
ಶಿರಾಳಕೊಪ್ಪದ ಪ್ರಭಾಕರ ಭಂಡಾರಿ ಮತ್ತು ಅನುಷಾ ಪ್ರಭಾಕರ್ ಭಂಡಾರಿ ದಂಪತಿಯು ತಮ್ಮ ದ್ವಿತೀಯ ಪುತ್ರಿ ಬೇಬಿ ಅಶ್ವಿತಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಡಿಸೆಂಬರ್ 5,2018 ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.




ಈ ಶುಭ ಸಂದರ್ಭದಲ್ಲಿ ಬೇಬಿ ಅಶ್ವಿತಾಳಿಗೆ ತಂದೆ, ತಾಯಿ, ಅಜ್ಜಿ ರತ್ನ ಮಂಜುನಾಥ್ ಭಂಡಾರಿ,ಅಕ್ಕ ಅನ್ವಿತಾ ಪ್ರಭಾಕರ್, ಮಾವಂದಿರು, ದೊಡ್ಡಪ್ಪ ದೊಡ್ಡಮ್ಮಂದಿರು, ಚಿಕ್ಕಪ್ಪ ಚಿಕ್ಕಮ್ಮಂದಿರು ಮತ್ತು ಸಹೋದರ ಸಹೋದರಿಯರಾದ ನಿಖಿಲ್, ನಿರೀಕ್ಷ, ವೈಷ್ಣವಿ, ಅದಿತಿ, ಭುವನ್, ಭಾವನ್, ಭೂಮಿಕಾ, ದಿಗಂತ್, ದಿಷಿತಾ ಹಾಗೂ ಶಿರಾಳಕೊಪ್ಪ, ಆಯನೂರು ಭಂಡಾರಿ ಬಂಧುಗಳು ಶುಭ ಹಾರೈಸಿದರು.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬೇಬಿ ಅಶ್ವಿತಾಳಿಗೆ ಶ್ರೀ ದೇವರು ಆಯುರಾರೋಗ್ಯ ದಯಪಾಲಿಸಿ, ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ.