ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಖರ ಬರವಣಿಗೆಗಳ ಮೂಲಕ,ಜಡ್ಡುಗಟ್ಟಿದ ಹಿಂದುತ್ವದ ಸಿದ್ದಾಂತಕ್ಕೆ ತಮ್ಮ ಮೊನಚು ಲೇಖನಗಳಿಂದ ಹೊಳಪು ನೀಡುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಲೇಖಕ,ಬರಹಗಾರ ಶ್ರೀ ಹರೀಶ್ ಭಂಡಾರಿ ನಾರ್ವೆಯವರಿಗೆ ಜುಲೈ 11 ಬುಧವಾರ ಹುಟ್ಟು ಹಬ್ಬದ ಸಂಭ್ರಮ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದವರಾದ ಹರೀಶ್ ಪದವಿ ಶಿಕ್ಷಣ ಪೂರೈಸಿ ಶುದ್ಧ ಕುಡಿಯುವ ನೀರು, ಪ್ಯಾಕೇಜ್ಡ್ ಮಿನರಲ್ ವಾಟರ್ ಸರಬರಾಜು ವ್ಯವಹಾರ ನಿರ್ವಹಿಸಿಕೊಂಡಿದ್ದರೂ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಭಂಡಾರಿವಾರ್ತೆಗಾಗಿ ಲೇಖನಗಳನ್ನು ಬರೆದು ತಮ್ಮದೇ ಆದ ಓದುಗಗರ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಹುಟ್ಟು ಹಬ್ಬವನ್ನಾಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ ಶ್ರೀ ವಾಸು ಭಂಡಾರಿ, ತಾಯಿ ಶ್ರೀಮತಿ ಜಯಶ್ರೀ ವಾಸು ಭಂಡಾರಿ, ಸಹೋದರ ಶ್ರೀ ರಾಜೇಶ್ ಭಂಡಾರಿ, ಸಹೋದರಿ ಶ್ರೀಮತಿ ಅಶ್ವಿನಿ ರಾಕೇಶ್ ಭಂಡಾರಿ, ನಾರ್ವೆ ಹಾಗೂ ಬಾರ್ಕೂರು ಭಂಡಾರಿ ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರು ಶುಭ ಹಾರೈಸುತ್ತಿದ್ದಾರೆ.
ಇಪ್ಪತ್ತೆಂಟರ ಹರೆಯದಲ್ಲಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಬರವಣಿಗೆ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿರುವ ನಮ್ಮ ಭಂಡಾರಿ ಸಮಾಜದ ಯುವಕ ಶ್ರೀ ಹರೀಶ್ ಭಂಡಾರಿ ನಾರ್ವೆಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ, ಅವರು ಜೀವನದಲ್ಲಿ ಯಶಸ್ಸು ಅಭಿವೃದ್ಧಿ ಹೊಂದಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”