
ಭಂಡಾರಿವಾರ್ತೆಯ ಓದುಗರಿಗೆ “ಜಿಡ್ಡು ಪ್ರವಚನ” ದ ಮೂಲಕ ಚಿರಪರಿಚಿತರಾಗಿರುವ ಕುಂದಾಪುರದ ಶ್ರೀ ವೆಂಕಟೇಶ್ ಭಂಡಾರಿಯವರಿಗೆ ಸೆಪ್ಟೆಂಬರ್ 13 ರ ಗುರುವಾರ ಹುಟ್ಟು ಹಬ್ಬದ ಸಂಭ್ರಮ.

“ಕಣಬ್ರಹ್ಮವೆಂಕಿ” ಎಂಬ ಅಂಕಿತನಾಮದಿಂದ ಜನಪ್ರಿಯರಾದವರು. ಹವ್ಯಾಸಿ ಬರಹಗಾರರಾದ ಇವರು ತಮ್ಮ ಲೇಖನಗಳಲ್ಲಿ ಮಾನವನ ಸಾಮಾಜಿಕ ನೆಲಗಟ್ಟು, ಮಾನವೀಯ ಮೌಲ್ಯಗಳ ಮೊನಚು ಬರಹಗಳಿಂದ ಓದುಗರನ್ನು ಚಿಂತನೆಗೆ ದೂಡುವುದರಲ್ಲಿ ಸಿದ್ಧಹಸ್ತರು.


ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತ್ನಿ ಶ್ರೀಮತಿ ತುಳಸಿ ವೆಂಕಟೇಶ್ ಭಂಡಾರಿ, ಮಗಳು ಶ್ರೀಬ್ರಾಹ್ಮಿ, ಅವರ ಬಂಧುಗಳು, ಆತ್ಮೀಯರು, ಸ್ನೇಹಿತರು ಅವರಿಗೆ ಶುಭ ಹಾರೈಸುತ್ತಿದ್ದಾರೆ.