January 18, 2025
Sudhakara Bannanje 1
ನ್ನಡ  ಮತ್ತು ತುಳು ಚಿತ್ರರಂಗದ ಅನುಭವಿ ನಿರ್ದೇಶಕ,ನಟ,ನಿರ್ಮಾಪಕರಾಗಿರುವ ಶ್ರೀ ಸುಧಾಕರ ಬನ್ನಂಜೆಯವರಿಗೆ ಸೆಪ್ಟೆಂಬರ್ 21 ರ ಶುಕ್ರವಾರ ಹುಟ್ಟು ಹಬ್ಬದ ಸಂಭ್ರಮ.
ಕಾಲೇಜು ದಿನಗಳಿಂದಲೂ ನಾಟಕ,ಯಕ್ಷಗಾನಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗದ ಸೆಳೆತಕ್ಕೆ ಸಿಲುಕಿ ದಕ್ಷಿಣ ಕನ್ನಡದ ಉಡುಪಿಯಿಂದ ಬೆಂಗಳೂರಿನ ಗಾಂಧಿನಗರಕ್ಕೆ ಬಂದು 1986 ರಲ್ಲಿ ಹೀಗೊಂದು ಪ್ರೇಮಕಥೆ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿ,ಹಲವು ಚಿತ್ರಗಳಲ್ಲಿ ಅಭಿನಯಿಸಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಡ್ತಿ ಹೊಂದಿ ಹಲವಾರು ಯುವ ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ಅವಕಾಶ ಒದಗಿಸಿಕೊಟ್ಟು ಇಂದಿಗೂ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಕ್ರಿಯಾಶೀಲವಾಗಿರುವ ಸುಧಾಕರ ಬನ್ನಂಜೆಯವರು‌ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಂಡಾರಿ ಸಮಾಜದ ಪ್ರಪ್ರಥಮ ನಟ,ನಿರ್ದೇಶಕ ಮತ್ತು ನಿರ್ಮಾಪಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಷ್ಟೇ ಅಲ್ಲದೇ ಹಲವಾರು ಭಂಡಾರಿ ಕುಟುಂಬದ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಕೂಡ.
ನಾಟಕ ರಚನೆ,ನಿರ್ದೇಶನ,ಯಕ್ಷಗಾನ ಅಭಿನಯ,ಸಾಹಿತ್ಯ ರಚನೆ,ಕಿರುತೆರೆ ನಟ,ನಿರ್ದೇಶಕ,ನಿರ್ಮಾಪಕ,ಚಿತ್ರನಟ,ಚಿತ್ರ ನಿರ್ದೇಶಕ,ಚಿತ್ರಸಾಹಿತಿ,ಸಂಭಾಷಣೆಕಾರ,ಕಥೆಗಾರ,ಪತ್ರಕರ್ತ,ಉತ್ತಮ ಬಾಷಣಕಾರ,ಸಂಘಟಕ,ವಾಗ್ಮಿ,ಆದರ್ಶ ವ್ಯಕ್ತಿ…. ನಿಜ ಜೀವನದಲ್ಲಿ ಹೀಗೆ ಎಲ್ಲಾ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವ ಸುಧಾಕರ ಬನ್ನಂಜೆಯವರು‌ ತಿರುಮಲೆಗುತ್ತು ಅಚ್ಚಣ್ಣ ಭಂಡಾರಿ ಮತ್ತು ಬನ್ನಂಜೆ ಸುಶೀಲಾ ಭಂಡಾರಿ ದಂಪತಿಯ ಪುತ್ರ.ಇವರ ಪತ್ನಿ ಶ್ರೀಮತಿ ಮಮತಾ ಸುಧಾಕರ ಬನ್ನಂಜೆ.ಇವರಿಗೆ ಇಬ್ಬರು ಗಂಡು ಮಕ್ಕಳು.ಹಿರಿಯ ಮಗ ಪ್ರಾರ್ಥನ್ ಬನ್ನಂಜೆ,ಕಿರಿಯ ಮಗ ಪ್ರೇರಣ್ ಬನ್ನಂಜೆ.ಮಕ್ಕಳಿಬ್ಬರೂ ಈಗಾಗಲೇ ತಂದೆಯಂತೆ ಚಿತ್ರರಂಗದೆಡೆಗೆ ಮುಖ ಮಾಡಿದ್ದಾರೆ.ಭವಿಷ್ಯದಲ್ಲಿ ಒಳ್ಳೆಯ ನಟರಾಗುವ ಮುನ್ಸೂಚನೆ ನೀಡಿದ್ದಾರೆ.
 ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಸುಧಾಕರ ಬನ್ನಂಜೆಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ,ಅವರ ಮುಂದಿನ ಮಹತ್ವಾಕಾಂಕ್ಷೆಯ ಕನ್ನಡ ಚಿತ್ರ “ರಣರಣಕ” ಮತ್ತು ತುಳು ಭಾಷೆಯ ಚಿತ್ರ “ಗಂಟ್ ಕಲ್ವೆರ್” ಅದ್ಭುತ ಯಶಸ್ಸನ್ನು ಕಾಣಲಿಎಂದು ಹಾರೈಸುತ್ತಾ,ಭಂಡಾರಿವಾರ್ತೆ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ.
ಭಂಡಾರಿವಾರ್ತೆ

Leave a Reply

Your email address will not be published. Required fields are marked *