January 19, 2025
Vedith-4
ಮುಂಬಯಿಯ ಚೆಂಬೂರ್ ನಲ್ಲಿ ಶ್ರೀ ಲಕ್ಷ್ಮಣ್ ಭಂಡಾರಿ ಮತ್ತು ಶ್ರೀಮತಿ ಯಶೋಧ ಲಕ್ಷ್ಮಣ್ ಭಂಡಾರಿ ದಂಪತಿಯು ತಮ್ಮ ಪುತ್ರ ಮಾಸ್ಟರ್ ವೇದಿತ್ ಲಕ್ಷ್ಮಣ್ ಭಂಡಾರಿಯ ಐದನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 15 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ವೇದಿತ್ ನಿಗೆ ಅವರ ತಂದೆ ತಾಯಿ, ಅಣ್ಣ ಮಾಸ್ಟರ್ ಪ್ರಣೀತ್ ಭಂಡಾರಿ, ಮಾವ ಮಾಮಿ, ಚಿಕ್ಕಪ್ಪ ಚಿಕ್ಕಮ್ಮ, ಪುಟಾಣಿಗಳಾದ ಜೀವಿತ, ಕೌಶಿಕ್, ಕಶ್ವಿ, ನೇಹಾಲ್, ನೈಷಿತ ಮತ್ತು ಪಕ್ಷಿಕೆರೆಯ ಕುಟುಂಬಸ್ಥರು , ಹಿತೈಷಿಗಳು ಶುಭ ಹಾರೈಸಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ವೇದಿತ್ ನಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *