಹೊಂದಿರುವ ಇವರು ಬಡತನವನ್ನು ಹತ್ತಿರದಿಂದ ಕಂಡವರು ಸದಾ ಬಡವರ ಸಮಸ್ಯೆಗಳಿಗೆ ಬಹುಬೇಗನೆ ಸ್ಪಂದಿಸುತ್ತಾರೆ. ಅಮೃತಸಂಜೀವಿನಿ ಕತಾರ್ ಸೇವಾ ಸಂಸ್ಥೆಯಲ್ಲಿ ತನ್ನನು ತೊಡಗಿಸಿಕೊಂಡು ಈ ಸ್ವಯಂ ಸಂಸ್ಥೆಯ ಸೇವೆಗಳಾದ ಅನಾರೋಗ್ಯಪೀಡಿತರಿಗೆ ಸಹಾಯ , ವಿದ್ಯಾಭ್ಯಾಸ ವಂಚಿತರಿಗೆ ವಿದ್ಯಾಭ್ಯಾಸ ಮತ್ತು ಸೂರು ಇಲ್ಲದವರಿಗೆ ಸೂರು ಒದಗಿಸುವ ಕಾರ್ಯಗಳಿಗೆ ಇವರದ್ದು ಪಾಲಿದೆ.
ಭಂಡಾರಿ ವಾರ್ತೆಗೆ ವಿದೇಶದಲ್ಲಿದ್ದುಕೊಂಡು ಸದಾ ಬೆಂಬಲ ನೀಡುತ್ತಿದ್ದಾರೆ. ಇವರಿಗೆ ಭಂಡಾರಿ ವಾರ್ತೆಯ ಎಲ್ಲಾ ಸದಸ್ಯರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು , ದೇವರು ನಿಮಗೆ ಇನ್ನಷ್ಟು ಆಯುರಾರೋಗ್ಯ , ಐಶ್ವರ್ಯ ನೀಡಿ ಹರಸಲಿ ಎಂದು ಬೇಡುತ್ತೇವೆ
ಭಂಡಾರಿ ವಾರ್ತೆ