
ಮಂಗಳೂರು ತಾಲೂಕು ಹರೇಕಳ ಗ್ರಾಮದ ಆಲಡ್ಕ ರಾಘವೇಂದ್ರ ನಿಲಯ ಶ್ರೀಮತಿ ಹೇಮಲತಾ ಮತ್ತು ಶ್ರೀ ಶೇಖರ್ ಭಂಡಾರಿ ದಂಪತಿಯ ಪುತ್ರಿ ಹಾಗೂ ಮಂಗಳೂರು ವಿಕಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ

ಚಿ.ಸೌ. ಶ್ರುತಿ
ಬಂಟ್ವಾಳ ತಾಲೂಕು ಕಾವಳ ಮೂಡೂರು ಗ್ರಾಮದ ನಡುಪೀರ್ಯ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ನಾರಾಯಣ ದಂಪತಿಯ ಪುತ್ರ ಹಾಗೂ ಭಾರತೀಯ ಭೂಸೇನೆ ಮಂಗಳೂರಿನ ಕೂಳೂರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ

ಚಿ.ಕಿಶೋರ್
ಇವರ ವಿವಾಹವು ಬಂಟ್ವಾಳದ ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಅಕ್ಟೋಬರ್ 13 ನೇ ಸೋಮವಾರದಂದು ಬಂದು ಮಿತ್ರರು ಕುಟುಂಬಸ್ಥರು ಸಹೋದ್ಯೋಗಿಗಳ ಶುಭಾಶಯದೊಂದಿಗೆ ಬಹಳ ವಿಜೃಂಭಣೆಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.





ನವ ದಂಪತಿಗಳ ದಾಂಪತ್ಯ ಜೀವನವು ಸದಾ ಕಾಲ ಸುಖ ಶಾಂತಿ ನೆಮ್ಮದಿಯ ಆರೋಗ್ಯವಂತ ಬದುಕನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.