ಯುಗಗಳೇ ಕಳೆದರೂ ಯುಗಾದಿಯ ಕಂಪು ಎಂದೂ ಮಾಸದು,
ಹಸಿರಿನಿಂದ ಕೂಡಿರುವ ಮರಗಳ ಅಂದ ಎಂದಿಗೂ ಹೊಸದು…
ಸಿಹಿ ಕಹಿಯ ಮಿಶ್ರಣವಿಹುವುದು ಬೇವು ಬೆಲ್ಲದೊಳಗೆ,
ನೋವು ನಲಿವಿನ ಬಾಂಧವ್ಯವಿಹುದು ಸಂಸಾರ ಬಂಧನದೊಳಗೆ….
ವರುಣನ ಕೃಪೆಯಿರೆ ಮರ ಚಿಗುರುವುದು, ಹೊಂಬಣ್ಣದ
ಕಾಂತಿಯೊಳಗೂಡಿ ಪ್ರಕಾಶಿಸುವುದು,ಹೂವು ಕಂಪು ಸೂಸುವುದು…
ಕತ್ತಲ ಕೂಪದಲ್ಲಿ ಮುಳುಗಿರುವವರಿಗೆ ಬೆಳಕ ಹಾದಿಯ ತೋರಿಸಿ ,
ಹೊಸತನದ ಸವಿಯ ನೀಡುವುದೇ ಯುಗಾದಿ ಹಬ್ಬ ಆಚರಿಸಿ…
ಕುಟುಂಬವೆಲ್ಲ ಸೇರಿ ಹಬ್ಬದಲ್ಲಿ ಸಿಹಿಯುಂಡು,
ಬೆಲ್ಲದಂತೆ ಎಲ್ಲರಲ್ಲೂ ನಗೆಯ ಹರಿಸುವುದೇ ಯುಗಾದಿ ….
ಹೊಸದರ ಆಗಮನ ವಾಯಿತೆಂದು ಹಳೆಯದರ ನಿರ್ಲಕ್ಷ್ಯ ಬೇಡ,
ಕಹಿ ಎಂಬ ನೆನಪು ಮರೆತು, ಸಿಹಿಯಾದ ಯುಗಾದಿ ಪ್ರತಿ ವರ್ಷವೂ ಆಚರಿಸುವ…