January 18, 2025
Vaishak bhandary mijaru

ಮೂಡಬಿದಿರೆ ಮಿಜಾರು ಗ್ರಾಮದ ಶ್ರೀ ಯಶವಂತ ಭಂಡಾರಿ ಮತ್ತು ಶ್ರೀಮತಿ ಸವಿತಾ ಯಶವಂತ ಭಂಡಾರಿ ದಂಪತಿಯ ಪುತ್ರ ಶ್ರೀ ವೈಶಾಖ್ ಭಂಡಾರಿ ಯವರಿಗೆ ಸೆಪ್ಟೆಂಬರ್‌ 12 ರ ಬುಧವಾರ ಹದಿನೇಳನೆಯ ವರ್ಷದ ಹುಟ್ಟು ಹಬ್ಬದ ಸಂಭ್ರಮ. 

ಮೂಡುಬಿದಿರೆಯ ರೋಟರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈಶಾಖ್ ಅತೀ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆ ಮೈಗೂಡಿಸಿಕೊಂಡಿರುವ ಪ್ರತಿಭಾವಂತ. ಇವರು ಭಂಡಾರಿವಾರ್ತೆಗೆ ಈಗಾಗಲೇ ಹಲವು ಲೇಖನಗಳನ್ನು ಬರೆದಿದ್ದಾರೆ. ಮೂಡಬಿದಿರೆಯ “ಟೈಮ್ಸ್ ಆಫ್ ಬೆದ್ರ” ಪತ್ರಿಕೆಗೂ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.

ಬರವಣಿಗೆಯ ಜೊತೆಗೆ ಛಾಯಾಗ್ರಹಣದಲ್ಲಿಯೂ ಆಸಕ್ತಿ ಹೊಂದಿರುವ ಇವರು ಆಗಸ್ಟ್ ತಿಂಗಳಲ್ಲಿ ನಡೆದ “Milagros College” ನ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಹಲವಾರು ಪ್ರತಿಭೆಗಳ ಸಂಗಮದಂತಿರುವ ವೈಶಾಖ್ ಭಂಡಾರಿ ಮೀಜಾರು ಇನ್ನಷ್ಟು ಸಾಧನೆಗಳನ್ನು ಮಾಡಲಿ, ತನ್ಮೂಲಕ ಭಂಡಾರಿ ಸಮಾಜಕ್ಕೆ ಹೆಚ್ಚಿನ ಗೌರವ ಘನತೆ ತಂದುಕೊಡಲಿ ಎಂದು ಹಾರೈಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *